Get Updates
Get notified of breaking news, exclusive insights, and must-see stories!

ಈ ಮಹಿಳೆ ಓದಿದ್ದು 0.. ಮಾಡಿದ್ದು ಇಡೀ ರಾಜ್ಯವೇ ಕೊಂಡಾಡುವಂತಹ ಅದ್ಭುತ ಸಾಧನೆ

ಜಗಳೂರು, ನವೆಂಬರ್, 05: ಈಗಿನ ಕಾಲದಲ್ಲಿ ಎರೆಡ್ಮೂರು ಪದವಿ ಪಡೆದರೂ ಬಹುತೇಕ ಮಂದಿಗೆ ಜಾನಪದ ಕಲೆ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಆದರೆ, ಇಲ್ಲೊಬ್ಬ ಗ್ರಾಮೀಣ ಮಹಿಳೆಯೊಬ್ಬರು ಯಾವುದೇ ವಿದ್ಯಾಭ್ಯಾಸ ಮಾಡಿಲ್ಲ, ಸಂಗೀತ ಶಾಲೆಗೂ ಹೋಗಿಲ್ಲ. ಆದರೂ ಜಾನಪದ ಗೀತೆಗಳನ್ನು ಮೈಗೂಡಿಸಿಕೊಂಡು ಈ ಮೂಲಕ ಇದೀಗ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದು ಎಲ್ಲಾರಿಗೂ ಮಾದರಿಯಾಗಿದ್ದಾರೆ. ಹಾಗಾದರೆ ಇವರ ಹಿನ್ನೆಲೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಜಗಳೂರು ತಾಲ್ಲೂಕು ಬಯಲು ಸೀಮೆಯಾಗಿದ್ದು, ಇಲ್ಲಿ ವಿವಿಧ ಬುಡಕಟ್ಟು ಜನಾಂಗದವರನ್ನು ಕಾಣಬಹುದಾಗಿದೆ. ಅದರಲ್ಲೂ ಬಂಜಾರ ಬುಡಕಟ್ಟು ಹಾಗೂ ಕಾಡುಗೊಲ್ಲ ಬುಡಕಟ್ಟು ಆಚರಣೆಗಳ ಪ್ರಧಾನ ನೆಲೆಯಾಗಿದೆ. ಇದೀಗ ಇದೇ ತಾಲ್ಲೂಕಿನ ತೋರಣಗಟ್ಟೆ ಗ್ರಾಮದ ಕಾಟಮ್ಮ ಎಂಬ ಮಹಿಳೆ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದು ಗ್ರಾಮದ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

State level great Achievement in Folk Art by Thoranagatte village Woman

ಜಾನಪದ ಕಲೆಯನ್ನು ಮೈಗೂಡಿಕೊಳ್ಳಬೇಕೆಂದರೆ ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಶ್ರಮ, ತರಬೇತಿ ಬೇಕಾಗುತ್ತದೆ. ಆದರೆ, ಕಾಟಮ್ಮ ಮಾತ್ರ ಯಾವುದೇ ತರಬೇತಿ ಇಲ್ಲದೆ, ತನ್ನ ತಾಯಿ ಹಾಡುತ್ತಿದ್ದ ಸೋಬಾನೆ ಪದಗಳನ್ನು ಕೇಳುತ್ತಾ ಅವುಗಳನ್ನು ಹಾಗೆಯೇ ಕಲಿತು ಮೈಗೂಡಿಸಿಕೊಂಡು ಬಂದವರಾಗಿದ್ದಾರೆ. ಈಗಲೂ ಸಹ ಜಗಳೂರು ತಾಲ್ಲೂಕು ಸೇರಿದಂತೆ ವಿವಿಧ ತಾಲ್ಲೂಕುಗಳ ಗ್ರಾಮಗಳಲ್ಲಿ ಯಾವುದೇ ಜಾತ್ರೆ, ಮದುವೆ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಲ್ಪನೂ ತಪ್ಪದೇ ಕಿವಿಗೆ ಇಂಪು ನೀಡುವಂತೆ ಪದಗಳನ್ನು ಹಾಡುತ್ತಿದ್ದಾರೆ.

