ಪೇಜಾವರ ಶ್ರೀಗಳಿಗೆ 'ನಿನ್ನ ತಿಥಿ ದಿನವೇ ಬಾಬ್ರಿ ಮಸೀದಿ ಕಟ್ತೇವೆ' ಅಂದವರ್ಯಾರು?

ಉಡುಪಿ, ನವೆಂಬರ್, 24 : ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ವ್ಯಕ್ತಿತ್ವಕ್ಕೆ ಕುಂದುತರುವಂತೆ ಕೆಲವು ಕಿಡಿಗೇಡಿಗಳು ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿರುವುದಲ್ಲದೇ, ಜೀವ ಬೆದರಿಕೆ ನೀಡಿ ಪೇಜಾವರ ಶ್ರೀ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಫೇಸ್ ಬುಕ್ಕಿನಲ್ಲಿ ಪೇಜಾವರ ಶ್ರೀ ಗಳ ವಿರುದ್ಧ ಹರಿದಾಡಿರುವ ಹೇಳಿಕೆಯನ್ನು ಖಂಡಿಸಿದ ಉಡುಪಿಯ ಪರ್ಯಾಯ ಸಮಿತಿಯು ಶ್ರೀಗಳ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವವರ ವಿರುದ್ಧ ಉಡುಪಿ ಎಸ್ ಪಿ ಅಣ್ಣಾಮಲೈ ಅವರಿಗೆ ದೂರು ದಾಖಲಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.[ಮಸೀದಿ ಮುಂದೆ ಹಂದಿಮಾಂಸದ ಸಮಾರಾಧನೆ ನಡೆದ್ರೆ ಸಿಎಂ ಸುಮ್ನಿರ್ತಾರಾ?]

Some criminals upload status in face book against of Pejawar seer in Udupi

ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದವರು ಯಾರು?

ಮೈಕಾಲ್ತೇ ಬ್ಯಾರಿ ಅವರು ಅಬ್ದುಲ್ ಸಲಾಮ್, ಅಮರ್ ಪ್ರೇಮಿ ಮತ್ತು ಇನ್ನಿತರ ಐದು ಸ್ನೇಹಿತರನ್ನೊಳಗೊಂಡು ಪೇಜಾವರ ಶ್ರೀ ವಿರುದ್ಧ ಹೇಳಿಕೆ ಹಾಕಿ ಇಲ್ಲಸಲ್ಲದ ವಿವಾದ ಸೃಷ್ಟಿಸಿದ್ದಾರೆ.

ಫೇಸ್ ಬುಕ್ ಸ್ಟೇಟಸ್ ನಲ್ಲಿ ಇರುವುದಾದರೂ ಏನು?

ಪೇಜಾವರ ಶ್ರೀ ವಿರುದ್ಧ ಫೇಸ್ ಬುಕ್ ಸ್ಟೇಟಸ್ ಬರೆದವರಿಗೆ ಕನ್ನಡ ಬರುವುದಿಲ್ಲ ಎಂದು ಚೆನ್ನಾಗಿ ಗೋಚರಿಸುತ್ತಿದೆ. ಪೇಜಾವರ ಶ್ರೀ ಅವರ ಘನತೆಗೆ ಕುಂದು ತಂದಿರುವುದರ ಜೊತೆಗೆ ಕನ್ನಡ ಭಾಷೆಯನ್ನು ಎಷ್ಟು ಹಾಳು ಮಾಡಲು ಸಾಧ್ಯವೋ ಅಷ್ಟು ಹಾಳು ಮಾಡಿದ್ದಾರೆ.. ನೋಡಿ, ಹೇಗಿದೆ? ಏನಿದೆ? ಸ್ಟೇಟಸ್ ನಲ್ಲಿ...

ಫೇಸ್ ಬುಕ್ ನಲ್ಲಿ " ಓ ಮುದುಕ ಪೇಜಾವರ ನೀನು ಹಗಲು ಕಣಸು ಕಾಣುವುದು ಬಿಡು. ನೀನು ಹೆದರಬೇಡ ನಿನ್ನ ತಿಥಿ ದಿನ ನಾವು ಬಾಬರಿ ಮಸೀದಿ ಕಟ್ಟುತ್ತೇವೆ.[ಬುದ್ದಿಜೀವಿಗಳಿಗೆ ಪೇಜಾವರ ಶ್ರೀಗಳ ಓಪನ್ ಚಾಲೆಂಜ್]

ಅದಲ್ಲದೇ ಓ ಮುದುಕ ನಿನಗ್ಯಾಕೆ ಪೋಪಿಕಾಲ, ನಿನ್ನ ಒಂದು ಕಾಲು ಸ್ಮಶಾನದಲ್ಲೂ ಹಾಗೂ ಮತ್ತೊಂದು ಕಾಲು ನರಕದಲ್ಲಿ ಇದೆ. ಸುಮ್ಮನೆ ಬೊಬ್ಬೆ ಹಾಕಿ ಟೆನ್ಷನ್ ತೆಗೆದು ಬಿ.ಪಿ, ಶುಗರ್ ಹೈ ಮಾಡ್ಕೊಂಡು ಬೇಗನೆ ಹೋಗೆ ಹಾಕೊಲ್ ಬೇಡ. ಇದ್ದಷ್ಟು ದಿನ ನಿನ್ನ ದುರ್ಗಾವಾಹಿಣಿಯ ಕಾರ್ಯಕರ್ತೆಯರ ಜೊತೆ ಮಜಾ ಮಾಡ್ಕೊಂಡು ಇರು"..!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+