Government Employees: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್: ಈ ಹಬ್ಬಗಳನ್ನು ಸೇರ್ಪಡೆಗೊಳಿಸಿ ಕರ್ನಾಟಕ ಸರ್ಕಾರ ಆದೇಶ
ಬೆಂಗಳೂರು: ಕರ್ನಾಟಕ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದಂತಾಗಿದೆ.
ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ರವರು ಸರ್ಕಾರದ ಕಾರ್ಯದರ್ಶಿಗಳಿಗೆ ಮನವಿಯ ಮೇರೆಗೆ ಹಬ್ಬಗಳನ್ನು ಸೇರ್ಪಡೆಗೊಳಿಸಿದ ಬಳಿಕ ಸರ್ಕಾರ ಆದೇಶಿಸಿದೆ.

ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಸರ್ಕಾರದ ಆದೇಶಗಳ ಅನುಸಾರ ಹಬ್ಬಗಳಿಗಾಗಿ ಮುಂಗಡ ಹಣವನ್ನು ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಲು ನಿಗದಿಪಡಿಸಿದ ಅರ್ಜಿಯಲ್ಲಿ ಈ ಕೆಳಕಂಡ ಹಬ್ಬಗಳಿಗೆ ಮಾತ್ರ ಹಬ್ಬದ ಮುಂಗಡ ಹಣವನ್ನು ಮಂಜೂರು ಮಾಡಲಾಗುತ್ತಿದೆ ಎಂದು ಆದೇಶಿಸಲಾಗಿದೆ.
ಪಟ್ಟಿ-1
1. ಸೌರಮಾನ ಯುಗಾದಿ ಅಥವಾ ಚಾಂದ್ರಮಾನ ಯುಗಾದಿ
2. ಮಕರ ಸಂಕ್ರಾಂತಿ
3. ದೀಪಾವಳಿ
4. ಗಣೇಶ ಚತುರ್ಥಿ
5. ರಂಜಾನ್
6. ಬಕ್ರೀದ್
7. ಈದ್-ಎ-ಮಿಲಾದ್
8. ಈಸ್ಟರ್
9. ಗಣತಂತ್ರ ದಿನ
10. ಸ್ವಾತಂತ್ರ್ಯ ದಿನ
11. ದಸರಾ
ಪ್ರಸ್ತುತ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲು ಸರ್ಕಾರವು ನಿರ್ಣಯಿಸಿರುತ್ತದೆ.
ಪಟ್ಟಿ-2
1. ಮಹಾ ಶಿವರಾತ್ರಿ
2. ಶ್ರೀರಾಮನವಮಿ
3.ವರಮಹಾಲಕ್ಷ್ಮಿ ವ್ರತ
4. ಮಹಾಲಯ ಅಮವಾಸ್ಯೆ
5. ನಾಗರ ಪಂಚಮಿ
6. ಕನ್ನಡ ರಾಜ್ಯೋತ್ಸವ
7. ಹೋಳಿ ಹಬ್ಬ
8. ಬಸವ ಜಯಂತಿ
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಈಗಾಗಲೇ ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ.
1. ಮಹಾ ಶಿವರಾತ್ರಿ
2. ಶ್ರೀರಾಮನವಮಿ
3. ವರಮಹಾಲಕ್ಷ್ಮಿ ವ್ರತ
4. ಮಹಾಲಯ ಅಮವಾಸ್ಯೆ
5. ನಾಗರ ಪಂಚಮಿ
6. ಕನ್ನಡ ರಾಜ್ಯೋತ್ಸವ
7. ಹೋಳಿ ಹಬ್ಬ
8. ಬಸವ ಜಯಂತಿ












Click it and Unblock the Notifications