ಸೋಲಾರ್ ವಿದ್ಯುತ್ ನೀಡುವ ಆಲಮಟ್ಟಿ ಕಾಲುವೆಗಳು!

Written By:
Subscribe to Oneindia Kannada

ವಿಜಯಪುರ, ಜುಲೈ, 19: ಕರೆಂಟ್ ಖೋತಾ ಆದಾಗ ಸರ್ಕಾರವನ್ನು ಬೈಯುವುದು ನಮಗೆಲ್ಲ ಗೊತ್ತೆ ಇದೆ. ಸರ್ಕಾರ ಇದಕ್ಕೆ ಪರಿಹಾರ ಕ್ರಮ ತೆಗೆದುಕೊಂಡಾಗ ಶ್ಲಾಘನೆಯನ್ನು ಮಾಡಬೇಕಿದೆ.

ರಾಜ್ಯದಲ್ಲಿಯೇ ಮೊದಲಬಾರಿಗೆ ವಿನೂತನ ಯೋಜನೆಯೊಂದನ್ನು ರಾಜ್ಯ ಸರ್ಕಾರ ಸಾಕಾರ ಮಾಡಿದೆ. ಕಾಲುವೆಗಳ ಮೇಲೆ ಸೌರಾಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುವ ಯೋಜನೆ ಪ್ರಥಮವಾಗಿ ಆಲಮಟ್ಟಿ ಬಲದಂಡೆಯಲ್ಲಿ ಅಳವಡಿಸಿದ್ದು ಪ್ರತಿನಿತ್ಯ 5000 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.[ಕರ್ನಾಟಕದಲ್ಲಿ 5 ಕಡೆ ಸೋಲಾರ್ ವಿದ್ಯುತ್ ಘಟಕ]

solar

ಆಲಮಟ್ಟಿ ಬಲದಂಡೆ ಮುಖ್ಯ ಕಾಲುವೆಯ 8 ರಿಂದ 11 ಕಿ.ಮೀ ವ್ಯಾಪ್ತಿಯಲ್ಲಿ ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಗುರಿಯೊಂದಿಗೆ ಸೌರಫಲಕ ಅಳವಡಿಸಲಾಗಿದೆ. 3,300 ಸೌರಫಲಕಗಳನ್ನು ಮುಖ್ಯ ಕಾಲುವೆಯ ಮೇಲೆ ಅಳವಡಿಸಲಾಗಿದೆ.[ಸೌರ ವಿದ್ಯುತ್ ತಯಾರಿಸಿ, ಸರ್ಕಾರಕ್ಕೆ ಮಾರಿ!]

ನೀರಿನ ಬಳಕೆಯೂ ಹೆಚ್ಚು
ಒಂದು ಕಡೆ ವಿದ್ಯುತ್ ಉತ್ಪಾದನೆ ಲಾಭವಿದ್ದರೆ ಇನ್ನೊಂದುಕಡೆ ನೀರು ಸಹ ಸಮರ್ಪಕ ಬಳಕೆಗೆ ಸಿಗಲಿದೆ. ಇಂತಹ ಯೋಜನೆಗಳಿಂದ ಕಾಲುವೆಗಳ ನೀರು ಆವಿಯಾಗುವುದೂ ಕಡಿಮೆಯಾಗಲಿದೆ.[ಕರ್ನಾಟಕದಲ್ಲಿ ಹರ್ಭಜನ್ 'ಸೌರಘಟಕ' ಸ್ಥಾಪನೆ]

ಉತ್ಪಾದನೆಯಾಗುವ ವಿದ್ಯುತ್ ಅನ್ನು ಕೃಷ್ಣಾ ಭಾಗ್ಯ ಜಲ ನಿಗಮವು ಯೂನಿಟ್ ಒಂದಕ್ಕೆ 3.06 ರು. ದರದಲ್ಲಿ ಹೆಸ್ಕಾಂ ಮಾರಾಟ ಮಾಡುತ್ತಿದೆ. ಮಾರ್ಚ್ ಅಂತ್ಯದವರೆಗೆ 14.60 ಲಕ್ಷ ಯೂನಿಟ್ ಮಾರಾಟ ಮಾಡಿದ್ದು ಜಲ ನಿಗಮಕ್ಕೆ 44.69 ಲಕ್ಷ ರು. ಆದಾಯ ಲಭಿಸಿದೆ. ಈ ತಿಂಗಳ 25 ದಿನಗಳಲ್ಲಿ 1.15 ಲಕ್ಷಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Government's Energy Department and Water Resources Department have successfully implemented Solar Project on Almatti Dam canals. This project is already producing close to 5000 units of electricity.
Please Wait while comments are loading...