ಬೆಂಗಳೂರು: ಹೈಟೆಕ್ ವೇಶ್ಯಾವಾಟಿಕೆ, ಏಳು ಜನ ಬಂಧನ

ಬೆಂಗಳೂರು, ನ.25: ಎಲೆಕ್ಟ್ರಾನಿಕ್ ಸಿಟಿ ಬಳಿಯ ರೆಸಾರ್ಟ್ ವೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಏಳು ಜನ ಯುವಕರನ್ನು ಬಂಧಿಸಿದ್ದು ಐವರು ಯುವತಿಯರನ್ನು ರಕ್ಷಿಸಿ ರಿಮಾಂಡ್ ಹೋಂಗೆ ಕಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪ್ರಮೋದ್ (27), ಝಕಾವುಲ್ಲಾ (34), ಸುಖಮಲ್ (25), ನದೀಮ್ ಪಾಷ (21), ಬಾಬು (34), ಶಿವಸುಬ್ರಹ್ಮಣ್ಯಂ (37) ಹಾಗೂ ವಿವೇಕ್ (42) ಎಂದು ಗುರುತಿಸಲಾಗಿದೆ.

ಬೆಂಗಳೂರು ಹೊರ ವಲಯದ ಬೇಗೂರಿನ ಹೋಬಳಿ ಮೈಲಸಂದ್ರ ಸಮೀಪವಿರುವ ಸಪ್ನಾ ರೀಚಾರ್ಜ್ ಅಟ್ ಗ್ರೀನ್ ಲೀಫ್ ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂಬ ಮಾಹಿತಿಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಸಾಜ್ ಪಾರ್ಲರ್ ಹೆಸರಿನಲ್ಲಿ ಹೈಟಕ್ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ಹೊರ ರಾಜ್ಯದಿಂದ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಮುಂಬೈ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶ ಮೂಲದ ಐವರು ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ಬಂಧಿತರಿಂದ 8 ಸಾವಿರ ರು ನಗದು ಹಾಗೂ 10 ಮೊಬೈಲ್ ಫೋ ವಶಪಡಿಸಿಕೊಳ್ಳಲಾಗಿದೆ. ರೆಸಾರ್ಟ್ ಮಾಲೀಕ ಉಸ್ವಾನ್ ಖಾನ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಜಾರಿಯಲ್ಲಿದೆ. ರಾಯಚೂರು,ಶಿವಮೊಗ್ಗ, ದಕ್ಷಿಣ ಕನ್ನಡ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ರಾಯಚೂರು

ರಾಯಚೂರು

ಪ್ರೀತಿ ನಿರಾಕರಿಸಿದ ಯುವತಿಗೆ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮೀರಾಪುರ ಮಹಾದೇವಿ (19) ಕೊಲೆಯಾದ ನತದೃಷ್ಟ ಯುವತಿ. ಪಕ್ಕದ ಮನೆಯ ವಾಸಿ ನಾಗರಾಜು ತನ್ನ ಸೋದರ ಮಾರಪ್ಪನ ಜತೆ ಸೇರಿ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.

ನಾಗರಾಜ ತನ್ನ ಪಕ್ಕದ ಮನೆಯ ವಾಸಿ ಮಹಾದೇವಿಯನ್ನು ಪ್ರೀತಿಸುವಂತೆ ಹಲವು ತಿಂಗಳಿನಿಂದ ಪೀಡಿಸುತ್ತಿದ್ದ ಎನ್ನಲಾಗಿದೆ. ಆಕೆ ಹೊರಗೆ ಎಲ್ಲೇ ಹೋದರೂ ಹಿಂಬಾಲಿಸಿ ಪ್ರೀತಿ ಬೇಡುತ್ತಿದ್ದ. ಆದರೆ, ಯುವತಿ ಮಹಾದೇವಿ ಪ್ರೀತಿಸಲು ನಿರಾಕರಿಸಿದ್ದಳು.

