SIR: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯಲ್ಲಿ ಹೊಸ ಗೊಂದಲ: ಬೆಂಗಳೂರು ಬಾಡಿಗೆದಾರರು ಶಾಕ್!
SIR: ಕರ್ನಾಟಕದಾದ್ಯಂತ ವಿಶೇಷ ಮತದಾರರ ಪಟ್ಟಿ ಸಮಗ್ರ (SIR) ಪರಿಷ್ಕರಣೆ ಪ್ರಕ್ರಿಯೆಯು ಬಹುತೇಕ ಸರಳವಾಗಿ ನಡೆಯುತ್ತಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಹಲವು ಕಾರಣಗಳಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ಇರುವವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಬದಲಾಗಿದ್ದು, ಇದು ಎಸ್‌ಐಆರ್‌ನಲ್ಲಿ ಸಮಸ್ಯೆಗೆ ಕಾರಣವಾಗಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ವೇಳೆ, ಬೆಂಗಳೂರಿನ ಹಲವು ಮತದಾರರು ಸಮಸ್ಯೆ ಎದುರಿಸುವಂತೆ ಆಗಿದೆ.
ಒಂದೇ ಕುಟುಂಬದ ಸದಸ್ಯರ ಹೆಸರು ಸ್ಥಳಾಂತರಗೊಂಡಿದ್ದಾರೆ ಎಂದು ನಮೂದಾಗಿರುವುದು ಚರ್ಚೆಗೆ ಕಾರಣವಾಗಿದೆ. ಹಲವು ಕುಟುಂಬಗಳಲ್ಲಿ ಜನ ಒಂದೇ ಮನೆಯಲ್ಲಿದ್ದರೂ ಕೆಲವರ ಹೆಸರಿನ ಮುಂದೆ ಮಾತ್ರ ಸ್ಥಳಾಂತರಗೊಂಡಿದ್ದಾರೆ ಎಂದು ನಮೂದಿಸಲಾಗಿದೆ. ಆದರೆ ಅದೇ ಮನೆಯ ಉಳಿದ ಸದಸ್ಯರ ಫಾರ್ಮ್‌ಗಳಲ್ಲಿ ಇಂತಹ ಯಾವುದೇ ಮಾಹಿತಿ ಇಲ್ಲದಿರುವುದು ಹಲವರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೆ ಇದರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಅರ್ಜಿ ಸಲ್ಲಿಕೆ ಮಾಡುವುದಕ್ಕೂ ಸಮಸ್ಯೆ ಆಗುತ್ತಿದೆ ಎಂದು "ದಿ ಹಿಂದೂ" ವರದಿ ಮಾಡಿದೆ.

ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿಶೇಷ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯಲ್ಲಿ ಹಲವು ಸಮಸ್ಯೆಗಳು ಎದುರಾಗಿವೆ. ಅದರಲ್ಲೂ ಮುಖ್ಯವಾಗಿ ಬಾಡಿಗೆ ಮನೆದಾರರು ಮನೆಗಳನ್ನು ಖಾಲಿ ಮಾಡಿದ್ದು, ಅವರ ಅರ್ಜಿಗಳು ಈ ಹಿಂದೆ ಬಾಡಿಗೆ ಮನೆಯಲ್ಲಿದ್ದ ಮನೆಗಳಲ್ಲಿ ನೀಡಲಾಗುತ್ತಿದೆ.
ಮುಂದುವರಿದು ತಮ್ಮ ಈಗಿನ ವಿಳಾಸದಲ್ಲೇ ವಾಸವಿದ್ದರೂ, ಅಲ್ಲಿಯೇ ಗಣತಿ ನಮೂನೆಗಳನ್ನು ಪಡೆದಿದ್ದರೂ, ಹಲವು ಮತದಾರರ ಹೆಸರನ್ನು ಸ್ಥಳಾಂತರಗೊಂಡಿದ್ದಾರೆ ಎಂದು ಗುರುತಿಸಲಾಗಿದೆ ಎಂದು ಮತದಾರರು ಮತ್ತು ಬೂತ್ ಮಟ್ಟದ ಅಧಿಕಾರಿಗಳು (BLO) ತಿಳಿಸಿದ್ದಾರೆ.
