ಕ್ರೈಂ ರೌಂಡಪ್: ನಿರುದ್ಯೋಗಿ ಆತ್ಮಹತ್ಯೆ ...ಇತ್ಯಾದಿ
ಬೆಂಗಳೂರು, ಅ.9: ಕೆಲಸ ಸಿಗದೆ ಬೇಸರಗೊಂಡ ಯುವಕ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೇಣು ಬಿಗಿದು ಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ಗುಲ್ಬರ್ಗ ಮೂಲದ 29 ವರ್ಷದ ಬಿ ಹರೀಶ್ ಮೃತಪಟ್ಟ ಯುವಕ.
ಹರೀಶ್ ತಂದೆ ಈಶ್ವರ ಬಡಿಗೇರ ಮಂಗಳೂರಿನಲ್ಲಿ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕರಾಗಿದ್ದಾರೆ. ತಾಯಿ ಸರೋಜಮ್ಮ ಜತೆ ಹರೀಶ್ ಹೆಗ್ಗನಹಳ್ಳಿ ಸಂಜೀವಿನಿ ನಗರದಲ್ಲಿ ವಾಸವಾಗಿದ್ದ. ಐಟಿಐ ಓದಿರುವ ಹರೀಶ್ ಎಚ್ ಎಂಟಿ ಸಂಸ್ಥೆಯಲ್ಲಿ ತಾತ್ಕಾಲಿಕ ಉದ್ಯೋಗ ಪಡೆದಿದ್ದ. ಇತರೆ ಕಡೆ ಉದ್ಯೋಗ ಅರಸಿ ಸುಸ್ತಾಗಿದ್ದ ಹರೀಶ್ ಗೆ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಹೊಸಕೆರೆಹಳ್ಳಿ: ನಗರದ ಹೊಸಕೆರೆ ಹಳ್ಳಿಯ ಮೂರನೇ ಅಡ್ಡರಸ್ತೆಯಲ್ಲಿ ವಾಸವಿದ್ದ ಮಂಡ್ಯ ಮೂಲದ ಅಡುಗೆ ಭಟ್ಟ 35 ವರ್ಷದ ರಾಮಕೃಷ್ಣ ಕಳೆದ ರಾತ್ರಿ ಕುಡಿದ ಅಮಲಿನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
15 ವರ್ಷಗಳ ಹಿಂದೆ ಸರೋಜ ಎಂಬುವವರನ್ನು ಮದುವೆಯಾಗಿದ್ದ ರಾಮಕೃಷ್ಣಗೆ ಇಬ್ಬರು ಮಕ್ಕಳಿದ್ದಾರೆ. ಅಡುಗೆ ಕೆಲಸ ಮಾಡುತ್ತಿದ್ದ ರಾಮಕೃಷ್ಣ ಮದ್ಯವ್ಯಸನಿಯಾಗಿದ್ದ ಕುಟುಂಬದ ಬಗ್ಗೆ ಯಾವುದೇ ಕಾಳಜಿವಹಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ತುಮಕೂರು
ಅ.8ರಂದು ಪಿರ್ಯಾದಿ ಟಿ. ಧನಂಜಯ ಬಿನ್ ತುಕ್ಯಾ ನಾಯಕ್(35) ಲಂಬಾಣಿ ಜನಾಂಗ ಎಸ್,ಬಿ. ಎಂಟರ್ ಪ್ರೈಸಸ್ ಮಾಲೀಕ ಎ,ಪಿ,ಎಂ,ಸಿ. ಯಾರ್ಡ್, ನಂ. 3 ಶ್ರೀ ರಾಮ್ ನಿಲಯ ಹೊಸ ಬಡಾವಣೆ ದೇವ ರಾಯಪಟ್ಟಣ ತುಮಕೂರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ
ನಾನು ನನ್ನ ಸ್ನೇಹಿತರಾದ ಗೋವಿಂದಮೂರ್ತಿ ರವರ ಹೆಸರಿನಲ್ಲಿ ದಾಖಲಾತಿಗಳಿರುವ ಕೆಎ.46.ಎಂ.200 ನೇ ನಂಬರಿನ ಮಾರುತಿ ಆಲ್ಟೋ ಕಾರನ್ನು ವಾಸನ್ ಐ ಕೇರ್ ಆಸ್ಪತ್ರೆಗೆ ಕಣ್ಣಿನ ಚಿಕಿತ್ಸೆ ಪಡೆಯಲು ಬಂದಿದ್ದು, ಕಾರನ್ನ ಆಸ್ಪತ್ರೆಯ ಪಕ್ಕದ ರಸ್ತೆ ಬದಿಯಲ್ಲಿ ನಿಲ್ಲಿಸಿ ಆಸ್ಪತ್ರೆ ಒಳಗಡೆ ಚಿಕಿತ್ಸೆ ಪಡೆದು ಸಂಜೆ ಸುಮಾರು 06-45 ಗಂಟೆಗೆ ಹೊರಗೆ ಬಂದು ನೋಡಲಾಗಿ ಕಾರನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇದುವರೆಗೆ ಪತ್ತೆಯಾಗಿರುವುದಿಲ್ಲ

ಕೋಲಾರ ಜಿಲ್ಲೆ
ದೊಂಬಿ ಮತ್ತು ಹಲ್ಲೆ:ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.
