SIR: ಕಾಂಗ್ರೆಸ್‌ನ ನಿರಂತರ ಹೋರಾಟಕ್ಕೆ ಕೊನೆಗೂ ಚುನಾವಣಾ ಆಯೋಗ ಮಣಿದಿದೆ ಎಂದ ಬಿ.ಕೆ ಹರಿಪ್ರಸಾದ್!

SIR: ಕಾಂಗ್ರೆಸ್‌ನ ನಿರಂತರ ಹೋರಾಟಕ್ಕೆ ಕೊನೆಗೂ ಚುನಾವಣಾ ಆಯೋಗ ಮಣಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಹೇಳಿದ್ದಾರೆ. SIR ಆರಂಭವಾದ ದಿನದಿಂದಲೇ ಅದರ ಪಕ್ಷಪಾತಿತನ, ಗಂಭೀರ ಲೋಪಗಳು, ಹಾಗೂ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಅಪಾಯದ ಬಗ್ಗೆ ನಾವು ಮೌನವಾಗಿರಲಿಲ್ಲ.ಖುದ್ದಾಗಿ ನಾನೇ ಚುನಾವಣಾ ಆಯೋಗಕ್ಕೆ ಸತತವಾಗಿ ಏಳು ಪತ್ರಗಳನ್ನು ಬರೆದು, ದಾಖಲೆ ಮತ್ತು ಅಂಕಿ-ಅಂಶಗಳ ಸಹಿತ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದೇವೆ.

ಬೀದಿಯಲ್ಲಿ ಹೋರಾಟ ನಡೆಸುವುದರಿಂದ ಹಿಡಿದು ಚುನಾವಣಾ ಆಯೋಗದ ಕಚೇರಿವರೆಗೆ ಕಾಂಗ್ರೆಸ್ ನಡೆಸಿದ ಹೋರಾಟದ ನಡುವೆ, ಇಂದು ಆಯೋಗವೇ SIR ನಂತರ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಗುರುತಿಸಿ ಮರುನೋಂದಣಿಗೆ ನೆರವಾಗುವ ವಿಶೇಷ ಅಭಿಯಾನಕ್ಕೆ ಸೂಚಿಸಿರುವುದು ನಮ್ಮ ಆತಂಕಗಳು ಪರಿಶೀಲನೆಗೆ ಅರ್ಹವಾಗಿದ್ದವು ಎಂಬುದನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.

SIR Election Commission Yields to Congress Pressure Says KPCC President B K Hariprasad

2025ರ ಅಂತಿಮ ಮತಪಟ್ಟಿಯ 5,54,22,344 ಮತದಾರರ ಸಂಖ್ಯೆಯಿಂದ ಹಿಡಿದು ASDDO ಅಂಕಿ-ಅಂಶಗಳಲ್ಲಿನ ವ್ಯತ್ಯಾಸ, Unmatched Voters, No Mapping/Logical Anomaly, ಮತಗಟ್ಟೆಗಳ ದೊಡ್ಡ ಪ್ರಮಾಣದ ಸ್ಥಳಾಂತರ ಹಾಗೂ ಮತಪಟ್ಟಿ ಸಂಬಂಧಿತ ದಾಖಲೆಗಳ ಲಭ್ಯತೆವರೆಗೆ ಹಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಆಯೋಗಕ್ಕೆ ಪತ್ರ ಬರೆದಿದ್ದೆ. ಅರ್ಹ ಮತದಾರನೊಬ್ಬನ ಹೆಸರೂ ತಾಂತ್ರಿಕ ಲೋಪದಿಂದ ಅಳಿಸಿಹೋಗಬಾರದು; ಪ್ರತಿಯೊಂದು ವ್ಯತ್ಯಾಸಕ್ಕೂ voter-wise reconciliation ಆಗಬೇಕು ಎಂದು ಆಗ್ರಹಿಸಿದ್ದೆವು. ಈಗ BLOಗಳು pre-SIR ಮತ್ತು ಈಗಿನ ಪಟ್ಟಿಗಳನ್ನು ಹೋಲಿಸಿ ಹೊರಗುಳಿದವರನ್ನು ಗುರುತಿಸಿ, ಮನೆಮನೆಗೆ ಭೇಟಿ ನೀಡಿ ಅರ್ಹರ Form-6 ನೋಂದಣಿಗೆ ನೆರವಾಗಬೇಕು ಎಂದು ಆಯೋಗ ಸೂಚಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.