ಕಾಟಮ್ಮನವರ ಅದ್ಭುತ ಕಲೆಗಳಿವು: ಅಷ್ಟೇ ಅಲ್ಲದೆ, ಕಾಟಮ್ಮ ಅವರು ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದಂತಹ ಇನ್ನೂ ಮುಂತಾದ ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಮದುವೆ, ದೇವರ ಉತ್ಸವ, ಪರುವು, ಜಾತ್ರೆಗಳಲ್ಲಿ ಜನಪದ ಹಾಡು, ಹಸೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಎಲೆಮರೆ ಕಾಯಿಯಂತಿರುವ ಹಳ್ಳಿಗಾಡಿನ ಹಲವು ಪ್ರತಿಭೆಗಳು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಹಾಡುಗಾರಿಕೆ ಸೇರಿದಂತೆ ಜನಪದ ಕಲೆಯನ್ನು ಉಳಿಸಿ, ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಮೂಲಕ ತಮ್ಮ ಗ್ರಾಮ ಅಷ್ಟೇ ಅಲ್ಲದೇ, ಈ ಮೂಲಕ ಇಡೀ ನಾಡಿನ ಘನತೆಯನ್ನು ಎತ್ತಹಿಡಿಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

ಇಂತಹ ಅದ್ಭುತ ಪ್ರತಿಭೆಯಾಗಿರುವ ತಾಲ್ಲೂಕಿನ ತೋರಣಗಟ್ಟೆ ಗ್ರಾಮದ ಕಾಟಮ್ಮ ಅವರಿಗೆ ಪ್ರಸಕ್ತ ಸಾಲಿನ ಸಾಲಿನ ಕರ್ನಾಟಕ ಜಾನಪದ ಆಕಾಡೆಮಿಯ ಪ್ರಶಸ್ತಿ ಒಲಿದುಬಂದಿದೆ. ಈಗಿನ ಕಾಲದಲ್ಲಿ 10 ರೂಪಾಯಿ ಸಹಾಯ ಮಾಡಿ 1,000 ಪ್ರಚಾರ ಗಿಟ್ಟಿಸಿಕೊಳ್ಳುವವರನ್ನು ನಾವು ಪ್ರತಿನಿತ್ಯ ಕಾಣುತ್ತಲೇ ಇರುತ್ತೇವೆ. ಇಂತಹವರ ನಡುವೆಯೂ ಯಾವುದೇ ಪ್ರಚಾರದ ಹಂಗಿಲ್ಲದೆ, 4 ದಶಕಗಳಿಂದ ಸೋಬಾನೆ ಪದ, ತತ್ವಪದ ಮತ್ತು ದೇವರ ಪದಗಳ ಮೂಲಕ ಜನಪದ ಇತಿಹಾಸವನ್ನು ಕಾಪಾಡಿಕೊಂಡು ಬಂದ ಕೀರ್ತಿ ಕಾಟಮ್ಮ ಅವರಿಗೆ ಸಲ್ಲುತ್ತದೆ.

ಸಾಧಕಿ ಕಾಟಮ್ಮ ಅವರಿಗೆ ಈ ಕಲೆ ಬಂದಿದ್ದೇಗೆ.?: ಅತ್ಯದ್ಭುತ ಸಾಧಕಿಯಾಗಿರುವ ಕಾಟಮ್ಮ ಅವರು ತಮ್ಮ ತಾಯಿ ಗೌರಮ್ಮ ಅವರಿಂದ ಬಾಲ್ಯದಲ್ಲೇ ಬಳುವಳಿಯಾಗಿ ಬಂದ ಹಾಡುಗಾರಿಕೆಯನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ಪತಿ ಬಾಲಪ್ಪ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಊರಿನ ಹೊಲ-ಗದ್ದೆಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ, ಊರ ದೇವರ ಪದಗಳನ್ನು ಹಾಡುತ್ತಾ ಈ ಕಲೆಯ ಪಯಣ ಆರಂಭಿಸಿದರು ಎನ್ನಲಾಗುತ್ತಿದೆ.

