SSLC: ವಿಶೇಷ ಬೋಧನಾ ತರಗತಿ ರದ್ದುಗೊಳಿಸಿ ಎಂದ ಶಿಕ್ಷಕರು
ಬೆಂಗಳೂರು, ಮೇ 16: ಎಸ್ಎಸ್ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿ ಘೋಷಣೆ ಮಾಡಲಾಗಿದೆ. ಜೂನ್‌ನಲ್ಲಿ ನಡೆಯವ ಪರೀಕ್ಷೆಗಳಿಗೆ ಮೇ 15 ರಿಂದ ಜೂನ್ 5ರ ತನಕ ಪ್ರೌಢಶಾಲೆಗಳಲ್ಲಿ 'ವಿಶೇಷ ಬೋಧನಾ ಪರಿಹಾರ ತರಗತಿ'ಗಳನ್ನು ನಡೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಆದ್ದರಿಂದ ಮೇ 29ರ ತನಕ ಶಾಲೆಗಳಿಗೆ ಬೇಸಿಗೆ ರಜೆ ಇದ್ದರೂ ಸಹ ಶಿಕ್ಷಕರು ರಜೆ ತ್ಯಾಗ ಮಾಡಿ ಬರಬೇಕಿದೆ.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ (ರಿ) 'ವಿಶೇಷ ಬೋಧನಾ ಪರಿಹಾರ ತರಗತಿ'ಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿದೆ. ಈ ಕುರಿತು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಮೇ 15ರಂದು ಮನವಿ ಸಲ್ಲಿಕೆ ಮಾಡಲಾಗಿದೆ.

ಈ ಮನವಿ ಪತ್ರ ಬೇಸಿಗೆ ರಜೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪುನರ್ಬಲನ ತರಗತಿಗಳನ್ನು ರದ್ದುಗೊಳಿಸುವ ಕುರಿತು ಎಂದು ವಿಷಯ ಪಸ್ತಾಪಿಸಲಾಗಿದೆ. ಅಲ್ಲದೇ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ಇವರ ವಿಡಿಯೋ ಕಾನ್ಫರೆನ್ಸ್ ಸೂಚನೆಗಳನ್ನು ಉಲ್ಲೇಖ ಮಾಡಲಾಗಿದೆ.
ಮನವಿ ಪತ್ರದ ಅಂಶಗಳು: ದಿನಾಂಕ 13/05/2024 ರಂದು ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಹುಮಹಡಿ ಕಟ್ಟಡ ಸಚಿವಾಲಯ ಬೆಂಗಳೂರು ಇವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬೇಸಿಗೆ ರಜೆ ಅವಧಿಯಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನರ್ಬಲದ ತರಗತಿಗಳನ್ನು ತೆಗೆದುಕೊಳ್ಳಲು ಸಹಶಿಕ್ಷಕರು ಶಾಲಾ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶಿಸಿರುವುದು ಗಮನಕ್ಕೆ ಬಂದಿದ್ದ, ಈ ವಿಚಾರ ಶಿಕ್ಷಕರ ಸಮುದಾಯದಲ್ಲಿ ತೀವ್ರ ಅಸಮಾಧಾನ, ಆಕ್ರೋಶಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದೆ.