Form-7 ಅನ್ನು ದುರ್ಬಳಕೆ ಮಾಡಿಕೊಂಡು ನೈಜ ಮತದಾರರ ಹೆಸರುಗಳನ್ನು ತೆಗೆಸುವ ಪ್ರಯತ್ನಗಳ ಬಗ್ಗೆಯೂ ಸೆಪ್ಟೆಂಬರ್ 29ರ ಪತ್ರದಲ್ಲಿ ಬಬಲೇಶ್ವರ, ಭಾಲ್ಕಿ, ಮೂಡಿಗೆರೆ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರಗಳ ಉದಾಹರಣೆಗಳನ್ನು ನೀಡಿ ತಕ್ಷಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದೆವು. ನಿನ್ನೆ ಆಯೋಗದ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆಯ ನಂತರ ಕರ್ನಾಟಕ CEO ಕಚೇರಿ fraudulent bulk Form-7 ಅರ್ಜಿಗಳ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದೂ ಗಮನಾರ್ಹ.

SIR ಕುರಿತು ಚುನಾವಣಾ ಆಯೋಗಕದ ಲೋಪಗಳನ್ನು ನಾವು ಪ್ರಶ್ನಿಸಿದಾಗ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಆಯೋಗದ ವಕ್ತಾರರಂತೆ ಮಾತಾಡುತ್ತಿದ್ದ ಬಿಜೆಪಿಯವರು ಈಗ ಉತ್ತರಿಸಲಿ.ಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ಮತ್ತೆ ಹುಡುಕಿ ನೋಂದಾಯಿಸಲು ವಿಶೇಷ ಅಭಿಯಾನವೇ ಅಗತ್ಯವಿರಲಿಲ್ಲವೆಂದಾದರೆ, ಚುನಾವಣಾ ಆಯೋಗ ಇಂದು BLOಗಳಿಗೆ pre-SIR ಪಟ್ಟಿಯೊಂದಿಗೆ ಹೋಲಿಕೆ ಮಾಡಿ ಮನೆಮನೆಗೆ ತೆರಳುವಂತೆ ಏಕೆ ಸೂಚಿಸಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಯಾರೊಬ್ಬರ ದಯೆಯೂ ಅಲ್ಲ

ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಯಾರೊಬ್ಬರ ದಯೆಯೂ ಅಲ್ಲ - ಅದು ಸಂವಿಧಾನಾತ್ಮಕ ವ್ಯವಸ್ಥೆ ರಕ್ಷಿಸಬೇಕಾದ ನಾಗರಿಕನ ಹಕ್ಕು. ಒಬ್ಬೇ ಒಬ್ಬ ಅರ್ಹ ಮತದಾರನನ್ನೂ ಮತಪಟ್ಟಿಯಿಂದ ಅನ್ಯಾಯವಾಗಿ ಹೊರಗಿಡಲು ಬಿಡುವುದಿಲ್ಲ. ಏಳು ಪತ್ರಗಳಲ್ಲಿ ಎತ್ತಿದ ಪ್ರಶ್ನೆಗಳಿಂದ ಹಿಡಿದು ಚುನಾವಣಾ ಆಯೋಗದ ಬಾಗಿಲಿನವರೆಗಿನ ನಮ್ಮ ಹೋರಾಟ ಇಲ್ಲಿಗೆ ಮುಗಿದಿಲ್ಲ. SIRನ ಪ್ರತಿಯೊಂದು ಲೋಪ ಸರಿಯಾಗುವವರೆಗೆ, ಪ್ರತಿಯೊಬ್ಬ ಅರ್ಹ ಮತದಾರನ ಹೆಸರು ಪಟ್ಟಿಯಲ್ಲಿ ಖಚಿತವಾಗುವವರೆಗೆ ಕಾಂಗ್ರೆಸ್ ಪಕ್ಷದ ಕಾನೂನಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ಮುಂದುವರಿಯಲಿದೆ ಎಂದೂ ಬಿ.ಕೆ ಹರಿಪ್ರಸಾದ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+