ಸಹೋದರಿ ಶಾಂತಾ ವೀರಮ್ಮ, ಬಂಧುಗಳಾದ ಬಾಲಮ್ಮ, ಬಡಮ್ಮ ಅವರ ತಂಡ ಕಟ್ಟಿಕೊಂಡು ಮಧ್ಯ ಕರ್ನಾಟಕದ ಪ್ರಸಿದ್ಧ ಜಾನಪದ ಸಾಂಸ್ಕೃತಿಕ ವೀರರಾದ ಕಾಟಣ್ಣ, ದೊಡ್ಡಣ್ಣ, ಬಡಣ್ಣ, ಚಿಕ್ಕಣ್ಣ ಕಾವ್ಯಗಳನ್ನು ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಎಷ್ಟೇ ದಿನಗಳಾದರೂ ಮರೆಯದೇ ಸರಳವಾಗಿ ಹಾಡುತ್ತಾರೆ. ವಿಶೇಷ ಅಂದ್ರೆ, ಈ ಭಾಗದಲ್ಲಿ ಮಳೆ ಮಲ್ಲಜ್ಜ ಎಂದೇ ಆರಾಧನೆಗೆ ಒಳಗಾಗಿರುವ ಅವಧೂತ ಪರಂಪರೆಯ ಮೆಲ್ಲಜ್ಜನ ಬಗ್ಗೆ ಕಾಟಮ್ಮ ಹಾಡುವ ಪದಗಳು ಹಾಗೆಯೇ ಅಚ್ಚಹಸಿನಂತೆ ಉಳಿದಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾಧಕಿ ಕಾಟಮ್ಮ ಅವರು, "ನಮ್ಮ ಅಮ್ಮ ಗೌರಮ್ಮ ದೊಡ್ಡ ಹಾಡುಗಾರ್ತಿಯಾಗಿದ್ದರು. ಬಾಲ್ಯದಲ್ಲೇ ನನ್ನನ್ನು ಜಾತ್ರೆ, ಪರವು ಮುಂತಾದ ಸಮಾರಂಭಗಳಿಗೆ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಇಡೀ ರಾತ್ರಿ ಸಾವಿರಾರು ಹಾಡುಗಳನ್ನು ನೀರು ಕುಡುದಷ್ಟೇ ಸುಲಭವಾಗಿ ಹಾಡುತ್ತಿದ್ದರು. ಅಮ್ಮನಿಂದ ನನಗೆ ಈ ಕಲೆ ಬಂದಿದೆ. ಮೆಲ್ಲಜ್ಜ ಸೇರಿದಂತೆ ಅನೇಕ ಸಂತರ ಲೆಕ್ಕವಿಲ್ಲದಷ್ಟು ಹಾಡುಗಳನ್ನು ಇಂದಿಗೂ ಇಷ್ಟಪಟ್ಟು ಹಾಡುತ್ತಾ ಬಂದಿದ್ದೇನೆ," ಎಂದು ಹೇಳಿದರು.

ಮೆಲ್ಲಜ್ಜ ಒಂದೂವರೇ ಶತಮಾನದ ಹಿಂದೆ ತಾಲ್ಲೂಕಿನ ತೋರಣಗಟ್ಟೆಯಲ್ಲಿ ಬದುಕಿ ಬಾಳಿದ ವ್ಯಕ್ತಿ. ತನ್ನ ವಿಶಿಷ್ಟ ಆಧ್ಯಾತ್ಮಿಕ ಚಿಂತನೆಯ ಅವಧೂತನಾಗಿ, ಹವಾಮಾನ ತಜ್ಞನಾಗಿ ಮಳೆ ಮೆಲ್ಲಜ್ಜ ಎಂದು ಪ್ರಸಿದ್ಧಿ ಪಡೆದು ಆರಾಧನೆಗೆ ಒಳಗಾದವರಾಗಿದ್ದಾರೆ. ಅವರ ಬಗ್ಗೆ ಕಾಟಮ್ಮ ಕಥನ ಕಟ್ಟಿ ಹಾಡುವ ಕಲೆಗಾರಿಕೆಯನ್ನು ಮೈಗೂಡಿಸಿಕೊಂಡಿದ್ದಾರೆ.

ಅಲ್ಲದೆ, ಯಾವುದೇ ಮದುವೆ ಸಮಾರಂಭಗಳಲ್ಲಿ ಹಸೆ ಚಿತ್ರವನ್ನು ಅದ್ಭೂತ ಬಿಡಿಸುತ್ತಾ ಬಂದಿದ್ದಾರೆ ಕಾಟಮ್ಮ. ಇವರ ಹಸೆ ಹೊಯ್ದರೆ ಸಾಕು ಇದು ಪಕ್ಕಾ ಕಾಟಮ್ಮ ಅವರೇ ಹೊಯ್ದಿರುವುದು ಎಂದು ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಹಸೆ ಬಿಡಿಸುವುದರಲ್ಲು ಪ್ರಸಿದ್ಧಿಯಾಗಿದ್ದಾರೆ ಕಾಟಮ್ಮ.