ಕೋಲಾರ ನಗರ ದರ್ಗಾಮೊಹಲ್ಲಾ ವಾಸಿ ಶ್ರೀಮತಿ ನಸೀಂ ಉನ್ನೀಸಾ ಮತ್ತು ಅವರ ಮನೆಯವರನ್ನು ಅದೇ ಮೊಹಲ್ಲಾದ ವಾಸಿ ಸೈಯದ್ ಅಜಾಮ್ ಮತ್ತು ಇತರರು ಸೇರಿ ಜಗಳ ಮಾಡಿ, ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಂಗಡಿಯ ಮನೆಯನ್ನು ಕಟ್ಟುವ ವಿಚಾರದಲ್ಲಿ ಈ ಘಟನೆ ಸಂಭವಿಸಿರುತ್ತದೆ. ಈ ಬಗ್ಗೆ ಕೇಸು ಮತ್ತು ಪ್ರತಿಕೇಸುಗಳು ದಾಖಲಾಗಿರುತ್ತದೆ.

ಚಿಕ್ಕಮಗಳೂರು ಕ್ರೈಂ
ಬಾಳೆಹೊನ್ನುರು ಪೊಲೀಸ್ ಠಾಣೆ ಮೊ.ಸಂ. 169/2013 - ಕಲಂ: ಹೆಂಗಸು ಕಾಣೆ - ಪಿರ್ಯಾದುದಾರ ಸುಜಾತ ಬಾಳೆಹೊನ್ನುರು ವಾಸಿ ಇವರ ಮಗಳಾದ ಸುಮಾರು 24 ವರ್ಷ ಪ್ರಾಯದ ಶ್ರೀಮತಿ ಭಾಗ್ಯಳನ್ನು ಈಗ್ಗೆ 5 ವರ್ಷಗಳ ಹಿಂದೆ ಕುಣಿಗಲ್ ವಾಸಿ ರಂಗನಾಥ ಸ್ವಾಮಿ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದು
ಗಂಡ-ಹೆಂಡತಿ ಇಬ್ಬರು ಎರಡು ಮಕ್ಕಳೊಂದಿಗೆ 01 ವರ್ಷದಿಂದ ಬೆಂಗಳೂರಿನ ಮಾದಾನಾಯ್ಕನಹಳ್ಳಿಯಲ್ಲಿ ವಾಸವಾಗಿದ್ದು, ಭಾಗ್ಯ ಮಕ್ಕಳನ್ನು ಕರೆದುಕೊಂಡು ಪಿರ್ಯಾದಿಯ ಮನೆಗೆ ಬಂದು ಇಲ್ಲಿಯೇ ಇದ್ದು, ಪಿರ್ಯಾದಿಯು ಮನೆ ಕೆಲಸಕ್ಕೆ ಹೋದವರು ವಾಪಾಸ್ ಮನೆಗೆ ಬಂದು ನೋಡಿದಾಗ ಭಾಗ್ಯ ಇಲ್ಲದಿರುವುದನ್ನು ಕಂಡು ಅಕ್ಕಪಕ್ಕದವರಲ್ಲಿ, ವಿಚಾರಿಸಿ ಸಂಬಂಧಿಕರ ಮತ್ತು ಭಾಗ್ಯಳ ಗಂಡನಿಗೆ ಫೋನ್ ಮಾಡಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದಿದ್ದು, ಕಾಣೆಯಾದ ಶ್ರೀಮತಿ ಭಾಗ್ಯಳನ್ನು ಪತ್ತೆ ಮಾಡಿಕೊಡಲು ಕೋರಿ
ಉಡುಪಿ
ಪಿರ್ಯಾದಿ ಸೋಮಶೇಖರ ಶೆಟ್ಟಿಗಾರ ಇವರ ತಮ್ಮನಾದ ಮಾದವ ಶೆಟ್ಟಿಗಾರ ಸ್ವಂತ ವರ್ಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿರುವಾಗ ಸಂಜೆ 06:15 ಗಂಟೆಯ ಸಮಯಕ್ಕೆ ಅಮ್ಮ ಎಂದು ಜೋರಾಗಿ ಬೊಬ್ಬೆಹಾಕಿದ ಶಬ್ದ ಸೋಮಶೇಖರರ ಪತ್ನಿರತ್ನಗೆ ಕೇಳಿ ಅವರು ಪಿರ್ಯಾದಿದಾರರಿಗೆ ತಿಳಿಸಿ ಹೋಗಿ ನೋಡಲಾಗಿ ತಮ್ಮನ ಹೊಟ್ಟೆಯ ಮೇಲೆ ಗ್ರೈಂಡರ್ ಮೆಷಿನ್ ಬಿದ್ದಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲವಾಗಿದ್ದು ಪಿರ್ಯಾದಿದಾರರು ತಮ್ಮನ ಹೊಟ್ಟೆಯ ಮುಟ್ಟಿದಾಗ ವಿದ್ಯುತ್ ಶಾಖ್ ಹೊಡೆದ ಅನುಭವ ಉಂಟಾದಾಗ ಮೇನ್ ಸ್ವೀಚ್ ಆಫ್ ಮಾಡಿದ್ದು, ಪಿರ್ಯಾದಿ ತಮ್ಮನ ಚಿಕಿತ್ಸೆಯ ಬಗ್ಗೆ ಹೈಟೆಕ್ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 44/13 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಶಿವಮೊಗ್ಗ ಕ್ರೈಂ
ಪಿರ್ಯಾದಿ ಚೈತನ್ಯ ತಂದೆ ಶಾಂತಯೋಗಿ 26 ವರ್ಷ ವಾಸ ಗೋಪಾಳ ರವರ ತಂದೆ ಶಾಂತಯೋಗಿ ಬಿನ್ ಗೋಪಾಲ 55 ವರ್ಷ ಇವರು ಬೈಕಿನಲ್ಲಿ ಮೀನಾಕ್ಷಿ ಭವನದ ಹತ್ತಿರ ಹೋಗುತ್ತಿದ್ದಾಗ ಆರೋಪಿಯು ತನ್ನ ವಾಹನ ಕೆ.14 ಎ 8230 ರ ಟಾಟಾ ಎ ಸಿ ವಾಹನವನ್ನು ಆತಿ ಹಾಗೂ ಅಜಾಗರುಕತೆಯಿಂದ ಮತು ನಿರ್ಲಕ್ಷ್ಯತನÀದಿಂದ ಚಲಿಸಿ ಹಿಂದಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಶಾಂತಯೋಗಿ ಬಿನ್ ಗೋಪಾಲ 55 ವರ್ಷ ಇವರು ಮೃತ ಪಟ್ಟಿರುತ್ತಾರೆ.

ಚಿತ್ರದುರ್ಗ ನಗರ
ಚಿತ್ರದುರ್ಗ ನಗರದ ನ್ಯೂ ಪ್ರವೀಣ್ ವಸತಿಗೃಹದಲ್ಲಿ ಪರಿಶೀಲಿಸಿ ದಾಳಿ ನಡೆಸಿ 150 ಕಾಂಡೋಮ್ ಗಳು, 1000/- ರೂ. ನಗದು ಹಣ ಒಂದು ನೋಕಿಯಾ ಮೊಬೈಲ್ ಫೋನ್ ಗಳನ್ನು ಅಮಾನತ್ತುಪಡಿಸಿಕೊಂಡು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 4 ಜನ ಮಹಿಳೆಯರು ಹಾಗೂ ದಂಧೆಯನ್ನು ನಡೆಸುತ್ತಿದ್ದ ಮಾಲೀಕ ತಲೆಮರೆಸಿಕೊಂಡ ಆರೋಪಿ ಹರೀಶ್ ಕುಂದಾಪುರ ಓಡಿಹೋದ ಆರೋಪಿ ಕ್ಯಾಷಿಯರ್ ಮ್ಯಾನೇಜರ್ ದೇವರಾಜ್, ರೂಂ ಬಾಯ್ ಗಳಾದ ಕೃಷ್ಣ, ಸಂದೀಪ್, ಗಿರಾಕಿಗಳಾಗಿ ಬಂದಿದ್ದ ಅಜೆಯ್ ಮತ್ತು ಕೇಶವ ಇವರನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ. ಈ ಬಗ್ಗೆ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.












Click it and Unblock the Notifications