ಕ್ರೈಂ: ಮುಂದುವರೆದ ಆತ್ಮಹತ್ಯೆ ಸರಣಿ, ಇನ್ನಿತರ ಸುದ್ದಿ
ಬೆಂಗಳೂರು, ಅ. 22: ಸುಬ್ರಮಣ್ಯಪುರ, ಜೆಪಿ ನಗರ ಹಾಗೂ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಆತ್ಮಹತ್ಯಾ ಪ್ರಕರಣಗಳ ನಂತರ ಬೆಂಗಳೂರಿನ ಚೌಡೇಶ್ವರಿನಗರದಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಗಂಡನ ಕುಡಿತದ ಚಟದಿಂದ ಬೇಸತ್ತ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಚೌಡೇಶ್ವರಿನಗರದಲ್ಲಿ ನಡೆದಿದೆ. 30 ವರ್ಷದ ಸವಿತಾ ನೇಣಿಗೆ ಶರಣಾದ ಗೃಹಿಣಿ. 10 ವರ್ಷಗಳ ಹಿಂದೆ ಚಂದ್ರಹಾಸ ಎಂಬಾತನನ್ನ ವಿವಾಹವಾಗಿದ್ದ ಸವಿತಾ, ಗಂಡನ ಕುಡಿತದ ಚಟದಿಂದ ರೋಸಿ ಹೋಗಿದ್ದಳು. ಮೊನ್ನೆ ತವರಿಗೆ ಹೋಗಿ ವಾಪಸ್ ಬಂದಾಗ ಮನೆಯಲ್ಲಿದ್ದ 20 ಸಾವಿರ ರೂಪಾಯಿ ಹಣವನ್ನು ಚಂದ್ರಹಾಸ ತನ್ನ ದುಶ್ಚಟಗಳಿಗೆ ಬಳಸಿಕೊಂಡಿದ್ದನಂತೆ.
ಇದರಿಂದ ಗಂಡ-ಹೆಂಡತಿ ನಡುವೆ ಜಗಳ ತಾರಕಕ್ಕೇರಿದೆ. ಬೇಸತ್ತ ಸವಿತಾ ನೇಣಿಗೆ ಶರಣಾಗಿದ್ದಾಳೆ. ಅದರೆ, ಇದು ಕೊಲೆ ಎಂದು ಸವಿತಾ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲನಗರ ಪೊಲೀಸರು ಚಂದ್ರಹಾಸನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹನುಮಂತನಗರದಲ್ಲಿ ಸುಲಿಗೆ: ವಿಳಾಸ ಕೇಳುವ ನೆಪದಲ್ಲಿ ವಾಯುವಿಹಾರ ಮಾಡುತ್ತಿದ್ದ ವ್ಯಕ್ತಿಯನ್ನು ಮಾರಾಕಾಸ್ತ್ರಗಳಿಂದ ಬೆದರಿಸಿ ಚಿನ್ನದ ಸರ ಸುಲಿಗೆ ಮಾಡಿರುವ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀನಗರ ಕೃಷ್ಣಪ್ಪ ಬಡಾವಣೆ 1ನೇ ಮುಖ್ಯರಸ್ತೆ 1 ನೇ ಕ್ರಾಸ್ ನಿವಾಸಿ ರವಿ (45) ಎಂಬುವರು ರಾಮಾಂಜನೇಯ ಗುಡ್ಡದ ಬಳಿ ವಾಯುವಿಹಾರ ಮಾಡುತ್ತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ರವಿ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ..

