ಮಹಿಳೆ ಜತೆ ಅಸಭ್ಯ ವರ್ತನೆ, ಜರ್ಮನ್ನರ ಬಂಧನ
ಬೆಂಗಳೂರು, ನ.26: ನಗರದ ಪ್ರತಿಷ್ಥಿತ ಯುಬಿ ಸಿಟಿಯಲ್ಲಿ ರಾತ್ರಿ ವೇಳೆ ಮಜಾ ಉಡಾಯಿಸಲು ಬಂದಿದ್ದ ಇಬ್ಬರು ವಿದೇಶಿ ವಿದ್ಯಾರ್ಥಿಗಳು ಈಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಅತಿಥಿಗಳಾಗಿದ್ದಾರೆ. ಸೋಮವಾರ ರಾತ್ರಿ ಪಾನಮತ್ತರಾಗಿ ಮಹಿಳೆಯರ ಮೇಲೆ ಬೀಳಲು ಹೋಗುತ್ತಿದ್ದ ಇಬ್ಬರು ಜರ್ಮನ್ನರನ್ನು ಬಂಧಿಸಲಾಗಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿವರೆಗೂ ಜರ್ಮನ್ನರ ತುಂಟಾಟ ಮುಂದವರೆದಿತ್ತು ಎನ್ನಲಾಗಿದೆ. ಜರ್ಮನಿಯ ಫೆಲಿಕ್ಸ್ ಹಾಗೂ ರೆಬೆರೋ ಚಾರ್ಲ್ಸ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿದ್ಯಾರ್ಥಿಗಳಾಗಿದ್ದಾರೆ.
ವಿಠಲ್ ಮಲ್ಯ ರಸ್ತೆಯಲ್ಲಿರುವ ಯುಬಿ ಸಿಟಿಗೆ ತೆಅಳಿ ಅಲ್ಲಿನ ಬಾರ್ ನಲ್ಲಿ ಕಂಠಮಟ್ಟ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಓಲಾಡುತ್ತಾ ಎದುರಿಗೆ ಸಿಕ್ಕವರ ಮೇಲೆ ಬೀಳತೊಡಗಿದ್ದಾರೆ. ಇದೇ ವೇಳೆ ಕುಟುಂಬದೊಡನೆ ಬಂದಿದ್ದ ಮಹಿಳೆಯೊಬ್ಬರ ಮೇಲೆ ಇಬ್ಬರು ವಿದ್ಯಾರ್ಥಿಗಳು ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ. ಕೂಡಲೇ ಆಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಬ್ಬರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಕೋಲಾರ, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ದಕ್ಷಿಣ ಕನ್ನಡ ಜಿಲ್ಲೆ
ವರದಕ್ಷಿಣೆ ತರುವಂತೆ ಪತಿ ಹಾಗೂ ಅವರ ತಾಯಿ ತನಗೆ ಕಿರುಕುಳ ನೀಡಿದ್ದಲ್ಲದೆ, ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹಾಕಿರುವುದಾಗಿ ಮಹಿಳೆಯೊಬ್ಬರು ಸುಳ್ಯ ಪೊಲೀಸರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.
