Sonu Nigam Row: ಸೋನು ನಿಗಮ್‌ಗೆ ಕನ್ನಡ ಚಿತ್ರರಂಗದಿಂದ ಶಾಕ್, ಪೊಲೀಸ್ ನೋಟಿಸ್
ಬೆಂಗಳೂರು, ಮೇ 05: ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಕೆ ಮಾಡಿದ ಗಾಯಕ ಸೋನು ನಿಗಮ್ (Sonu Nigam Ban) ಸ್ಪಷ್ಟನೆ ನೀಡಿದರೆ ಹೊರತು ಕನ್ನಡಿಗರನ್ನು ಕ್ಷಮೆ ಕೇಳಲು ಮುಂದಾಗಿಲ್ಲ. ಹೀಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಾಯಕನ ವಿರುದ್ಧ ಸೂಕ್ತ ಕ್ರಮ ಜರುಗಿಸಿದೆ. ಇದರ ಬೆನ್ನಲ್ಲೆ ಪೊಲೀಸರು ಸಹ ನೋಟಿಸ್ ನೀಡಿದ್ದಾರೆ. ಈ ಬೆಳವಣಿಗೆ ಸೋನು ನಿಗಮ್ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಲಿದೆ.
ಸೋನು ನಿಗಮ್ ಇತ್ತೀಚೆಗೆ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದಕ್ಕೆ ''ಹೀಗೆ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್‌ನಲ್ಲಿ ಅಟ್ಯಾಕ್ ಆಗಿದ್ದ' ಎಂದು ಹೇಳುವ ಮೂಲಕ ವಿವಾದ ಮೈ ಮೇಲೆ ಎಳೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್) ಇನ್ನು ಮುಂದೆ ಸೋನಿ ನಿಗಮ್‌ನಿಂದ ಯಾವುದೇ ಕನ್ನಡ ಹಾಡನ್ನು ಹಾಡಿಸದಿರಲು ಹಾಗೂ ಮ್ಯೂಸಿಕಲ್ ನೈಟ್ ಮಾಡದಿರಲು ನಿರ್ಧರಿಸಲಾಗಿದೆ.

ಕಾರ್ಯಕ್ರಮವೊಂದಲ್ಲಿ ಹಿಂದಿ ಹಾಡು ಹಾಡುತ್ತಿದ್ದ ಸೋನು ನಿಗಮ್ ಗೆ ಕನ್ನಡಾಭಿಮಾನಿಯೊಬ್ಬ ಕನ್ನಡ ಹಾಡು ಹಾಡಿ ಸರ್ ಎಂದು ಕೇಳಿದ್ದಾನೆ. ಇದಕ್ಕೆ ಗಾಯಕ ಕನ್ನಡ ಕನ್ನಡ ಎಂದಿದ್ದಕ್ಕೆ ಕಾಶ್ಮೀರದಲ್ಲಿ ಉಗ್ರ ದಾಳಿ ನಡೆದಿದೆ ಎಂದು ಹೇಳಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬಹುತೇಕ ಮಂದಿ ಕನ್ನಡದಿಂದ ಬೆಳದು, ಇಲ್ಲಿಂದ ಹೆಸರು ಮಾಡಿ, ಖ್ಯಾತಿ ಹಣ ಬಂದ ಮೇಲೆ ಈ ರೀತಿಯ ದುರಹಂಕಾರದ ಮಾತು ಸರಿಯಲ್ಲ ಎಂದಿದ್ದಾರೆ. ಸೋನು ನಿಗಮ್ ಕನ್ನಡಿಗರಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ವಿವಾದಾತ್ಮಕ ಹೇಳಿಕೆಯ ಕಿಡಿ ಹೊತ್ತಿಕೊಳ್ಳುತ್ತಿದ್ದಂತೆ ಎರಡು ದಿನಗಳ ಬಳಿಕ ಸ್ಪಷ್ಟನೆ ನೀಡಿರುವ ಸೋನು ನಿಗಮ್ ಕ್ಷಮೇ ಕೇಳಲಿಲ್ಲ.
ಫಿಲ್ಮ್ ಚೇಂಬರ್‌ನಿಂದ ಶ್ಲಾಘನೀಯ ಕ್ರಮ
ಈ ಕಾರಣದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್) ಅಧ್ಯಕ್ಷ ನರಸಿಂಹಲು ಅವರು ಪ್ರತಿಕ್ರಿಯಿಸಿ, ಗಾಯಕನ ಹೇಳಿಕೆ ಗಂಭೀರವಾಗಿ ಪರಗಣಿಸಿದ್ದಾರೆ. ಘಟನೆ ಬಳಿಕ ಗಾಯಕ ಕ್ಷಮೆ ಕೇಳಿಲ್ಲ. ಅವರಿಂದ ಚಿತ್ರರಂಗದಲ್ಲಿ ಮ್ಯೂಸಿಕಲ್ ನೈಟ್ಸ್ ಮಾಡುವುದು, ಸಿನಿಮಾಗಳಿಗೆ ಹಾಡು ಹಾಡಿಸುವುದು ನಿಷೇಧಿಸಿದೆ. ಯಾರು ಸಹ ಅವರಿಗೆ ಸಹಕಾರ ನೀಡದಂತೆ ಅವರು ಎಲ್ಲ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಎಲ್ಲರಿಗೂ ಸೂಚನೆ ನೀಡಿದ್ದಾರೆ. ಈ ಮೂಲಕ ಕನ್ನಡವನ್ನು ಹಗುರವಾಗಿ ಪರಿಗಣಿಸುವವರಿಗೆ ಫಿಲ್ಮ್ ಚೇಂಬರ್ ತಕ್ಕ ಉತ್ತರ ನೀಡಿದೆ ಎನ್ನಬಹುದು.
ಗಾಯಕನಿಗೆ ಪೊಲೀಸ್ ನೋಟಿಸ್
ಚಿತ್ರರಂಗದಿಂದ ಅಹಕಾರ ವ್ಯಕ್ತವಾದ ಬೆನ್ನಲ್ಲೆ ಆವಲಹಳ್ಳಿ ಪೊಲೀಸರು ಈಗಾಗಲೇ ಸೋನು ನಿಗಮ್ ಕನ್ನಡ ಮತ್ತು ಪಹಲ್ಗಾಮ್ ಹೇಳಿಕೆಗೆ ಸಂಬಂಧಿಸಿದ ಸಾಫ್ಟ್ ಕಾಪಿ ನೋಟಿಸ್ ಮೇಲೆ ಮಾಡಿದ್ದಾರೆ. ನೋಟಿಸ್ ನೀಡಿದ ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.












Click it and Unblock the Notifications