ಕಾಟಮ್ಮ ಬಿಡಿಸುತ್ತಿದ್ದ ಹಸೆಯ ವಿಧಾನಗಳು: ಕಾಟಮ್ಮ ಅವರು ಒಳ್ಳಕ್ಕಿ ಹಸೆ, ದೇವರ ಹಸೆ, ಬೂವದ ಹಸೆ, ಅರಿಣಿ ಹಸೆ, ಹಂದ್ರದ ಹಸೆ ಮುಂತಾದ ಹಸೆಗಳನ್ನು ಕರಿಗಂಬಳಿ ಹಾಸು ಮೇಲೆ ಬಿಡಿಸುತ್ತಾರೆ. ಈ ಕಲೆ ಬರಬೇಕೆಂದರೆ ಅಷ್ಟು ಸುಲಭದ ಮಾತಲ್ಲ. ಅಷ್ಟರ ಮಟ್ಟಿಗೆ ಕಾಟಮ್ಮ ಅವರು ಹಸೆಗಳನ್ನು ಬಿಡಿಸುವುದು ಜೊತೆಗೆ ಜಾನಪದ ಹಾಡುಗಳನ್ನು ಹಾಡುವುದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ಮೆಲ್ಲಜ್ಜನ ಯಾರು.?: ಪವಾಡ ಪುರುಷ ಅಂತಲೇ ಮೆಲ್ಲಜ್ಜ ಹೆಸರುವಾಸಿಯಾಗಿದ್ದಾರೆ. ಇನ್ನು ಗ್ರಾಮದಲ್ಲಿ ಶ್ರೀ ಮೆಲ್ಲೇಶ್ವರ ದೇವಸ್ಥಾನವಿದ್ದು, ಇಲ್ಲಿಗೆ ಪ್ರತಿ ಸೋಮವಾರ ಸಾವಿರಾರು ಭಕ್ತರು ಭೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತಾರೆ. ಯಾಕೆಂದ್ರೆ ಮೆಲ್ಲಜ್ಜ ಅಂದ್ರೆ ಸಾಕು ಮೊದಲಿನಿಂದಲೂ ಇಲ್ಲಿನ ಜನರ ಕಷ್ಟಗಳಿಗೆ ಮಿಡಿಯುವ ಪವಾಡ ಪುರುಷರಾಗಿದ್ದಾರೆ ಎನ್ನುವ ಮಾತುಗಳಿವೆ. ಅದರಲ್ಲೂ ಮೆಲ್ಲಜ್ಜನ ಬಳಿ ಬಂದು ಮಳೆಗಾಗಿ ಬೇಡಿಕೊಂಡರೆ ಮಳೆಯಾಗುತ್ತದೆ ಎನ್ನುವುದು ಈ ಭಾಗದ ಜನರ ನಂಬಿಕೆ ಮೊದಲಿನಿಂದಲೂ ನಡೆದುಕೊಂಡುಬಂದಿದೆ.

ಮೊದಲಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಯಾಕೆಂದ್ರೆ, ಬೇಡಿಕೊಂಡ ಇಷ್ಟಾರ್ಥಗಳು ಈಡೇರಿರುವ ಉದಾಹರಣೆಗಳು ಇವೆ. ಇದರಿಂದ ಬರೀ ಜಗಳೂರು ತಾಲ್ಲೂಕು ಮಾತ್ರ ಅಲ್ಲದೆ, ದಾವಣಗೆರೆ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳ ಜನರು ಇಲ್ಲಿಗೆ ಬಂದು ವಿಶೇಷ ಪೂಜೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡುವುದು ಈಗಲೂ ಮುಂದುವರೆದುಕೊಂಡು ಬಂದಿದೆ. ಆದರೆ, ಅಷ್ಟೇ ಕಟ್ಟುನಿಟ್ಟಾಗಿ ನಡೆದುಕೊಂಡರೇ, ಎಂಥವರಿಗೂ ಸ್ವಾಮಿ ಮೆಲಜ್ಜ ಒಲಿಯುತ್ತಾರೆ ಎನ್ನುವ ಮಾತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+