ನೈಋತ್ಯ ರೈಲ್ವೆ ಪ್ರಕಟಣೆ; ಹಲವು ರೈಲು ಸಂಚಾರದಲ್ಲಿ ಬದಲಾವಣೆ

ಬೆಂಗಳೂರು, ಆಗಸ್ಟ್ 06; ನೈಋತ್ಯ ರೈಲ್ವೆ ಕಾಮಗಾರಿಯ ಕಾರಣ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದೆ. ಆಗಸ್ಟ್‌ 8ರಿಂದ ರೈಲು ಸಂಚಾರ ನಡೆಸುವ ಜನರು ಈ ಮಾಹಿತಿ ತಿಳಿದು ಪ್ರಯಾಣಕ್ಕೆ ಯೋಜನೆ ರೂಪಿಸುವುದು ಸೂಕ್ತ.

ಬಿಸಾನತ್ತಂ ಮತ್ತು ಮಲ್ಲನೂರು ನಿಲ್ದಾಣಗಳ ನಡುವಿನ ಕುಪ್ಪಂ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಯ ಸಲುವಾಗಿ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

south-western-railway

ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳು ತಡವಾಗಿ ಸಂಚಾರವನ್ನು ಆರಂಭಿಸಲಿವೆ. ಯಾವ-ಯಾವ ರೈಲುಗಳ ಎಂಬ ಮಾಹಿತಿ ಇಲ್ಲಿದೆ.

ರೈಲು ರದ್ದು; ರೈಲು ಸಂಖ್ಯೆ 06290 ಕುಪ್ಪಂ - ಬಂಗಾರಪೇಟೆ ವಿಶೇಷ ಮೆಮು ರೈಲನ್ನು ಆಗಸ್ಟ್ 8 ಮತ್ತು 9 ರಂದು ರದ್ದುಗೊಳಿಸಲಾಗುತ್ತಿದೆ.

* ರೈಲು ಭಾಗಶಃ ರದ್ದು. ರೈಲು ಸಂಖ್ಯೆ 06291 ಕೃಷ್ಣರಾಜಪುರಂ-ಕುಪ್ಪಂ ವಿಶೇಷ ಮೆಮು ರೈಲನ್ನು ಬಂಗಾರಪೇಟೆ ಮತ್ತು ಕುಪ್ಪಂ ನಿಲ್ದಾಣಗಳ ನಡುವೆ ಆಗಸ್ಟ್ 8 ಮತ್ತು 9 ರಂದು ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಕುಪ್ಪಂ ಬದಲು ಬಂಗಾರಪೇಟೆ ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.

* ರೈಲುಗಳ ಮಾರ್ಗ ಬದಲಾವಣೆ. ಆಗಸ್ಟ್ 8 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12684 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಬೈಯ್ಯಪ್ಪನಹಳ್ಳಿ, ಹೊಸೂರು, ಓಮಲೂರು ಮತ್ತು ಸೇಲಂ ನಿಲ್ದಾಣಗಳ ಮಾರ್ಗವಾಗಿ ಚಲಿಸಲಿದೆ. ಹೀಗಾಗಿ ಕೃಷ್ಣರಾಜಪುರಂ, ಬಂಗಾರಪೇಟೆ ಮತ್ತು ತಿರುಪತ್ತೂರು ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.

* ಆಗಸ್ಟ್ 8 ಮತ್ತು 9 ರಂದು ಕೆ. ಎಸ್. ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16526 ಕೆ. ಎಸ್. ಆರ್ ಬೆಂಗಳೂರು-ಕನ್ಯಾಕುಮಾರಿ ಡೈಲಿ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು ದಂಡು, ಬೈಯ್ಯಪ್ಪನಹಳ್ಳಿ ಹೊಸೂರು, ಓಮಲೂ‌ ಮತ್ತು ಸೇಲಂ ನಿಲ್ದಾಣಗಳ ಮಾರ್ಗವಾಗಿ ಚಲಿಸಲಿದೆ. ಹೀಗಾಗಿ ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಮಾಲೂರು, ಬಂಗಾರಪೇಟೆ, ಕುಪ್ಪಂ ಮತ್ತು ತಿರುಪತ್ತೂರು ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.

* ರೈಲು ತಡವಾಗಿ ಪ್ರಾರಂಭ. ಆಗಸ್ಟ್ 8 ಮತ್ತು 9 ರಂದು ಕೆ. ಎಸ್. ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12658 ಕೆ. ಎಸ್. ಆರ್ ಬೆಂಗಳೂರು-ಡಾ ಎಂ. ಜಿ. ಆರ್ ಚೆನ್ನೈ ಸೆಂಟ್ರಲ್ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಮೂಲ ನಿಲ್ದಾಣದಿಂದ ಕ್ರಮವಾಗಿ 60 ಮತ್ತು 70 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ.

* ರೈಲುಗಳ ನಿಯಂತ್ರಣ. ಆಗಸ್ಟ್ 7 ರಂದು ದಾದರ್‌ನಿಂದ ಹೊರಡುವ ರೈಲು ಸಂಖ್ಯೆ 11005 ದಾದರ್-ಪುದುಚೇರಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

* ಆಗಸ್ಟ್ 8 ಮತ್ತು 9 ರಂದು ಚಾಮರಾಜನಗರದಿಂದ ಹೊರಡುವ ರೈಲು ಸಂಖ್ಯೆ 16219 ಚಾಮರಾಜನಗರ- ತಿರುಪತಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ ಕ್ರಮವಾಗಿ 90 ಮತ್ತು 100 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

* ಆಗಸ್ಟ್ 9 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 22681 ಮೈಸೂರು-ಡಾ ಎಂ.ಜಿ.ಆರ್ ಚೆನ್ನೈ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗ ಮಧ್ಯ 60 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

ಪ್ರಕಟಣೆಯಲ್ಲಿ ನೈಋತ್ಯ ರೈಲ್ವೆ. ನಾಗವಂಗಲ ಮತ್ತು ಚಿಕ್ಕಜಾಜೂರು ನಿಲ್ದಾಣಗಳ ನಡುವಿನ ರೈಲ್ವೆ ಸಂಬಂಧಿತ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ ಎಂದು ಹೇಳಿದೆ.

* ರೈಲು ಸಂಖ್ಯೆ 16213 ಅರಸೀಕೆರೆ-ಎಸ್. ಎಸ್. ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 8 ಮತ್ತು 9 ರಂದು ಮಾರ್ಗ ಮಧ್ಯ 90 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

* ಆಗಸ್ಟ್ 9 ರಂದು ವಾಸೋ-ಡ-ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸೋ-ಡ-ಗಾಮಾ- ಯಶವಂತಪುರ ಡೈಲಿ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗ ಮಧ್ಯ 15 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+