Congress Guarantee: ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಜಾರಿಗೊಳಿದ ಸರ್ಕಾರ: ಈ ಬಗ್ಗೆ ಸಿದ್ದು,ಡಿಕೆಶಿ ಹೇಳಿದ್ದೇನು?

ಬೆಂಗಳೂರು,ಜೂನ್‌ 02: ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನ ಜಾರಿಗೊಳಿಸುವ ಭರವಸೆಯನ್ನ ಕಾಂಗ್ರೆಸ್‌ ನಾಯಕರು ರಾಜ್ಯದ ಜನತೆಗೆ ನೀಡಿದ್ದು, ಎರಡನೇ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಜನತೆಗೆ ಕೊಟ್ಟ ಗ್ಯಾರಂಟಿಗಳನ್ನ ಜಾರಿಗೊಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್‌ ಸುದ್ದಿಗೋಷ್ಟಿಯಲ್ಲಿ ನಡೆಸಿ ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.

Congress Implemented All 5 Poll guarantees

ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾವು ಚುನಾವಣೆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಐದು ಗ್ಯಾರಂಟಿ ಘೋಷಣೆ ಮಾಡಿದ್ವಿ. ನಾನು ಮತ್ತು ಡಿ ಕೆ ಶಿವಕುಮಾರ್ ಸಹಿ ಮಾಡಿದ್ವಿ ಗ್ಯಾರಂಟಿ ಯೋಜನೆ ಜಾರಿ ಮಾಡ್ತೇವೆ. ಜನರಿಗೆ ತಲುಪಿಸುವ ಭರವಸೆ ನೀಡಿದ್ದೇವೆ. ಈ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡಿದ್ದಾರೆ. ನಮ್ಮ ಕ್ಯಾಬಿನೆಟ್ ಗ್ಯಾರಂಟಿ ಬಗ್ಗೆ ತೀರ್ಮಾನ ಜನರಿಗೆ ತಿಳಿಸಬೇಕು. ಸುದೀರ್ಘವಾಗಿ ಐದು ಗ್ಯಾರಂಟಿ ಚರ್ಚೆ ಮಾಡಿದ್ದೇವೆ. ಐದು ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ನಿರ್ಧಾರವನ್ನು ಮಾಡಿದ್ದೇವೆ ಎಂದು ಹೇಳಿದರು.

ಗ್ಯಾರೆಂಟಿ 1: ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ

ಹೌದು, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಇದು ನಮ್ಮ ಮೊದಲ ವಾಗ್ದಾನ, 200 ಯೂನಿಟ್ ವಿದ್ಯುತ್ ನೀಡುತ್ತೇವೆ. ಈ ಗ್ಯಾರೆಂಟಿ ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ. ಬಳೆಕೆಯಾಗುವ ಯೂನಿಟ್ ವಾರ್ಷಿಕ ಸಾರಾಸರಿ ಪಡೆಯುತ್ತೇವೆ, ಸಾರಾಸರಿ ಪ್ರಮಾಣದ ಮೇಲೆ 200 ಯೂನಿಟ್ ಮೀರದಂತೆ ಇದ್ದಲ್ಲಿ ವಿದ್ಯುತ್ ಉಚಿತ ಎಂದು ತಿಳಿಸಿದ್ದಾರೆ. ಈ ಭಾರಿ (ಜೂನ್ ) ತಿಂಗಳ ಬಿಲ್ ತಯಾರಾಗಿದೆ, ಹೀಗಾಗಿ ಜುಲೈ ತಿಂಗಳಿಂದ ಈ ಗ್ಯಾರೆಂಟಿ ಜಾರಿಯಾಗಲಿದೆ ಎಂದು ತಿಳಿರಿ

Congress Implemented All 5 Poll guarantees

ಗ್ಯಾರೆಂಟಿ 2: ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ಗೃಹಿಣಿಗೆ ತಿಂಗಳಿಗೆ 2000 ರೂ.

ಇನ್ನೂ ಗೃಹ ಲಕ್ಷ್ಮೀ ಯೋಜನೆ ಜಾರಿ ಮಾಡಲು ತೀರ್ಮಾನ ಆಗಿದೆ. ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಬೇಕಿದೆ. ಜೊತೆಗೆ ಮನೆ ಯಜಮಾನಿ ಯಾರು ಎಂದು ತೀರ್ಮಾನ ಮಾಡಬೇಕು. ಈ ಯೋಜನೆ ಎಲ್ಲಾ ವರ್ಗಕ್ಕೂ ಜಾರಿ ಆಗಲಿದೆ, ಬಿಪಿಲ್ ಹಾಗೂ ಎಪಿಲ್ ಕಾರ್ಡ್ ಇಬ್ಬರಿಗೂ ಈ ಯೋಜನೆ ಜಾರಿ. ಯಜಮಾನಿ ಎನ್ನುವುದು ಅರ್ಜಿಯಲ್ಲಿ ಅರ್ಜಿದಾರರು ದೃಡೀಕರಿಸಬೇಕು.