SIR: ಮತದಾರರ ಪಟ್ಟಿಯಲ್ಲಿ ಸಮಸ್ಯೆಗೆ ಕಾರಣವೇನು
ಬೆಂಗಳೂರಿನಲ್ಲಿ ಹಲವು ಮತದಾರರು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಎಸ್‌ಐಆರ್ ಅರ್ಜಿಯಲ್ಲಿ ಸ್ಥಳಾಂತರಗೊಂಡಿದ್ದಾರೆ ಎಂದು ಯಾಕೆ ನಮೂದಿಸಲಾಗಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ಹಲವು ಮತದಾರರು ಹೇಳಿದ್ದಾರೆ.
ಇನ್ನು ಈ ರೀತಿ ಸ್ಥಳಾಂತರಗೊಂಡಿದ್ದಾರೆ ಎಂದು ನಮೂದಿಸುವುದಕ್ಕೆ ಕಾರಣವೇನು ಎನ್ನುವುದು ಬೂತ್ ಮಟ್ಟದ ಅಧಿಕಾರಿಗಳಿಗೂ (BLO) ಗೊತ್ತಿಲ್ಲ. ಅವರಿಗೆ ನೀಡಿರುವ ದಾಖಲೆಗಳ ಆಧಾರದಲ್ಲೇ ಅವರು ಕೆಲಸ ಮಾಡುತ್ತಿದ್ದಾರೆ ಎಂದು BLOಗಳು ಹೇಳಿದ್ದಾರೆ. ಕೆಲವು BLOಗಳ ಪ್ರಕಾರ, 2002ರಲ್ಲಿ ದಾಖಲಾದ ವಿಳಾಸ ಮತ್ತು 2025ರ ವಿಳಾಸ ಒಂದೇ ಆಗಿದಿದ್ದರೆ, ಆ ಮತದಾರರನ್ನು ಸ್ಥಳಾಂತರಗೊಂಡಿದ್ದಾರೆ ಎಂದು ಗುರುತಿಸಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಇನ್ನೂ ಕೆಲವು ಬಿಎಲ್‌ಒಗಳ ಪ್ರಕಾರ, ಮತಗಟ್ಟೆಗಳ ಗಡಿ ಬದಲಾವಣೆಯಿಂದ ಈ ಸಮಸ್ಯೆ ಉಂಟಾಗಿರಬಹುದು. ಮತಗಟ್ಟೆಗಳ ಮರುವಿಂಗಡಣೆ ವೇಳೆ ಒಂದು ರಸ್ತೆ ಅಥವಾ ಅಪಾರ್ಟ್‌ಮೆಂಟ್‌ನ್ನು ಬೇರೆ ಮತಗಟ್ಟೆಗೆ ಸೇರಿಸಲಾಗುತ್ತದೆ.
ಈ ವೇಳೆ ಹಳೆಯ ಬಿಎಲ್‌ಒ ಹಳೆಯ ಪಟ್ಟಿಯನ್ನು ಪರಿಶೀಲಿಸಿದರೆ ಅಥವಾ ಹೊಸ ಬಿಎಲ್‌ಒಗೆ ಆ ಪ್ರದೇಶದ ಮನೆಗಳನ್ನು ಗುರುತಿಸಲು ಸಾಧ್ಯವಾಗದಿದ್ದರೆ, ಮತದಾರರನ್ನು ತಪ್ಪಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ದಾಖಲಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ ಎಂದು ಹೇಳಿದ್ದಾರೆ. ಒಂದೊಮ್ಮೆ ಇಂತಹ ತಪ್ಪುಗಳಿದ್ದರೆ, ಮತದಾರರು ಫಾರ್ಮ್-8 ಸಲ್ಲಿಸಿ ತಮ್ಮ ಮಾಹಿತಿಯನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಬಿಎಲ್‌ಒ ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications
