Get Updates
Get notified of breaking news, exclusive insights, and must-see stories!

SSLC ಮತ್ತು PUC ಪಾಸಿಂಗ್ ಮಾರ್ಕ್ಸ್ ಬದಲಾವಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಅಪ್ಡೇಟ್ಸ್‌

SSLC and PUC Passing Marks: ಕಳೆದ ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪಾಸಿಂಗ್ ಮಾರ್ಕ್ಸ್‌ನ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಅಲ್ಲದೇ ಇದರಲ್ಲಿ ಕೆಲವೊಂದು ಗೊಂದಲಗಳು ಸಹ ಈ ಹಿಂದಿನ ವರ್ಷ ಸೃಷ್ಟಿಯಾಗಿತ್ತು. ಅಲ್ಲದೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗ್ರೇಸಿಂಗ್ ಮಾರ್ಕ್ಸ್ ಕೊಡುವ ವಿಚಾರವೂ ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದೀಗ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ತೇರ್ಗಡೆಗೆ ನಿಗದಿ ಮಾಡಿರುವ ಅಂಕ ಹಾಗೂ ಅದರಲ್ಲಿ ಏನಾದರೂ ಬದಲಾವಣೆ ಇರಲಿದೆಯೇ ಎನ್ನುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಪ್ಡೇಟ್ಸ್‌ ಕೊಟ್ಟಿದ್ದಾರೆ.

SSLC and PUC New Passing Mark Changes Only 33 Revisions Minister Madhu Bangarappa Announces

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪಾಸಿಂಗ್ ಮಾರ್ಕ್ಸ್‌ಗೆ ಸಂಬಂಧಿಸಿದ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಇನ್ನು Sslc ಮತ್ತು Puc ಪರೀಕ್ಷೆ ತೇರ್ಗಡೆಗೆ ನಿಗದಿ ಮಾಡಿರುವ ಶೇ.33 ಅಂಕವು ಈ ವರ್ಷದ ಶೈಕ್ಷಣಿಕ ಸಾಲಿನಿಂದಲೇ ಪ್ರಾರಂಭವಾಗಲಿದೆ. ಅಲ್ಲದೇ ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಕರಣೆ ಆಗಿಲ್ಲ ಎಂದೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ ಎಂದು "ಪ್ರಜಾವಾಣಿ" ವರದಿ ಮಾಡಿದೆ.

ಮುಂದುವರಿದು ಪಾಸಿಂಗ್ ಮಾರ್ಕ್ಸ್‌ಗೆ (ಉತ್ತೀರ್ಣತೆಯ) ಕನಿಷ್ಠ ಅಂಕವನ್ನು ಶೇ.33ಕ್ಕೆ ನಿಗದಿ ಮಾಡಿ ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿದ ನಂತರವೂ ಕೆಲವರು ಇದಕ್ಕೆ ವಿರೋಧಿಸುತ್ತಿದ್ದಾರೆ. ಲಕ್ಷಾಂತರ ಮಕ್ಕಳಿಗೆ ಈ ಎರಡು ಅಂಕವೇ ನಿರ್ಣಾಯಕವಾಗಿರುತ್ತವೆ. ಅಲ್ಲದೇ ಡ್ರೈವಿಂಗ್ ಲೈಸೆನ್ಸಿಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಅವಶ್ಯಕತೆ ಇರುತ್ತದೆ ಎಂದಿದ್ದಾರೆ.

ಹೊರ ರಾಜ್ಯದಿಂದ ಬರುವ ಕೆಲವರು ಕರ್ನಾಟಕದ ಕೆಲವು ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಕೆಲವು ನಿರ್ದಿಷ್ಟ ಹುದ್ದೆಗಳಿಗೆ ಗಳಿಸಿದ ಅಂಕಗಳಿಗಿಂತಲೂ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರವಷ್ಟೇ ಅಗತ್ಯವಿದೆ ಎಂದು ಅಂಕ ಇಳಿಕೆ ಪ್ರಕ್ರಿಯೆಯ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಇದೇ ಮಾದರಿ: ಇನ್ನು ದೇಶದ ಬಹುತೇಕ ರಾಜ್ಯಗಳಲ್ಲಿ ಪಾಸಿಂಗ್ ಮಾರ್ಕ್ಸ್‌ ಇಳಿಕೆ ಮಾಡಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ Sslc ಪಾಸಿಂಗ್ ಮಾರ್ಕ್ಸ್‌ 33 ಇದೆ ಎಂದು ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಪಾಸಿಂಗ್ ಮಾರ್ಕ್ಸ್‌ ವಿವಿಧ ರಾಜ್ಯಗಲ್ಲಿ ಶೇ 30ರಿಂದ 33 ಇದೆ. ಅಲ್ಲದೇ ಆಡಳಿತ ಸುಧಾರಣಾ ಆಯೋಗವು ಸಹ ಇದೇ ಶಿಫಾರಸು ಮಾಡಿದೆ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+