ಚಿಕ್ಕಮಗಳೂರು ಕ್ರೈಂ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ. 212/2013 - ಕಲಂ: 379 ಐಪಿಸಿ ಪಿರ್ಯಾದುದಾರರು ರಾಮಣ್ಣ ಬಸಾಪುರ ವಾಸಿ ತಮ್ಮ ಮನೆ ಹತ್ತಿರ ಹಸುಗಳನ್ನು ಕಟ್ಟಿ ಹಾಕಿದ್ದು, ಯಾರೋ ಕಳ್ಳರು ಬಿಚ್ಚಿಕೂಂಡು ಯಾವುದೋ ವಾಹನದಲ್ಲಿ ತುಂಬಿಕೂಂಡು ಹೋಗಿರಬಹುದೆಂದು ಹಸುಗಳನ್ನು ಹುಡುಕುತ್ತಿರುವಾಗ
ಪುಟ್ಟರಾಜು ಎಂಬುವವರು ಪಿರ್ಯಾದುದಾರರುಗೆ ಪೋನ್ ಮಾಡಿ ತನ್ನ ಎತ್ತು ನಿಮ್ಮ ಹಸುಗಳು ಒಟ್ಟು 03 ದನಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೂಂಡು ಕೆಎ18ಎ3652ರ ವಾಹನದಲ್ಲಿ ಕಡವಂತಿ ಗ್ರಾಮದ ಹತ್ತಿರ ಹೋಗುತ್ತಿದ್ದವರನ್ನು ತಾನು ರಮೇಶ, ಉಮೇಶ ,ಗೋಪಾಲ, ಲಕ್ಷ್ಮಣ, ಮಂಜು ಎಲ್ಲರೂ ಸೇರಿ ರಸ್ತೆಯಲ್ಲಿ ಕಲ್ಲುಗಳನ್ನು ಅಡ್ಡ ಇಟ್ಟಿದ್ದರಿಂದ ದನಗಳನ್ನು ಮತ್ತು ಗಾಡಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ. ಆದ್ದರಿಂದ ಕಳ್ಳತನ ಮಾಡಿಕೂಂಡು ಹೋಗುತ್ತಿರುವ ಹಸು ಮತ್ತು ಎತ್ತುಗಳ ಅಂದಾಜು ಬೆಲೆ ಸುಮಾರು 30.000ರೂಗಳಾಗಿರುತ್ತದೆ.

ರಾಜ್ಯ ಕ್ರೈಂ ನ್ಯೂಸ್ ಸಂಗ್ರಹ ಶಿವಮೊಗ್ಗ ಕ್ರೈಂ
ವಿನೋಬನಗರ ಠಾಣೆ - ದ್ವಿಚಕ್ರ ವಾಹನ ಕಳುವು ಪ್ರಕರಣ : ಹೆಚ್.ಹೆಚ್.ನಾಗೇಶ ಬಿನ್ ಹನುಮಂತಶೆಟ್ಟಿ 55 ವರ್ಷ, ವಿನೋಬನಗರ ಶಿವಮೊಗ್ಗ ಇವರು ತನ್ನ ಮನೆಯ ಹತ್ತಿರ ನಿಲ್ಲಿಸಿದ ಕೆಎ 14 ವಿ-6598 ಹೊಂಡಾ ಅಕ್ಟಿವಾ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ . ಅಂದಾಜು ಬೆಲೆ ರೂ. 30,000/-ಗಳು

ಉಡುಪಿ :ಮನುಷ್ಯ ಕಾಣೆ
ಕಾಪು: ಸತೀಶ್ ತಂದೆ: ಈಶ್ವರ ವಾಸ: ಶ್ರೀ ದೇವಿ ಕೃಪಾ ಜನಪ್ರಿಯ ಸ್ಟೋರ್ ಬಳಿ ಮಜೂರು ಸರ್ಕಲ್ ಉಡುಪಿ ಇವರ ಅಣ್ಣ ಸುಮಾರು 29 ವರ್ಷ ಪ್ರಾಯದ ಯೋಗಿಶ್ ಇವರು ಮಜೂರಿನಿಂದ ಹೋದವರು ಈವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಸತೀಶ್ ಇವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 238/2013 ಕಲಂ: ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಚಿನ್ನದ ಸರ ಕಳ್ಳತನ
ಕೋಲಾರ ತಾಲ್ಲೂಕು ತಿಪ್ಪಸಂದ್ರ ಗ್ರಾಮದ ವಾಸಿಯಾದ ಅಂಬಿಕಾ ಎಂಬುವರು ಅ.22 ರಂದುಕೋಲಾರದಿಂದ ಬಸ್ ನಲ್ಲಿ ಬಂದು ಬೇತಮಂಗಲ ರಸ್ತೆಯಲ್ಲಿ ತಮ್ಮ ಗ್ರಾಮದ ಗೇಟ್ ನಲ್ಲಿ ಇಳಿದು ಗ್ರಾಮದ ಕಡೆ ನಡೆದುಕೊಂಡು ಹೋಗುತ್ತಿದ್ದರು. ಅ ಸಮಯದಲ್ಲಿ ಹಿಂದುಗಡೆಯಿಂದ ದ್ಚಿಚಕ್ರ ವಾಹನ ಸಂ. ಕೆಎ-08-ಕೆ-5257 ರಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅಕೆಯ ಕತ್ತಿನಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಸರವನ್ನು ಮತ್ತು ಬ್ಯಾಗ್ ನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾನೆ. ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.












Click it and Unblock the Notifications