ಕ್ರೈಂ: ಆತ್ಮಹತ್ಯೆಗೆ ಯತ್ನಿಸಿದ ತಾಯಿ ಬಚಾವ್, ಮಕ್ಕಳು ಮರಣ
ಬೆಂಗಳೂರು, ನ. 21: ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಮುಂದಾಗಿದ್ದಳು. ಮಕ್ಕಳನ್ನು ಬಾವಿಗೆಸೆದು ತಾನು ಆತ್ಮಹತ್ಯೆಗೆ ಯತ್ನಿಸಿದಳು ಆದರೆ, ವಿಧಿಯಾಟ ಬೇರೆಯಾಗಿತ್ತು. ಮಹಿಳೆಯೊಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಮಕ್ಕಳಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮುರ್ಕಗುಡ್ಡೆಯ ತಾಂಡಾ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಸಾವಿಗೀಡಾದ ಮಕ್ಕಳನ್ನು ಎರಡು ವರ್ಷದ ಪೂಜಾ ಹಾಗೂ ಒಂದು ವರ್ಷದ ಅಂಜಲಿ ಎಂದು ಗುರುತಿಸಲಾಗಿದೆ. ಇವರ ತಾಯಿ 30 ವರ್ಷದ ಅನುಷ್ಕಾ ಈ ದುಷ್ಕೃತ್ಯಕ್ಕೆ ಮುಂದಾದ ತಾಯಿ. ಅನುಷ್ಕಾರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮಕ್ಕಳಿಬ್ಬರನ್ನು ಬಾವಿಗೆಸೆದು ಆತ್ಮಹತ್ಯೆಗೆ ಮುಂದಾಗಿದ್ದ ಅನುಷ್ಕಾ ಜೀವನ್ಮರಣ ಹೋರಾಟದಲ್ಲಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಕೆಯನ್ನು ಮೇಲೆತ್ತಿ ಪಾರು ಮಾಡಿದ್ದಾರೆ. ಆದರೆ ಮಕ್ಕಳಿಬ್ಬರನ್ನು ರಕ್ಷಿಸಲು ಅವರಿಂದ ಸಾಧ್ಯವಾಗಿಲ್ಲ. ಘಟನೆಯ ಬಗ್ಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕೋಡಿ, ಹುಬ್ಬಳ್ಳಿ, ಉಡುಪಿ, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ....

ತುಮಕೂರು
ಕೆಟ್ಟು ನಿಂತಿದ್ದ ಸ್ಪಿರಿಟ್ ತುಂಬಿದ ಲಾರಿಗೆ ಸರಕುಸಾಗಣೆಯ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡು ಲಾರಿಗಳು ಹೊತ್ತಿ ಉರಿದ ಘಟನೆ ತುಮಕೂರು ಸಮೀಪದ ಹೆಬ್ಬಾಕ ಕೆರೆ ಬಳಿ ನಡೆದಿದೆ. ಮುಂಜಾನೆ ಸುಮಾರು 5 ಗಂಟೆ ಈ ಘಟನೆ ನಡೆದಿದೆ. ಕ್ಷಣಕ್ಷಣಕ್ಕೂ ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯ್ತು. ಸ್ಥಳಕ್ಕೆ ಕೋರಾ ಹಾಗೂ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. .
ಸ್ಪಿರಿಟ್ ತುಂಬಿದ ಲಾರಿ ಹಾಗೂ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಕು ಸಾಗಣೆ ವಾಹನದಲ್ಲಿ ಚಾಲಕರು ಬಚಾವ್ ಆಗಿದ್ದು. ಇದ್ರಲ್ಲಿದ್ದ ಕ್ಲೀನರ್ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.

