'ಪ್ರತ್ಯೇಕ ರಾಷ್ಟ್ರ' ಕುರಿತ ಹೇಳಿಕೆ: ಡಿಕೆ ಸುರೇಶ್‌ ಪರ ಸಚಿವ ಎಂಬಿ ಪಾಟೀಲ್‌ ಬ್ಯಾಟಿಂಗ್‌

ಹುಬ್ಬಳ್ಳಿ,ಫೆಬ್ರವರಿ 02: ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಹೀಗೆ ಅನ್ಯಾಯ ಆದ್ರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸದ ಡಿ ಕೆ ಸುರೇಶ್‌ ನಿಲುವಿಗೆ ಕೈಗಾರಿಕಾ ಸಚಿವ ಎಂ.ಬಿ.‌ಪಾಟೀಲ್ ಬೆಂಬಲ ನೀಡಿದ್ದು, ಸುರೇಶ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದವರು, ಇದೊಂದು ಒಂದು ಭಾಗಕ್ಕೆ ಅನ್ಯಾಯ ಆಗುತ್ತದೆ ಅಂತಾ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಖಡಕ್ ಆಗಿ ಅವರು ಹೇಳಿದ್ದಾರೆ ಇದೊಂದು ಅಖಂಡ ಭಾರತ, ಅಖಂಡ ಕರ್ನಾಟಕ. ಇದರಲ್ಲಿ ಯಾವುದೇ ರೀತಿಯ ಗೊಂದಲ ಬೇಡಾ ಅಖಂಡತೆಯಲ್ಲಿ ಎರಡು ಮಾತಿಲ್ಲ.ಅನ್ಯಾಯ ಆಗಿತಿದೆ, ಬೇರೆ ಪ್ರಗತಿಪರವಾದ ರಾಜ್ಯಗಳಿವೆ.

South states separate nation says DK Suresh:‌ Know What MB Patil Says

ಅನುದಾನ ಕಡಿಮೆ ಇವೆ ಇದರಲ್ಲಿ ಕರ್ನಾಟಕ, ಆಂದ್ರಪ್ರದೇಶ ಮಹಾರಾಷ್ಟ್ರ ,ಮಧ್ಯಪ್ರದೇಶ ಹೀಗೆ ರಾಜ್ಯಗಳಿಗೆ ಅನುದಾನ ಕೊರತೆ ಇದೆ. ಅನುದಾನ ಹಂಚಿಕೊಳ್ಳಲು ಒಳ್ಳೆಯ ಶಾಸನ ಇಲ್ಲ.ಒಳ್ಳೆಯ ರೀತಿಯಾಗಿ ಹಣ ಕ್ರೋಡಿಕರಣ ಇಲ್ಲ.ನಮ್ಮ ಹಣನೇ ನಮಗೆ ವಾಪಾಸ್ ಕೊಡತಿರಿ ನಮಗೆ ಯಾವುದೇ ರೀತಿಯ ಉಪಹಾರ ಮಾಡಲ್ಲ. ಬರಗಾಲಕ್ಕೆ ಒಂದು ಪೈಸ್ ಹಣ ಕೊಟ್ಟಿಲ್ಲ, ನಾವೇ ಎರಡು ಸಾವಿರ ರೂಪಾಯಿ ಕೊಟ್ಟಿದ್ದೇವೆ. ಅವರು ಏನು ಕೊಟ್ಟಲ್ಲ ಕೇಂದ್ರದಿಂದ 560 ಕೋಟಿ ಬರಬೇಕು. ಕೇಂದ್ರಕ್ಕೆ ಹೋಗಿ ವಿನಂತಿ ಮಾಡಿಕೊಂಡು ಬರಲಾಯಿತು ಎಂದು ಹೇಳಿದರು.

ಇನ್ನೂ ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಹೋದವರು ಮರಳಿ ಬಿಜೆಪಿಗೆ ಬರುತ್ತಾರೆ ಎಂಬ ಶೆಟ್ಟರ್ ಹೇಳಿಕೆ ವಿಚಾರವಾಗಿ ಮಾತಾನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೊತೆಗೆ ನಮ್ಮ ನಾಯಕರು ಯಾರು ಹೋಗಿಲ್ಲ. ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ ನಾನು ಮರಳಿ ಬಿಜೆಪಿಗೆ ಹೋಗಲ್ಲ ಅಂತಾ, ಆ ಬಗ್ಗೆ ಹೆಚ್ಚು ಮಹತ್ವ ಬೇಡಾ ಎಂದರು.