ಶಿಕ್ಷಣ ಇಲಾಖೆ ರಜಾ ಸಹಿತ ಇಲಾಖೆಯಾಗಿದ್ದರೂ ಸಹ ಶಿಕ್ಷಕರು ರಜೆ ಅವಧಿಯಲ್ಲಿ ಏಪ್ರಿಲ್ ತಿಂಗಳು ಬಹುತೇಕ ಅವಧಿಯಲ್ಲಿ ಎಸ್ಎಸ್ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳಿಸಿರುತ್ತಾರೆ. ಅಲ್ಲದೆ ಚುನವಣಾ ಕರ್ತವ್ಯಗಳು ಚೆಕ್ ಪೋಸ್ಟ್, ಸೆಕ್ಟರ್, ಮಾಸ್ಟರ್ ಟೈನರ್ ಬಿ.ಎಲ್.ಓ ನಿಯೋಜನೆ ಹೀಗೆ ಹಲವಾರು ಕರ್ತವ್ಯಗಳಲ್ಲಿಯೂ ರಜಾ ಅವಧಿಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಅಲ್ಲದೆ ಶೈಕ್ಷಣಿಕ ಅವಧಿಯಲ್ಲಿಯೂ ಶಿಕ್ಷಕರು ಪಾಠಬೋಧನೆ ಪರೀಕ್ಷೆಗಳ ಆಯೋಜನೆ ಪ್ರತಿ ದಿನ ವಿಶೇಷ ತರಗತಿ, ಗುಂಪು ಅಧ್ಯಯನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗಮನ ನೀಡುವುದು, ಪಾಸಿಂಗ್ ಪ್ಯಾಕೇಜ್ ಅಭ್ಯಾಸ ಮಾಡಿಸುವುದು, ಮಕ್ಕಳ ಮನೆ ಭೇಟಿ, ಪೋಷಕರ ಸಭೆಗಳು, ಪೋಷಕರ ಹಾಗೂ ತಾಯಂದಿರ ಸಭೆಗಳು, ವಿಷಯವಾರು ತಜ್ಞರಿಂದ ತರಬೇತಿಗಳು, ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಗುಂಪು ಅಧ್ಯಯನ ಕೆಲವು ಜಿಲ್ಲೆಗಳಲ್ಲಿ ರಾತ್ರಿ ಶಾಲೆಗಳು ಇಷ್ಟೆಲ್ಲ ಕಾರ್ಯಗಳನ್ನು ನಿರ್ವಹಿಸಿ ವಿದ್ಯಾಥಿಗಳು ಉತ್ತೀರ್ಣರಾಗಲು ಸಹಶಿಕ್ಷಕರು ಪ್ರಯತ್ನ ಪಟ್ಟಿದ್ದಾರೆ. ಇಲಾಖೆಗಾಗಲಿ, ಅಧಿಕಾರಿಗಳಿಗಾಗಲಿ ಸ್ವಲ್ಪವೂ ಶಿಕ್ಷಕರ ಮೇಲೆ ಗೌರವ ಮಾನವೀಯತೆ ಇಲ್ಲ ಎಂಬುದು ರಾಜ್ಯದ ಬಹುತೇಕ ಶಿಕ್ಷಕರ ಒಮ್ಮತದ ಅಭಿಪ್ರಯವಾಗಿದೆ.
ಶಿಕ್ಷಕರು ಇಲಾಖೆ ಕಾರ್ಯದಿಂದ ಹೊರತಾಗಿ ಸಿಕ್ಕಿರುವ ಮೇ ಒಂದೇ ತಿಂಗಳ ರಜೆ ಅವಧಿಯಲ್ಲಿ ಕುಟುಂಬ, ಮಕ್ಕಳ ಶೈಕ್ಷಣಿಕ ಪ್ರವಾಸ, ಮನೆ ಸ್ಥಳಾಂತರ, ವರ್ಗಾವಣೆ, ಪ್ರವಾಸ, ವೈದ್ಯಕೀಯ ಚಿಕಿತ್ಸೆಗಳು ಹೀಗೆ ಹಲವು ಯೋಜನೆಗಳನ್ನು ನಿರ್ಧರಿಸಿ ಕೊಂಡಿರುತ್ತಾರೆ ಮತ್ತು ಕುಟುಂಬ ಸಮೇತರಾಗಿ ಆರೋಗ್ಯ ತಪಾಸಣೆ ಮತ್ತು ಪ್ರವಾಸ ಹೀಗೆ ಬೇರೆ ಬೇರೆ ಕೆಲಸ ಮತ್ತು ಕಾರಣಗಳಿಗಾಗಿ ಸಾವಿರ, ಲಕ್ಷಗಟ್ಟಲೇ ಹಣ ನೀಡಿ ಮುಂಗಡ ಬುಕಿಂಗ್ ಮಾಡಿಕೊಂಡಿರುತ್ತಾರೆ.