ಉಡುಪಿ
ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಗುಂಡ್ಯಡ್ಕ 5 ಸೆಂಟ್ಸ್ ನಿವಾಸಿ ಶ್ರೀ ಕಾಂತಪ್ಪ ಎಂಬವರ ಪತ್ನಿ ಶ್ರೀಮತಿ ಸುಂದರಿ (40) ಎಂಬವರು ಸುಮಾರು 20 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರೂ ತನಗಿರುವ ಮಾನಸಿಕ ಖಾಯಿಲೆಯು ಗುಣಮುಖವಾಗದೇ ಇರುವುದರಿಂದ ಜೀವನದಲ್ಲಿ ನೊಂದು ಮೊದಲು ತನ್ನ ಮನೆಯ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಪಿರ್ಯಾದಿದಾರ ನರಂಗ (65), ತಂದೆ ಮುಂಗ್ರ, ವಾಸ ಕಂಬಳಿಬೆಟ್ಟು ಬಳಿ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 40/2013. ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಶಿವಮೊಗ್ಗ
ಕುಂಸಿ ಠಾಣೆ ಅಸ್ವಾಭಾವಿಕ ಸಾವು ಪ್ರಕರಣ ಮೃತನಾದ ಗೇಮ್ಯಾ ನಾಯ್ಕ 56 ವರ್ಷ ವಾಸ ನಾರಾಯಣಪುg ಇವರು ಹೆಂಡತಿ ತೀರಿಕೊಂಡನಂತರ ಅದನ್ನು ಮನಸ್ಸಿಗೆ ಹಚ್ಚಿಕೊಂಡು ಸರಿಯಾಗಿ ಊಟಮಾಡದೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪತ್ತಿರುತ್ತಾರೆ

ಚಿಕ್ಕೋಡಿ ಜಿಲ್ಲೆ
ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಅತ್ಯಾಚಾರ ಪ್ರಯತ್ನಕ್ಕೆ ನೊಂದ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ಎರಡು ದಿನಗಳ ಹಿಂದೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಪಟ್ಟಿರುವ 17 ವರ್ಷದ ಸಾವಿತ್ರಿ ಮುರಗೆಪ್ಪ ಮಾದರ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಮಹಾಂತೇಶ ನಿಂಗಣ್ಣ ಮುಧೋಳ (23) ಬಂಧಿಸಿರುವ ಐಗಳಿ ಪೊಲೀಸ್ ಠಾಣಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಹುಬ್ಬಳ್ಳಿ
ಕರ್ಕಿಬಸವೇಶ್ವರ ನಗರದ ಹುಲಿಗೆಮ್ಮ ಪರಶುರಾಮ ಗೊಲ್ಲದ (36) ತನ್ನ ಎರಡು ಮಕ್ಕಳನ್ನು ಬಿಟ್ಟು ಕರಗೋವಾ ಮೂಲದ ವಿಜಯ ಸದಾಶಿವ ಎಂಬುವರ ಜತೆ ವಾಸವಿದ್ದರು. ಅನೈತಿಕ ಸಂಬಂಧವಾದರು ಸುಖಿ ಜೀವನ ನಡೆಸಿದ್ದರು.
ಅಹುಲಿಗೆಮ್ಮ ಗಂಡನನ್ನು ತೊರೆದು 12 ವರ್ಷದ ಮೇಲಾಗಿತ್ತು. ಅದರೆ, ಇತ್ತೀಚೆಗೆ ಹುಲಿಗೆಮ್ಮನನ್ನು ಹುಡುಕಿಕೊಂಡು ಬಂದ ಗಂಡ ಪರಶುರಾಮ ಆಕೆ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪ್ರಿಯಕರ ವಿಜಯ ಹುಲಿಗೆಮ್ಮ ವಿರುದ್ಧ ತಿರುಗಿಬಿದ್ದಿದ್ದಾನೆ. ಹೀಗೆ ಬಿಟ್ಟರೆ ತನ್ನನ್ನು ತೊರೆಯುತ್ತಾಳೆ ಎಂಬ ಅನುಮಾನದಿಂದ ಆಕೆ ಮಲಗಿದ್ದಾಗ ಬಂಡೆಗಲ್ಲು ಹಾಕಿ ಕೊಂದಿದ್ದಾನೆ.












Click it and Unblock the Notifications