South states separate nation says DK Suresh:‌ Know What MB Patil Says

ಕೇಂದ್ರ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಚುನಾವಣಾ ವರ್ಷ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಆಗಿದೆ. ಇದೊಂದು ಮಧ್ಯಂತರ ಬಜೆಟ್ ಅಷ್ಟೇ, ಪ್ರಧಾನಿ ನರೇಂದ್ರ ಮೋದಿ ಎಲ್ಲ ಕಡೆ ಹೋಗಿ ಭಾಷಣ ಮಾಡತಾರೆ. ಆ ಭಾಷಣದ ಪ್ರತಿರೂಪ ಅಷ್ಟೇ, ಸಬ್ ಕೇ ಸಾಥ್ ಸಬ್ ಕೇ ವಿಶ್ವಾಸ ಜೈ ಜವಾನ್ ಜೈ ಕಿಸಾನ್, ಗರಿಬ್ ಕಲ್ಯಾಣ ಯೋಜನಾ. ಈ ಶಬ್ದ ಗಳನ್ನ ಬಳಸಿಕೊಂಡು ತಯಾರು ಮಾಡಿದ ಬಜೆಟ್ ನಿರ್ದಿಷ್ಟವಾಗಿ ರೈತರಿಗೆ, ಮಹಿಳೆಯರಿಗೆ ಪೂರಕವಲ್ಲದ ಬಜೆಟ್, ಇದೊಂದು ಚುನಾವಣೆಗೆ ಮೀಸಲಾದ ಬಜೆಟ್ ಎಂದು ವಾಗ್ದಾಳಿ ನಡೆಸಿದರು.

ಇನ್ನು ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಕ್ರಾಂತಿಕಾರಕ ಬದಲಾವಣೆಗೆ ಮುಂದಾಗಿದೆ. ನಮ್ಮ ಉದ್ದೇಶ ಬಿಯಾಂಡ್ ಬೆಂಗಳೂರು, ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳು ಅಭಿವೃದ್ಧಿ ಆಗಬೇಕು. 2 ಟೈಯರ್3 ಟೈಯರ್ ಸಿಟಿಯಲ್ಲಿ ಕೈಗಾರಿಕೆಗಳು ಬೆಳೆಯಬೇಕು. ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಹೀಗೆ ಬೆಳೆಯಬೇಕು, ಮಂಗಳೂರು ಕ್ಲೀ ಎನರ್ಜಿ ಹೀಗೆ ಹತ್ತು ಹಲವು ಕೈಗಾರಿಕೆಗಳು ಬರಬೇಕು ಎಂದು ಹೇಳಿದರು.

ನಾನು ಅಖಂಡ ಭಾರತದ ಪ್ರಜೆ: ಡಿ ಕೆ ಶಿವಕುಮಾರ್

ಪ್ರತ್ಯೇಕ ರಾಷ್ಟ್ರ ‌ ಕೂಗು ಹೇಳಿಕೆ ನೀಡುವ ಡಿ.ಕೆ. ಸುರೇಶ್ ಅವರ ಹೇಳಿಕೆ ವಿಚಾರವಾಗಿ ಡಿ ಕೆ ಶಿವಕುಮಾರ್‌ ಮಾತನಾಡಿ, ನಾನು ಅಖಂಡ ಭಾರತದ ಪ್ರಜೆ. ಸುರೇಶ್ ಅವರು ಜನರ ಬೇಸರ ಹಾಗೂ ಅಭಿಪ್ರಾಯವನ್ನು ಹೇಳಿದ್ದಾರೆ ಅಷ್ಟೇ. ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ನಾವು ಒಗ್ಗಟ್ಟಾಗಿರಬೇಕು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಂದೇ. ಹಿಂದಿ ಭಾಗಕ್ಕೆ ಹೇಗೆ ಆದ್ಯತೆ ನೀಡಲಾಗುತ್ತಿದೆಯೋ ಅದೇ ರೀತಿ ನಮಗೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+