ಕಳೆದ ರಾತ್ರಿ ಮನೆ ಹೊರಗೆ ಬಂದ ಮಹಾದೇವಿಯನ್ನು ನಾಗರಾಜ ತನ್ನ ಸೋದರ ಮಾರಪ್ಪನ ಜತೆ ಸೇರಿ ಬಲವಂತವಾಗಿ ಜಮೀನಿಗೆ ಹೊತ್ತೊಯ್ದಿದ್ದಾನೆ. ಅಲ್ಲಿ ಆಕೆಗೆ ವಿಷ ಕುಡಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಆಕ್ರೋಶಗೊಂಡ ಯುವತಿ ಮನೆಯವರು ನಾಗರಾಜನ ಮನೆಗೆ ನುಗ್ಗಿ ಮಾರಪ್ಪನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆ

19 ವರ್ಷದ ಸುಮಿತಾ, 18 ವರ್ಷದ ಶಿವರಾಜ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಸ್ನೇಹ, ಪ್ರೇಮಕ್ಕೆ ಮನೆಯವರು ಅಡ್ಡಿಪಡಿಸಿದ್ದರು. ಇದರಿಂದ ಬೇಸರಗೊಂಡ ಬಂಟ್ವಾಳ ಪಟ್ಟಣದ ನಿವಾಸಿಗಳಾದ ಸುಮಿತಾ-ಶಿವರಾಜ್ ಅವರು ಇನ್ನೋಳಿ ಗ್ರಾಮದ ಬಳಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಶವ ಸೋಮವಾರ ದೊರೆತಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಕೋಲಾರ ನಗರ : ಹಲ್ಲೆ

ಕೋಲಾರ ನಗರ : ಹಲ್ಲೆ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಚೀತಾ ದ್ವಿಚಕ್ರ ವಾಹನ ಕರ್ತವ್ಯ ನಿರ್ವಹಿಸುತ್ತಿರುವ ಸರ್ವೇಶ್ ರವರು

ಕೋಲಾರ ನಗರದ ಸೆಂಟ್‌ ಆನ್ಸ್‌ ಶಾಲೆಯ ಬಳಿ ಕೃಷ್ಣೇಗೌಡ ಎಂಬುವರಿಗೆ ಟಾಟಾ ಎಸ್ ವಾಹನ ಅಪಘಾತವ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ ಅವರನ್ನು ಆಸ್ಪತ್ರೆಗೆ ಸೇರಿಸಲು ಹೋಗಿದ್ದು. ಈ ಸಮಯದಲ್ಲಿ ಅವರು ತಂದಿದ್ದ ಚೀತಾ ವಾಹನವನ್ನು ಅಲ್ಲಿಯೆ ನಿಲ್ಲಿಸಿದ್ದು. ಚೀತಾವಾಹನವನ್ನು ತೆಗೆದುಕೊಂಡು ಬರಲು ಹೋಗಿದ್ದಾಗ ಗಾಂಧಿನಗರದ ವಾಸಿ ಯುವರಾಜ್ ಮತ್ತು ಸುಕುಮಾರ್ ರವರು ದ್ವಿಚಕ್ರ ವಾಹನನ್ನು ತೆಗೆದುಕೊಂಡು ಹೋಗದಂತೆ ಅಡ್ಡಿಪಡಿಸಿ, ಸರ್ವೇಶ್ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುತ್ತಾರೆ.

ದೊಡ್ಡಪೇಟೆ ಠಾಣೆ ಶಿವಮೊಗ್ಗ

ದೊಡ್ಡಪೇಟೆ ಠಾಣೆ ಶಿವಮೊಗ್ಗ

ಪಿರ್ಯಾದಿ ನಾಗರಾಜ ಸಿ ಬಿನ್ ಚಂದ್ರ ನಾಯ್ಕ 28 ವರ್ಷ ವಾಸ ಬೀಡುಗೊಂಡನ ಹಳ್ಳಿ ತಾಂಡ ಚನ್ನಗಿರಿ ತಾ. ಇವರ ಅಕ್ಕ ಗೀತಾ ರವರ ಹಿರಿಯ ಮಗ ಪ್ರವೀಣ್ ಕುಮಾರ್ 17 ವರ್ಷ ಡಿ.ವಿ.ಎಸ್ ಕಾಲೇಜಿನಲ್ಲಿ ಮೊದಲನೇ ವಿಜ್ಞಾನ ಪಿ.ಯು.ಸಿ ವಿಧ್ಯಾರ್ಥಿ ಈತನಿಗೆ ಓದುವುದರಲ್ಲಿ ಆಸಕ್ತಿ ಕಡಿಮೆ ಇದ್ದು, ಇವರ ಸಂಭಂದಿಕರಾದ ಗೀರಿಶ ರವರ ಡಿ.ಎ.ಆರ್ ಪೊಲೀಸ್ ವಸತಿ ಗೃಹದ ಮನೆಗೆ ಹೋಗಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡ ಮೃತ ಪಟ್ಟಿರುತ್ತಾನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+