ಇನ್ನೂ ಈ ಯೋಜನೆ ಆಗಸ್ಟ್ 15ಕ್ಕೆ ಜಾರಿಯಾಗಲಿದ್ದು, ಈ ಮದ್ಯೆ ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಜೊತೆಗೆ ಖಾತೆ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನೀಡಬೇಕು. ಹಾಗೂ ಬೇರೆ ಯೋಜನೆಗಳಿಂದ ಹಣ ಪಡೆಯುತ್ತಿದ್ದರೂ ಈ ಯೋಜನೆ ಅಡ್ಡಿ ಆಗಲ್ಲ, ಈ ಯೋಜನೆಗೆ ಅವರು ಹಕ್ಕುದಾರರು.

ಗ್ಯಾರಂಟಿ 3: ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ

ಅನ್ನಭಾಗ್ಯ ಯೊಜನೆಯಡಿ ಕುಟುಂಬದ ಪ್ರತಿಯೊಬ್ಬರಿಗೂ 10 ಕೆಜಿ ಉಚಿತ ಅಕ್ಕಿ ನೀಡಲಾಗಿದ್ದು, ಕೇಂದ್ರ ಸರ್ಕಾರ ಐದು ಕೆಜಿ ಗೆ ಕಡಿಮೆ ಮಾಡಿದ್ದಾರೆ. ನಾವು ಹತ್ತು ಕೆಜೆ ಆಹಾರ ದಾನ್ಯ ನೀಡುತ್ತೇವೆ ಎಂದು ಮಾತು ಕೊಟ್ಟಿದ್ವಿ. ಜುಲೈ 1 ರಿಂದ ಎಲ್ಲಾ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಇರುವವರಿಗೆ ಅನ್ನಭಾಗ್ಯ ಜಾರಿಯಾಗಲಿದೆ. ಜುಲೈ ಒಂದರಿಂದ ಅನ್ನಭಾಗ್ಯ ಜಾರಿ. ಕಾರ್ಡ್ ಇರುವವರಿಗೆ ತಲಾ ಹತ್ತು ಕೆಜಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಗ್ಯಾರೆಂಟಿ 4: ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ

ಇನ್ನೂ ಶಕ್ತಿ ಯೋಜನೆಯಡಿ ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ಅವಕಾಶವನ್ನ ಮಾಡಿಕೊಟ್ಟಿದ್ದು, ಸುಮಾರು 50% ಮಹಿಳೆಯರು ಇದ್ದಾರೆ, ಈ ತಿಂಗಳ ಜುಲೈ 11ರಿಂದ ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಬಹುದು. ಇದು ರಾಜ್ಯದೊಳಗೆ ಪ್ರಯಾಣ ಮಾಡಬಹುದು. ಇದು ಬಿಎಂಟಿಸಿ ಹಾಗೂ KSRTC ಗೆ ಅನ್ವಯವಾಗಲಿದ್ದು, ಹವಾನಿಯಂತ್ರಣ (AC), ಸ್ಲೀಪರ್ ಹಾಗೂ ರಾಜಹಾಂಸ ಬಸ್ ಹೊರತು ಪಡಿಸಿ, ಎಲ್ಲಾ ಬಸ್ ನಲ್ಲಿ ಪ್ರಯಾಣ ಮಾಡಬಹುದು. ಜೊತೆಗೆ ಗಂಡಸರಿಗೆ KSRTC ಶೇ 50 ಸೀಟ್ ಮೀಸಲು ನೀಡಲಾಗಿದೆ.

ಗ್ಯಾರೆಂಟಿ 5: ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಆರ್ಥಿಕ ನೆರವು

2023 ರಲ್ಲಿ ಪದವಿ ಪಾಸ್ ಮಾಡಿದವರಿಗೆ 24 ತಿಂಗಳು ಪ್ರತಿ ತಿಂಗಳು 3000, ಡಿಪ್ಲೋಮದಾರರಿಗೆ 1500 ರು ಭತ್ಯೆ. ತೃತೀಯ ಲಿಂಗಿಗಳಿಗೂ ಅನ್ವಯ. 18 ವರ್ಷದಿಂದ 25 ವರ್ಷದವರಿಗೆ ಅನ್ವಯ. ಅವರು ಅರ್ಜಿ ಹಾಕಬೇಕು. ಅರ್ಜಿ ಕೊಟ್ಟಾಗಿಂದ ಜಾರಿ. ಅರ್ಜಿ ಸಲ್ಲಿಸಲು 6 ತಿಂಗಳು ಕಾಲವಕಾಶ.

ಸರ್ಕಾರಿ ನೌಕರರು ಹಾಗೂ ಇತರೆ ಸಂಘಸಂಸ್ಥೆಗಳು ನಮಗೆ ಈ ಯೋಜನೆಗಳು ಬೇಡ ಎಂದು ಅನೇಕರು ಸ್ವಇಚ್ಛೆಯಿಂದ ನಮಗೆ ಪತ್ರ ಬರೆದಿದ್ದು, ಅದಕ್ಕೂ ಅವಕಾಶ ನೀಡಲಾಗುವುದು. ಯೋಜನೆಯ ಲಾಭವನ್ನು ತ್ಯಜಿಸಲು ಇಚ್ಛಿಸಿದರೆ ಅದನ್ನು ಸರ್ಕಾರ ಸ್ವಾಗತ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+