ಶಿಕ್ಷಕರು ವರ್ಷವೀಡಿ ಪಾಠಬೋಧನೆ ಮಾಡಿಯೂ ಮಕ್ಕಳು ಅನುತ್ತೀರ್ಣರಾಗಿದ್ದಾರೆ ಅಂದರೆ 10 ದಿನಗಳಲ್ಲಿ ಪುನರ್ಬಲನ ತರಗತಿಗಳನ್ನು ತೆಗೆದುಕೊಂಡರೆ ಉತ್ತೀರ್ಣರಾಗಿಬಿಡುತ್ತಾರೆಯೇ?. ಹಾಗಾದರೇ ಶಿಕ್ಷಕರು ವರ್ಷವೀಡಿ ಪಾಠಬೋಧನೆ ಮಾಡುವುದು ಉದ್ದೇಶವೇನಾಗಿದೆ? ಹಾಗೂ ಅಗತ್ಯವಿದೆಯೇ?. ದಿನಕ್ಕೊಂದು ಶಿಕ್ಷಣ ಇಲಾಖೆಯ ಆದೇಶಗಳಿಂದ ಮಕ್ಕಳು ಮತ್ತು ಶಿಕ್ಷಕರು ಗೊಂದಲಕ್ಕಿಡಾಗಿದ್ದಾರೆ ಎಂದು ಮನವಿ ಪತ್ರ ಹೇಳಿದೆ.
ಸರ್ಕಾರ ಮತ್ತು ಇಲಾಖೆಯು ಕೇವಲ ಪ್ರೌಢಶಾಲಾ ಸಹ ಶಿಕ್ಷಕರ ಮೇಲೆ ಮಾನಸಿಕ ಮತ್ತು ದೈಹಿಕ ಒತ್ತಡ ಹೇರುತ್ತಿರುವುದು ಮಕ್ಕಳ ಮತ್ತು ಶಿಕ್ಷಕರ ಮಾನಸಿಕ, ದೈಹಿಕ ಅನಾರೋಗ್ಯಕ್ಕೆ ಕಾರಣವಾಗಿದೆ. ಉತ್ತಮ ಶಿಕ್ಷಣ ನೀಡುವ ಮನಸ್ಥಿತಿಯಲ್ಲಿರುವ ಶಿಕ್ಷಕರ ಹೃದಯವನ್ನು ಒಂದು ರೀತಿ ಕದಡುತ್ತೀದ್ದಾರೆ ಎಂಬ ಭಾವನೆ ಬಹಳಷ್ಟು ಶಿಕ್ಷಕರಲ್ಲಿ ಕಂಡುಬಂದಿದೆ. ಈ ಕಾರಣಗಳಿಂದಾಗಿ ಹಾಗೂ ಇಂತಹ ಅದೇಶಗಳಿಂದಾಗಿ ಬಹುತೇಕ ಶಿಕ್ಷಕರು ಭ್ರಮನಿರಸನಗೊಂಡು ಸ್ವಯಂ ನಿವೃತ್ತಿಗೆ ಆಲೋಚನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ.
