ಹಾಸನದಲ್ಲಿ ಹೊಯ್ಸಳ ಉತ್ಸವಕ್ಕೆ ಅದ್ದೂರಿ ಸಿದ್ಧತೆ

ಹಾಸನ, ಜ. 6 : ಹೊಯ್ಸಳ ಉತ್ಸವಕ್ಕೆ ಹಾಸನ ಜಿಲ್ಲೆ ಸಜ್ಜಾಗುತ್ತಿದೆ. ಉತ್ಸವದ ಕಾರ್ಯಕ್ರಮಗಳು ನಡೆಯುವ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಜನವರಿ 9, 10 ಮತ್ತು 11 ರಂದು ಹೊಯ್ಸಳ ಉತ್ಸವ ನಡೆಯಲಿದೆ.

ಸೋಮವಾರ ಹಾಸನ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಲೋಕೋಪಯೋಗಿ ಇಲಾಖೆಯ ರುದ್ರಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಪೂರ್ವ ಸಿದ್ಧತೆಗಳ ಪರಿಶೀಲನೆ ನಡೆಸಿದರು.

Hoysala Utsav

ಜನವರಿ 9, 10 ಮತ್ತು 11 ರಂದು ಹೊಯ್ಸಳ ಉತ್ಸವ ಆಚರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಅರ್ಥಪೂರ್ಣವಾಗಿ ಹೊಯ್ಸಳ ಉತ್ಸವವನ್ನು ಆಚರಿಸಲಾಗುತ್ತದೆ ಎಂದು ಡಾ.ಎಚ್.ಎನ್.ಗೋಪಾಲಕೃಷ್ಣ ಅವರು ಹೇಳಿದರು. [ಹಾಸನ ಉದ್ಯೋಗ ಮೇಳದ ಮಾಹಿತಿ ಇಲ್ಲಿದೆ]

ಉದ್ಯೋಗ ಮೇಳ : ಹೊಯ್ಸಳ ಉತ್ಸವದ ಪ್ರಯುಕ್ತ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯವರಿಗೆ ಉದ್ಯೋಗಾವಕಾಶವನ್ನು ಒದಗಿಸಲು ಹಾಸನ ಜಿಲ್ಲಾಡಳಿತ ನಿರ್ಧರಿಸಿದೆ. ಅದಕ್ಕಾಗಿ ಜನವರಿ 9 ಮತ್ತು 10 ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. [ಗೊಂದಲಗಳ ನಡುವೆ ಹೊಯ್ಸಳ ಉತ್ಸವಕ್ಕೆ ಭರದ ಸಿದ್ಧತೆ]

ಫಲಪುಷ್ಪ ಪ್ರದರ್ಶನ : ಹೊಯ್ಸಳ ಉತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯ ವತಿಯಿಂದ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ತೋಟಗಾರಿಕೆ ಇಲಾಖೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

Hassan

ಶ್ವಾನ ಪ್ರದರ್ಶನ : ಜನವರಿ 11ರಂದು ಬೆಳಗ್ಗೆ 8 ರಿಂದ 11 ಗಂಟೆಯ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಹೊಯ್ಸಳ ಉತ್ಸವದ ಅಂಗವಾಗಿ ಪಶುಪಾಲಾನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖಾ ವತಿಯಿಂದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಕು ನಾಯಿಗಳಿಗೆ ಇಲಾಖಾ ವತಿಯಿಂದ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+