Express Trains: ವಿವಿಧ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆಗಳಲ್ಲಿ ಬದಲಾವಣೆ

ಹುಬ್ಬಳ್ಳಿ, ಜನವರಿ 22: ಕರ್ನಾಟಕ ಒಳಗೊಂಡೊಂತೆ ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ನೈಋತ್ಯ ರೈಲ್ವೆಯು (SWR) ಈ ಕೆಳಗಿನ ರೈಲುಗಳಿಗೆ ರೈಲು ಸಂಖ್ಯೆಗಳಲ್ಲಿ ಬದಲಾವಣೆ ಮಾಡಿದೆ. ರೈಲುಗಳಿಗೆ ಈಗಾಗಲೇ ಹೊಸ ಸಂಖ್ಯೆಗಳನ್ನು ನೀಡಲಾಗಿದೆ. ರೈಲುಗಳ ಹೊಸ ಸಂಖ್ಯೆಯು ಮಾರ್ಚ್ 2025 ರಿಂದ ಜಾರಿಗೆ ಬರಲಿವೆ ಎಂದು ಹುಬ್ಬಳ್ಳಿಯ ರೈಲ್ವೆ ವಯಲದ ಅಧಿಕರಿಗಳು ಮಾಹಿತಿ ನೀಡಿದ್ದಾರೆ.

ಯಾವೆಲ್ಲ ಎಕ್ಸ್‌ಪ್ರೆಸ್ ರೈಲು ಸಂಖ್ಯೆ ಬದಲಾಗಿವೆ: ಪಟ್ಟಿ ಇಲ್ಲಿದೆ

* ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲಿನ ಸಂಖ್ಯೆ 12609 ಇದ್ದದ್ದು, 16551 ಕ್ಕೆ ಬದಲಾಗಲಿದೆ. ಇದು ಮಾರ್ಚ್ 1, 2025 ರಿಂದ ಆರಂಭವಾಗುವ ಪ್ರಯಾಣದಿಂದ ಜಾರಿಗೆ ಬರುತ್ತದೆ.

South Western Railway Changes these Express Trains Number from March 2025

* ಮೈಸೂರು- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12610 ರಿಂದ 16552 ಕ್ಕೆ ಬದಲಾಗಲಿದೆ.

* ಯಶವಂತಪುರ-ತಿರುವನಂತಪುರಂ ನಾರ್ತ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 22677 ರಿಂದ 16561 ಕ್ಕೆ ಬದಲಾಗಲಿದೆ. ಇದು ಮಾರ್ಚ್ 6, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

* ತಿರುವನಂತಪುರಂ ನಾರ್ತ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 22678 ರಿಂದ 16562 ಕ್ಕೆ ಬದಲಾಗುತ್ತದೆ. ಹೊಸ ಸಂಖ್ಯೆಯ ರೈಲು ಮಾರ್ಚ್ 7, 2025 ರಿಂದ ಸಂಚಾರ ನಡೆಸಲಿದೆ.

* ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 17311 ರಿಂದ 20679 ಕ್ಕೆ ಬದಲಾಗುತ್ತದೆ. ಈ ರೈಲು ಸಹ ಮಾರ್ಚ್ 7, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

* ಎಸ್ಎಸ್ಎಸ್ ಹುಬ್ಬಳ್ಳಿ- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 17312 ರಿಂದ 20680 ಕ್ಕೆ ಬದಲಾಗಲಿದೆ. ಮಾರ್ಚ್ 6 ಈ ಹೊಸ ಸಂಖ್ಯೆಯ ರೈಲು ಸಂಚಾರ ಆರಂಭಿಸುವುದರೊಂದಿಗೆ ಜಾರಿಗೆ ಬರಲಿದೆ. ಈ ಮೇಲಿನ ರೈಲಿನ ಸಂಖ್ಯೆ ಮಾತ್ರವೇ ಬದಲಾಗಿದೆ. ಮಾರ್ಗವಾಗಲಿ, ನಿಲುಗಡೆ ನೀಡುವ ನಿಲ್ದಾಣಗಳು, ಸಮಯದಲ್ಲಿ ಯಾವ ಬದಲಾವಣೆ ಆಗಿಲ್ಲ ಎಂದು ಅಧಿಕಾರಿಗಳು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.

South Western Railway Changes these Express Trains Number from March 2025

ಈ ಮಾರ್ಗದ ಮೆಮು ರೈಲು ಸಂಚಾರ ರದ್ದು

ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ನಡುವೆ ಚಲಿಸುತ್ತಿದ್ದ ಮೆಮು ವಿಶೇಷ ರೈಲುಗಳ ಸಂಚಾರ ಸೇವೆ ರದ್ದುಗೊಳಿಸಲಾಗಿದೆ. ಜನವರಿ 20, 2025 ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ. ಆ ರೈಲುಗಳ ಸಂಖ್ಯೆ, ಮಾಹಿತಿ ಇಲ್ಲಿದೆ.

* ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ವೆಂಟ್-ಚಿಕ್ಕಬಳ್ಳಾಪುರ ಮೆಮು ವಿಶೇಷ ರೈಲು (ಸಂಖ್ಯೆ 06535/06536 ಮತ್ತು ಸಂಖ್ಯೆ 06537/06538) ಸೇವೆಯು ಜನವರಿ 20, 2025 ರಿಂದ ಮುಂದಿನ ಆದೇಶದವರೆಗೆ ರದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+