ವಿವೇಕಾನಂದರ ತತ್ವ ಕೆಲವರ ಲಾಭಕ್ಕೆ ಬಳಕೆಯಾಗುತ್ತಿದೆ: ಸಿಎಂ

Subscribe to Oneindia Kannada

ಬೆಂಗಳೂರು, ಜನವರಿ, 19: ಕೆಲವರು ತಮ್ಮ ಲಾಭಕ್ಕೆ ತಕ್ಕಂತೆ ಸ್ವಾಮಿ ವಿವೇಕಾನಂದರ ಮಾತುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 153 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಸಿಎಂ, ವಿವೇಕಾನಂದರು ಮಾಣವತೆಯ ಪ್ರತಿಪಾದಕರು. ಅವರ ಚಿಕಾಗೋ ಭಾಷಣದಲ್ಲೇ ಅದು ದಾಖಲಾಗಿದೆ ಎಂದು ಹೇಳಿದರು.[ಮಹನೀಯರು ಕಂಡಂತೆ ಅದಮ್ಯ ಚೇತನ ಸ್ವಾಮಿ ವಿವೇಕಾನಂದ]

ಭಾರತ ದೇಶ ಮೊದಲಿನಿಂದಲೂ ಸಮಾನತೆ, ಸಹಬಾಳ್ವೆಗೆ ಹೆಸರಾಗಿದೆ. ಅದನ್ನು ಪ್ರತಿಯೊಬ್ಬರು ಕಾಯ್ದುಕೊಂಡು ಹೋಗಬೇಕಿದೆ. ಮಹಾತ್ಮರ ಮಾತುಗಳಿಗೆ ತಪ್ಪು ಅರ್ಥ ಕಲ್ಪಿಸಿ ಪ್ರಚುರ ಪಡಿಸಬೇಕಾಗಿಲ್ಲ ಎಂದು ಹೇಳಿದರು. ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು, ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಸಿಎಂ ಭಾಷಣದ ಪ್ರಮುಖ ಅಂಶಗಳನ್ನು ಮುಂದೆ ನೋಡಿ...

ಉದ್ದೇಶಗಳೆ ಅರ್ಥ ಆಗಲ್ಲ

ಉದ್ದೇಶಗಳೆ ಅರ್ಥ ಆಗಲ್ಲ

ಕೆಲವರು ವಿವೇಕಾನಂದರ ಹೆಸರನ್ನು ಬಳಸಿಕೊಂಡು ಮೆರವಣಿಗೆ ನಡೆಸುತ್ತವೆ. ಆದರೆ ಇದರ ಹಿಂದೆ ಒಳ್ಳೆಯ ಉದ್ದೇಶಗಳಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಮೇಲೆ ಹರಿಹಾಯ್ದರು.

 ಪ್ರಮಾಣ ಸ್ವೀಕಾರ

ಪ್ರಮಾಣ ಸ್ವೀಕಾರ

ಸ್ವಾಮಿ ವಿವೇಕಾನಂದ ತತ್ವಗಳನ್ನು ಜೀವನದ ಉದ್ದಕ್ಕೂ ಬಳಸುವ ಪ್ರಮಾಣವನ್ನು ಇದೇ ಸಂದರ್ಭ ಸಿದ್ದರಾಮಯ್ಯ ಭೋದಿಸಿದರು.

 ಧರ್ಮ ಬಡವರ ಪರವಾಗಿರಬೇಕು

ಧರ್ಮ ಬಡವರ ಪರವಾಗಿರಬೇಕು

ಯಾವುದೇ ಧರ್ಮ ಬಡವರ ಪರವಾಗಿರಬೇಕು. ಒಳ್ಳೆಯದನ್ನು ಹೇಳಬೇಕು. ಈ ಎಲ್ಲ ಅಂಶಗಳನ್ನು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.

ಸರಿಯಾದ ತತ್ವ ಪಾಲಿಸಿ

ಸರಿಯಾದ ತತ್ವ ಪಾಲಿಸಿ

ಸ್ವಾಮಿ ವಿವೇಕಾನಂದರ ಹೇಳಿಕೆ ತಮ್ಮ ಸ್ವಾರ್ಥಕ್ಕೆ ಬಳಸುತ್ತಿರುವವರನ್ನು ನಂಬಬೇಡಿ. ಸರಿಯಾದ ತತ್ವ ಪಾಲಿಸಿ ಎಂದು ಸಿದ್ದರಾಮಯ್ಯ ಹೇಳಿದರು

ಪುಟಾಣಿ ವಿವೇಕಾನಂದ

ಪುಟಾಣಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ವೇಷ ತೊಟ್ಟಿದ್ದ ಬಾಲಕನೊಂದಿಗೆ ಸಿಎಂ ಸಂಭ್ರಮದ ಕ್ಷಣಗಳನ್ನು ಕಳೆದರು. ಕಾರ್ಯಕ್ರಮದಲ್ಲಿ ಅನೇಕ ಮಂದಿ ವಿವೇಕಾನಂದ ವೇಷಧಾರಿಗಳು ಕಂಡುಬಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In an apparent jibe at the Sangh Parivar and the BJP, the Chief Minister of Karnataka Siddaramaiah on Tuesday said some vested interests are using the name of Swami Vivekananda in untrue manner only to fulfill ill motives. He was speaking at the National Youth Week organized by the government of Karnataka to observe 153rd birth anniversary of socio-religious legendary Swami Vivekananda at Kanteerava stadium.
Please Wait while comments are loading...