ಕ್ರೈಂ: ಓದು ಎಂದಿದ್ದಕ್ಕೆ ಸೂಸೈಡ್ ಮಾಡ್ಕೊಂಡ ಕಸಿನ್ಸ್

ಬೆಂಗಳೂರು, ನ.22 : ಹೋಗಿ ಓದ್ಕೊಳ್ಳಿ ಎಂದು ಮನೆಯಲ್ಲಿ ಪೋಷಕರು ಹೇಳಿದ ಹಿತ ನುಡಿಯನ್ನು ಸಹಿಸದ ಅಕ್ಕ ತಂಗಿ ಇಬ್ಬರು ಜೀವನ ಅಂತ್ಯಗೊಳಿಸಲು ನಿರ್ಧರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೌರಿಬಿದನೂರಿನಲ್ಲಿ ವರದಿಯಾಗಿದೆ.

ಏರಪೋತನಹಳ್ಲಿ ನಿವಾಸಿಗಳಾದ 15 ವರ್ಷದ ಇಬ್ಬರು ವಿದ್ಯಾರ್ಥಿನಿಯರು ಎಚ್ ನರಸಿಂಹಯ್ಯ ಅವರ ಹೊಸೂರಿನ ನ್ಯಾಷನಲ್ ಹೈಸ್ಕೂಲ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು. ಇಬ್ಬರು ಚಿಕ್ಕಪ್ಪ -ದೊಡ್ಡಪ್ಪನ ಮಕ್ಕಳಾಗಿದ್ದು ಸದಾ ಕಾಲ ಒಟ್ಟಿಗೆ ಇರುತ್ತಿದ್ದರು ಎನ್ನಲಾಗಿದೆ.

ಇಬ್ಬರು ಕಳೆದ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಡರಾತ್ರಿ ಸ್ಥಳೀಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ. ಇಬ್ಬರ ಪೈಕಿ ಆಶಾ ಎಂಬ ಬಾಲಕಿಯನ್ನು ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದು ಸದ್ಯ ಗೌರಿಬಿದನೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮತ್ತೊಬ್ಬ ವಿದ್ಯಾರ್ಥಿನಿ ಜಯಂತಿ ಬೆಂಗಳೂರಿನ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದು ಕುಟುಂಬದವರ ದುಃಖ ಮುಗಿಲು ಮುಟ್ಟಿದೆ.

ಬೆಂಗಳೂರಿನ ಕಾಡುಗೋಡಿಯಲ್ಲಿ ಶುಕ್ರವಾರ ಬೆಳಗ್ಗೆ ಗೃಹಿಣಿ ಹತ್ಯೆಯಾಗಿದೆ. 35 ವರ್ಷದ ರುಮಾ ಎಂಬಾಕೆ ಮೃತಪಟ್ಟ ದುರ್ದೈವಿ. ಕೊಲೆ ಮಾಡಿರುವ ಆರೋಪಿಯನ್ನು ರುಮಾ ಅವರ ಪತಿ ರತನ್ ಗೆಳೆಯ ಉದಯ್ ಕೃತ್ಯ ಎಂದು ತಿಳಿದು ಬಂದಿದೆ. ಉಡುಪಿ, ಚಿತ್ರದುರ್ಗ, ಚಿಕ್ಕಮಗಳೂರು, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ಚಿತ್ರದುರ್ಗ

ಚಿತ್ರದುರ್ಗ

ನೇಣು ಹಾಕಿಕೊಂಡು ಕೊಳೆತ ಸ್ಥಿತಿಯಲ್ಲಿರುವ ಅನಾಥ ಶವವೊಂದು ತಾಲ್ಲೂಕಿನ ತಿರುಮಲಾಪುರ ಗ್ರಾಮದ ಶ್ರೀ.ಮಾವಿನಹಳ್ಳಿ ಬಸವೇಶ್ವರ ದೇವಸ್ಥಾನದ ಹತ್ತಿರ ತಿಮ್ಮಪ್ಪ ಎಂಬುವವರ ಜಮೀನಿನ ಪಕ್ಕದ ಹಳ್ಳದ ಮಾವಿನ ಮರವೊಂದರಲ್ಲಿ ನಿನ್ನೆ ಮಧ್ಯಾಹ್ನ ಪತ್ತೆಯಾಗಿದೆ.

ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಮೃತ ವ್ಯಕ್ತಿ ಯಾರೆಂದು ಪತ್ತೆಯಾಗಿರುವುದಿಲ್ಲಾ, ವ್ಯಕ್ತಿಯ ವಯಸ್ಸು ಸುಮಾರು 30 ರಿಂದ 35 ವರ್ಷ ಇರಬಹುದು, ನೇಣು ಹಾಕಿಕೊಂಡು ಸುಮಾರು 5 ರಿಂದ 6 ದಿನಗಳಾಗಿರಬಹುದು ಎಂದು ದೂರು ಇದ್ದ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ

ಹಲ್ಲೆ ಪ್ರಕರಣ

ಉಡುಪಿ: ಸಾಗರ್ ತಿಂಗಳಾಯ, ತಂದೆ: ಕೃಷ್ಣಪ್ಪ ತಿಂಗಳಾಯ, ವಾಸ: ಸಸಿತೋಟ, ಕಲ್ಯಾಣಪುರ, ಕಡವಿನ ಬಾಗಿಲು, ಮೂಡುತೋನ್ಸೆ ಗ್ರಾಮ, ಉಡುಪಿ ಇವರು ನ.21ರಂದು ರಂಜಿತ್ ಪಿಂಟೋ, ಸುಜಿತ್‌ ಪಿಂಟೋ, ಮಹೇಶ್‌ ಹಾಗೂ ಇತರರೊಂದಿಗೆ ಅಂಬಾಗಿಲು ಬಾರ್‌ನಲ್ಲಿ ಮದ್ಯಸೇವಿಸಿ, ನಂತರ ಅವರುಗಳೊಂದಿಗೆ ಕೊಡಂಕೂರು ಪುತ್ರನ್ ಗ್ಯಾಸ್ ಗೋಡನ್ ಬಳಿ ರಾತ್ರಿ 20:00ಗಂಟೆಯ ಸುಮಾರಿಗೆ ಮಾತನಾಡಿಕೊಂಡಿರುವಾಗ್ಗೆ ಅವರೊಳಗೆ ಮಾತಿನ ಚಕಮಕಿ ಉಂಟಾಗಿದೆ.

ರಂಜಿತ್‌ ಪಿಂಟೋ ಹಾಗೂ ಇತರರು ಅವರಿಗೆ ಕೈಯಿಂದ ಹೊಡೆದಿದ್ದು, ಅಲ್ಲಿಯೇ ಇದ್ದ ಜಲ್ಲಿಕಲ್ಲಿನಿಂದ ಅವರ ತಲೆಗೆ ಹೊಡೆದಿರುತ್ತಾನೆ. ಆಪಾದಿತ ಹಲ್ಲೆ ಮಾಡಿದ ಪರಿಣಾಮ ತಲೆ ನೆತ್ತಿ ಮೇಲೆ ರಕ್ತಗಾಯ ಉಂಟಾಗಿದ್ದಲ್ಲದೆ, ಎಡಸೊಂಟದ ಬಳಿ ತರಚಿದ ಗಾಯ ಹಾಗೂ ಒಳನೋವು ಉಂಟಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 445/13 ಕಲಂ:323,324,506 ಜೊತೆಗೆ 34 ಐಪಿಸಿಯಂತೆ ಪ್ರಕರಣ.
ಆತ್ಮಹತ್ಯೆಗೆ ಸ್ವಪ್ರೇರಣೆ

ಆತ್ಮಹತ್ಯೆಗೆ ಸ್ವಪ್ರೇರಣೆ

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಸ್ವಪ್ರೇರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು, ಯಲ್ದೂರು ಗ್ರಾಮದ ವಾಸಿ ಸೋಮಾಚಾರಿ ರವರಿಗೆ ಪಾರ್ಶ್ವವಾಯು ಕಾಯಿಲೆಯಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿದ್ದ ಬ್ಲೇಡಿನಿಂದ ಕತ್ತನ್ನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಅವರ ಹೆಂಡತಿ ಧನಲಕ್ಷ್ಮಿ ರವರು ಕೋಲಾರ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ಚಿಕ್ಕಮಗಳೂರು ಹೊರವಲಯದ ಕಲ್ದೊಡ್ಡಿ ಗ್ರಾಮದ ಮೂರು ದೇಗುಲಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಚೌಡಮ್ಮ ದೇವಿ ದೇಗುಲದಿಂದ ಚಿನ್ನದ ಮಾಂಗಲ್ಯ ಸರ, ಮೂಗುತಿ, ಮೂರು ಅಡಿ ಉದ್ದದ ತ್ರಿಶೂಲ ಕಳುವಾಗಿದೆ. ಮಹಾಶಕ್ತಿ ಗಣಪತಿ ದೇಗುಲದ ಹುಂಡಿ ಒಡೆದು ಹಣ ದೋಚಲಾಗಿದೆ.

ಹತ್ತಿರದಲ್ಲಿರುವ ಚಾಮುಂಡೇಶ್ವರಿ ದೇಗುಲದ ಬಾಗಿಲು ಮುರಿದು ದೇವಿಯ ಬೆಳ್ಳಿ ಕಣ್ಣು, ಹುಂಡಿ ಹಣ ಕದ್ದೊಯ್ದಿದ್ದಾರೆ, ಅರ್ಚಕ ಯೋಗೇಶ್ ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+