ವರ್ಷವಿಡೀ ಶಿಕ್ಷಕರು, ಮಕ್ಕಳು ನಿರಂತರ ಒತ್ತಡದ ಕಾರ್ಯದಲ್ಲಿ ನಿರತರಾಗಿ ಇರುತ್ತಾರೆ ಎನ್ನುವ ಕಾರಣಕ್ಕಾಗಿಯೇ ಪುರಾತನ ಕಾಲದಿಂದಲೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಕ್ಟೋಬರ್ 2 ರಿಂದ ಅಕ್ಟೋಬರ್ 30ರವರೆಗೆ ದಸರಾ ರಜೆ ಹಾಗೂ ಏಪ್ರಿಲ್ 10 ರಿಂದ ಮೇ 29 ರವರೆಗೆ ಬೇಸಿಗೆ ರಜೆಯನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ರಜೆಗಳನ್ನು ಕಡಿತಗೊಳಿಸಲಾಗಿದೆ. ಪ್ರೌಢಶಾಲಾ ಸಹಶಿಕ್ಷಕರು ರಜಾ ಸಹಿತ ಇಲಾಖಾ ನೌಕರರಾಗಿದ್ದು 227 ದಿನಗಳು ಕರ್ತವ್ಯ ನಿರ್ವಹಿಸುವ ಅವಧಿಯಾಗಿರುತ್ತದೆ ಮತ್ತು ರಜಾ ರಹಿತ ಇಲಾಖಾ ನೌಕರರು 217 ದಿನಗಳು ಕರ್ತವ್ಯ ನಿರ್ವಹಿಸುವ ಅವಧಿಯಾಗಿರುತ್ತದೆ.
ಪ್ರೌಢಶಾಲಾ ಸಹಶಿಕ್ಷಕರು ಸರ್ಕಾರಿ ರಜೆ 107, ಸಾಂದರ್ಭಿಕ ರಜೆ 15, ನಿರ್ಬಂಧಿತ ರಜೆ 2, ಗಳಿಕೆ ರಜೆ 10, ವಿವೇಚನಾ ರಜೆ 04 ಸೇರಿ 138 ಒಟ್ಟು ರಜೆಗಳಿರುತ್ತವೆ ಹಾಗೂ ರಜಾ ರಹಿತ ಇಲಾಖಾ ನೌಕರರು ಸರ್ಕಾರಿ ರಜೆ 96, ಸಾಂದರ್ಭಿಕ ರಜೆ 10, ನಿರ್ಬಂಧಿತ ರಜೆ 2, ಗಳಿಕೆ ರಜೆ 30, ಅರ್ಧ ವೇತನ ರಜೆ 10, ವಿವೇಚನಾ ರಜೆ ಸೇರಿ 148 ಒಟ್ಟು ರಜೆಗಳಿರುತ್ತವೆ. ಇಲ್ಲಿ ಗಮನಿಸಬೇಕಾದದ್ದು ರಜಾ ಸಹಿತ ಮತ್ತು ರಜಾ ರಹಿತ ಇಲಾಖಾ ನೌಕರರು 5 ರಿಂದ 10 ದಿನಗಳ ರಜೆ ಅಂತರಗಳನ್ನು ಹೊಂದಿದ್ದು ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗಿರುವುದು ತಾರತಮ್ಯಕ್ಕೆ ಕಾರಣವಾಗಿರುತ್ತದೆ.
ಸದರಿ ವಿಷಯದ ಬಗ್ಗೆ ರಾಜ್ಯದ ಶಿಕ್ಷಕರುಗಳಿಂದ ನಿರಂತರ ಮಾನಸಿಕ ಒತ್ತಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುತ್ತಾರೆ ಬಿಇಒ, ಡಿಡಿಪಿಐ ಮೂಲಕ ಶಿಕ್ಷಕರನ್ನು ರಜಾ ಅವಧಿಯಲ್ಲಿಯೂ ಒತ್ತಾಯಪೂರ್ವಕವಾಗಿ ಕರ್ತವ್ಯಕ್ಕೆ ಹಾಜರಾಗಲೂ ಹೇಳುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ.
ಆದ್ದರಿಂದ ಮೇ 15ರ ಬದಲು ಎಸ್ಎಸ್ಎಲ್‌ಸಿ ಪುನರ್ಬಲನ ತರಗತಿಗಳನ್ನು ಮೇ 29 ರಿಂದ ಜೂನ್ 6 ರವರೆಗೆ 10 ದಿನಗಳ ಅವಧಿಗೆ ಆಯೋಜಿಸಲು ಈ ಮೂಲಕ ತಮ್ಮಲ್ಲಿ ಕೋರುತ್ತೇವೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
-
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications