Breaking; ವಿಮಾನ ನಿಲ್ದಾಣದ ಭದ್ರತೆಗೆ ವಿಶೇಷ ಪಡೆ ಸ್ಥಾಪನೆ

ಬೆಂಗಳೂರು, ಜನವರಿ 18; ಕರ್ನಾಟಕ ಸರ್ಕಾರ ವಿಮಾನ ನಿಲ್ದಾಣದ ಭದ್ರತೆಗಾಗಿ ಒಂದು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಸೃಜಿಸುವ ಬಗ್ಗೆ ಆದೇಶ ಹೊರಡಿಸಿದೆ.

ಒಳಾಡಳಿತ ಇಲಾಖೆ (ಪೊಲೀಸ್ ವೆಚ್ಚ) ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಎನ್. ವನಜ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮಹಾನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರು, ನೃಪತುಂಗ ರಸ್ತೆ, ಬೆಂಗಳೂರು ಇವರಿಗೆ ತಿಳಿಸಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದ ಕಡೆಗೆ ಗಮನ ಸೆಳೆಯುತ್ತಾ, ಪ್ರಸ್ತಾವನೆಯ ಸಂಬಂಧ ಆರ್ಥಿಕ ಇಲಾಖೆಯು ಈ ಕೆಳಕಂಡಂತೆ ಅಭಿಪ್ರಾಯಿಸಿರುತ್ತದೆಂದು ತಿಳಿಸಲು ನಿರ್ದೇಶಿತಳಾಗಿದ್ದೇನೆ ಎಂದು ಹೇಳಿದ್ದಾರೆ.

Special Force May Set Up For Airport Security

ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಹೊಸ ಬೆಟಾಲಿಯನ್ ಸೃಜನೆಯಿಂದ ಹಣಕಾಸಿನ ಬದ್ಧತೆ ಉಂಟಾಗುವುದರಿಂದ ಮತ್ತು ಪ್ರಸ್ತಾವನೆಯಂತ ಅಗತ್ಯವಿರುವ 860 ಕಾರ್ಯಕಾರಿ ವೃಂದದಲ್ಲಿ 432 ಹುದ್ದೆಗಳನ್ನು ವಿಮಾನ ನಿಲ್ದಾಣಗಳ ಭದ್ರತೆಗಾಗಿ ನಿಯೋಜಿಸಿರುವುದರಿಂದ, ಈಗಾಗಲೇ ಮಂಜೂರಾದ ಬಟಾಲಿಯನ್‌ಗಳಿಗೆ, ಮಂಜೂರಾದ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಕೊಂಡು ಉಳಿಕ 428 ಹುದ್ದೆಗಳಿಗೆ ನಿಯೋಜಿಸುವುದನ್ನು ಪರಿಶೀಲಿಸುವಂತೆ ತಿಳಿಸಿದೆ.

ದೇಶದ ವಿಮಾನ ನಿಲ್ದಾಣಗಳ ಭದ್ರತೆಯನ್ನು ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ ನೋಡಿಕೊಳ್ಳುತ್ತಿದೆ. ಈಗ ಇದೇ ಮಾದರಿಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯನ್ನು ಸ್ಥಾಪನೆ ಮಾಡಲಾಗುತ್ತದೆ.

ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ಉಡಾನ್ ಯೋಜನೆ ಅನ್ವಯ ಟೈರ್-2 ಹಾಗೂ ಟೈರ್-3 ಶ್ರೇಣಿ ನಗರಗಳಲ್ಲಿನ 60ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ಒಳಗೊಂಡ 1650 ಟ್ರೂಪ್‌ಗಳನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿತ್ತು.

ಈ ಕುರಿತು ಬಿಸಿಎಎಸ್ ಹಾಗೂ ಸಿಐಎಸ್‌ಎಫ್ ಸಮಾಲೋಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಉಗ್ರ ನಿಗ್ರಹ ಭದ್ರತಾ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವಾಲಯದಿಂದ ಅಂತಿಮ ಅನುಮೋದನೆ ಬಾಕಿ ಇದೆ.

ಪ್ರಸ್ತುತ ಉಡಾನ್‌ ಅನ್ವಯ ಕಾರ್ಯ ನಿರ್ವಹಣೆ ಮಾಡುತ್ತಿರುವ ಕೆಲವು ಟರ್ಮಿನಲ್‌ಗಳಲ್ಲಿ ಸಿಐಎಸ್‌ಎಫ್ ಯೋಧರನ್ನು ನಿಯೋಜನೆ ಮಾಡಲಾಗಿದೆ. ಇನ್ನೂ ಕೆಲವು ಟರ್ಮಿನಲ್‌ಗಳಲ್ಲಿ ರಾಜ್ಯ ಪೊಲೀಸ್ ಪಡೆಯ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+