ರಾಜ್ಯದ ವಿದ್ಯುತ್ ಬಳಕೆದಾರರಿಗೆ ಗುಡ್​​ನ್ಯೂಸ್: ವಿದ್ಯುತ್ ದರ ಇಳಿಕೆ ಮಾಡಿ ಸರ್ಕಾರ ಆದೇಶ

ಬೆಂಗಳೂರು, ಫೆಬ್ರವರಿ 28: ಲೋಕಸಭೆ ಚುನಾವಣೆ ಬೆನ್ನಲ್ಲೇ ಗ್ರಾಹಕರಿಗೆ ಬಂಪರ್​ ಕೊಡುಗೆ ನೀಡಿದೆ. ರಾಜ್ಯದ ವಿದ್ಯುತ್ ಬಳಕೆದಾರರಿಗೆ ರಾಜ್ಯ ಸರ್ಕಾರ ‌ ಗುಡ್​​ನ್ಯೂಸ್ ನೀಡಿದ್ದು, ವಿದ್ಯುತ್ ದರ ಇಳಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಹೊಸ ದರ ಪರಿಷ್ಕರಣೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ದರ ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. 100 ಯೂನಿಟ್​ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆದಾರರಿಗೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯೂನಿಟ್​ಗೆ 40 ಪೈಸೆ ಕಡಿತ ಮಾಡಲಾಗಿದ್ದು, ಖಾಸಗಿ ಏತ ನೀರಾವರಿ ಬಳಕೆದಾರರಿಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. 100 ಯೂನಿಟ್​ಗಿಂತ ಹೆಚ್ಚು ಬಳಸುವವರಿಗೆ ಮಾತ್ರ ಹೊಸ ದರ ಮಾರ್ಚ್​ 1ರಿಂದಲೇ ಅನ್ವಯವಾಗಲಿದೆ.

State Government Order To Reduce Electricity Rates

ಹೆಚ್​ಟಿ ಕಮರ್ಷಿಯಲ್ಲಿ ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 1 ರೂ. 25 ಪೈಸೆ ಕಡಿಮೆ ಮಾಡಲಾಗಿದೆ. ಅಂದರೆ ಬೇಡಿಕೆಯ ಶುಲ್ಕಗಳ ಪ್ರತಿ ಕೆವಿಎಗೆ (ಕಿಲೋವೋಲ್ಟ್‌ ಆಂಪಿಯರ್‌) ರೂ.10 ರಷ್ಟು ಕಡಿಮೆ ಮಾಡಲಾಗಿದೆ. ಇನ್ನೂ ಹೆಚ್​ಟಿ ಇಂಡಸ್ಟ್ರಿಯಲ್ ಯಲ್ಲಿ ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಬೇಡಿಕೆಯ ಶುಲ್ಕಗಳ ಪ್ರತಿ ಕೆವಿಎಗೆ ರೂ.10 ಕಡಿಮೆಯಾಗಿದೆ. ವಾಣಿಜ್ಯ ಕೈಗಾರಿಕಾ ಮತ್ತು ಗೃಹ ಬಳಕೆ ಗ್ರಾಹಕರ ವಿದ್ಯುತ್ ದರದಲ್ಲಿ ಗಣನೀಯ ಇಳಿಕೆಯಾಗಿದೆ.

ಎಲ್.ಟಿ.ಗೃಹ ಬಳಕೆ ವಿದ್ಯುತ್ ದೀಪಗಳಿಗೆ 100 ಯುನಿಟ್ ಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯುನಿಟ್‌ಗೆ 110 ಪೈಸೆ ಇಳಿಕೆ ಮಾಡಲಾಗಿದೆ. ಹೆಚ್.ಟಿ ವಾಣಿಜ್ಯದಲ್ಲಿ ಇಂಧನ ಬಳಕೆ ಶುಲ್ಕ, ಪ್ರತಿ ಯೂನಿಟ್‌ಗೆ 125 ಪೈಸೆ ಡಿಮ್ಯಾಂಡ್ ಶುಲ್ಕ‌ಪ್ರತಿ ಕೆವಿಎ ಗೆ 10 ರೂ ಇಳಿಕೆ‌ ಮಾಡಲಾಗಿದೆ.

ಹೆಚ್.ಟಿ ಕೈಗಾರಿಕೆಯಲ್ಲಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ 50 ಪೈಸೆ: ಡಿಮಾಂಡ್ ಶುಲ್ಕ, ಪ್ರತಿ ಕೆವಿಎಗೆ ರೂ. 10/- ಇಳಿಕೆ ಮಾಡಲಾಗಿದೆ. ಹೆಚ್.ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇಂಧನ ಬಳಕೆ ಶುಲ್ಕ ಪ್ರತಿ ಯುನಿಟ್ಗೆ 40ಪೈಸೆ, ಡಿಮಾಂಡ್ ಶುಲ್ಕ, ಪ್ರತಿ ಕೆವಿಎಗೆ ರೂ. 10/- ಇಳಿಕೆ. ಹೆಚ್.ಟಿ ಖಾಸಗಿ ಏತ ನೀರಾವರಿಯಲ್ಲಿ ಇಂಧನ ಬಳಕೆ ಶುಲ್ಕ, ಪ್ರತಿ ಯೂನಿಟ್‌ಗೆ 200 ಪೈಸೆ ಇಳಿಕೆ ಮಾಡಲಾಗಿದೆ. ಹೆಚ್.ಟಿ ನಿವಾಸ ಅಪಾರ್ಟ್‌ಮೆಂಟ್ ಗಳು ಇಂಧನ ಬಳಕೆ ಶುಲ್ಕ, ಪ್ರತಿ ಕೆವಿಎಗೆ ಡಿಮಾಂಡ್ ಶುಲ್ಕವನ್ನು ರೂ 10ರಷ್ಟು ಇಳಿಕೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+