ಕಂದಡ್ಕ ಸಿಆರ್‌ಸಿ ಕಾಲೋನಿಯ ಕರುಣಾಕರ ಎಂಬವರೊಂದಿಗೆ ಮೇ.15, 2013 ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ವಿವಾಹವಾಗಿತ್ತು. ಕಳೆದ 2 ತಿಂಗಳಿ ನಿಂದ ಪತಿ ಕರುಣಾಕರ ಹಾಗೂ ಅತ್ತೆ ಲಕ್ಷ್ಮೀ ಬಾಯಿ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ. ನ.14, 2013ರಂದು ಇವರಿಬ್ಬರೂ ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮನೆಯಿಂದ ಹೊರಗೆ ಹಾಕಿದ್ದಾರೆಂದು ಕರುಣಾಕರರ ಪತ್ನಿ ಪುಷ್ಪಾ ಶ್ರೀ(23) ಎಂಬವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ಕೋಲಾರ ಕಳವು:
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ, ಹೊಸ ಬಡಾವಣೆಯಲ್ಲಿ ಸಂಭವಿಸಿರುತ್ತದೆ. ರಾತ್ರಿ ಸಮಯದಲ್ಲಿ 'ಪೂರ್ಣ ನಿಲಯ'ಎಂಬ ಮನೆಗೆ ಹಾಕಿದ್ದ ಬೀಗವನ್ನು ಮುರಿದು, ಒಳ ಪ್ರವೇಶಿಸಿ, ಮನೆಯಲ್ಲಿದ್ದ 3,00,000 ರೂ.ಗಳ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡಿರುವ ಘಟನೆ ಸಂಭವಿಸಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಶಿವಮೊಗ್ಗ
ಗ್ರಾಮಾಂತರ ಠಾಣೆ ಭದ್ರಾವತಿ : ಆಕಸ್ಮಿಕ ಸಾವು ಪಿರ್ಯಾದಿ ಸುಬ್ಬಾರೆಡ್ಡಿ 40 ವರ್ಷ ವಾಸ ಬಸಲಿಕಟ್ಟೆ ಇವರ ತಂಗಿಯ ಮಗ ತಿರುಮಲೇಶ ರೆಡ್ಡಿ ಬಿನ್ ವೆಂಕಟೇಶ ರೆಡ್ಡೆ 18 ವರ್ಷ ವಾಸ ಬಸಲಿಕಟ್ಟೆ ಇವರು ಗದ್ದೆಯಲ್ಲಿ ಟ್ರಾಕ್ಟರ್ ನಲ್ಲಿ ಮಣ್ಣ ತೆಗೆಯುತ್ತಿದ್ದಾಗ ತಿರುಮಲೇಶನ ಮೇಲೆ ಅಕಸ್ಮಿಕವಾಗಿ ಮಣ್ಣ ಬಿದ್ದು ಚಿಕಿತ್ಸೆಗಾಗಿ ಕರೆದು ಕೊಂಡು ಹೋಗುತ್ತಿದ್ದಾಗ ಮೃತ ಪಟ್ಟಿರುತ್ತಾನೆ,.

ಚಿತ್ರದುರ್ಗ
ಟ್ರ್ಯಾಕ್ಟರ್ ಡಿಕ್ಕಿ, ಬೈಕ್ ಸವಾರ ಸಾವು ::
ಚಳ್ಳಕೆರೆ: ನಂ: ಕೆಎ-16/ಎ-8077-8078 ನೇ ಟ್ರ್ಯಾಕ್ಟರ್ ಟ್ರಾಲಿಯ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ನಂ: ಕೆಎ-06/ಇಕೆ-3228 ನೇ ಬೈಕ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕ್ ಸವಾರ ರಸ್ತೆಯ ಮೇಲೆ ಬಿದ್ದು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತಳಕು ಗ್ರಾಮದ ಬಳಿ ಸೇತುವೆಯ ಹತ್ತಿರ ರಸ್ತೆಯಲ್ಲಿ ಈ ದಿನ ಬೆಳಿಗ್ಗೆ ನಡೆದಿದೆ.
ವರವು ಗ್ರಾಮದ ಲೋಕೇಶ ಎಂಬುವವರು ಬೈಕ್ ಮೇಲೆ ಗಿಡ್ಡಾಪುರ ಗ್ರಾಮದಿಂದ ತಮ್ಮ ಊರಿಗೆ ವಾಪಸ್ ಬರುತ್ತಿರುವಾಗ ಈ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಲೋಕೇಶ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಳ್ಳಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ದೂರು ಇದ್ದ ಮೇರೆಗೆ ತಳಕು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.












Click it and Unblock the Notifications