ಜಿಲ್ಲೆಗಳ ವಿಮಾನ ನಿಲ್ದಾಣ ಮೇಲ್ದರ್ಜೆ ಯೋಜನೆ ನೆನೆಗುದಿಗೆ
ಸುಮಾರು 50ರಿಂದ 100 ಕೋಟಿ ರು. ವೆಚ್ಚದಲ್ಲಿ ಚಿಕ್ಕಮಗಳೂರು, ಕೊಡಗು, ಕಾರವಾರ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿತ್ತು. ಆದರೆ, ಈ ಯೋಜನೆಗೆ ಕೇಂದ್ರ ಸಮ್ಮತಿಸಿಲ್ಲ.
ಬೆಂಗಳೂರು, ಮೇ 24: ಪ್ರಮುಖ ಜಿಲ್ಲೆಗಳಲ್ಲಿರುವ ರನ್ ವೇಗಳನ್ನು ಮಧ್ಯಮ ಸೌಲಭ್ಯಗಳ ವಿಮಾನ ನಿಲ್ದಾಣಗಳನ್ನಾಗಿ ಅಭಿವೃದ್ಧಿಗೊಳಿಸಲು ಆಲೋಚಿಸಿದ್ದ ರಾಜ್ಯ ಸರ್ಕಾರದ ಯೋಜನೆ ನೆನೆಗುದಿಗೆ ಬಿದ್ದಿದೆ.
ಯೋಜನೆಯ ಮೊದಲ ಹೆಜ್ಜೆಯಾಗಿ, ಕಾರವಾರ, ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿರುವ ರನ್ ವೇಗಳನ್ನು ಅಭಿವೃದ್ಧಿಪಡಿಸುವುದಾಗಿ 2017-18ರ ರಾಜ್ಯ ಬಜೆಟ್ ನಲ್ಲಿ ಹಣಕಾಸು ಇಲಾಖೆಯನ್ನೂ ತಮ್ಮಲ್ಲೇ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಈ ನಗರಗಳಲ್ಲಿನ ಅಲ್ಪ ಉಪಯೋಗದ ಈ ರನ್ ವೇಗಳನ್ನು 50ರಿಂದ 100 ಕೋಟಿ ರು. ವೆಚ್ಛದಲ್ಲಿ ಮೇಲ್ದರ್ಜೆಗೆ ಏರಿಸುವುದಾಗಿ ಹೇಳಿದ್ದರು.
ಆದರೆ, ಈ ಯೋಜನೆಯು ಕೇಂದ್ರ ಸರ್ಕಾರದ ಹೂಡಿಕೆಯ ಜತೆಗೆ ಅನುಷ್ಠಾನಗೊಳ್ಳುವುದಾಗಿ ಸಿಎಂ ತಿಳಿಸಿದ್ದರು. ಆದರೆ, ಈ ಹೂಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ.

ಇದಕ್ಕೆ ಕಾರಣ, ಅಲ್ಪ ಖರ್ಚಿನಲ್ಲಿ ರನ್ ವೇಗಳ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರ ಹಿಂದೇಟು ಹಾಕಿದೆ. ಹಾಗಾಗಿ, ಹೂಡಿಕೆಯ ಬಗ್ಗೆಯೂ ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಈ ಕಾರಣಕ್ಕಾಗಿಯೇ ಯೋಜನೆಯ ಫೈಲುಗಳು ಧೂಳು ತಿನ್ನುವಂತಾಗಿದೆ.












Click it and Unblock the Notifications