ಯಾರು ಗಿಣಿ, ಯಾರು ಹದ್ದು: ಸಿದ್ದರಾಮಯ್ಯ ಟ್ವೀಟ್ ಸೂಚಿಸುತ್ತಿರುವುದು ಏನು?

Recommended Video

      ಹದ್ದು ಗಿಣಿ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದು ಯಾರಿಗೆ ? | Oneindia Kannada

      ಬೆಂಗಳೂರು, ಸೆಪ್ಟೆಂಬರ್ 24: ಉಪಚುನಾವಣೆ ಆರಂಭವಾಗುತ್ತಿದ್ದಂತೆ ಮಾಜಿ ಗೆಳೆಯರಾದ ಸಿದ್ದರಾಮಯ್ಯ-ಕುಮಾರಸ್ವಾಮಿ ನಡುವೆ ಮಾತಿನ ಯುದ್ಧ ಆರಂಭವಾಗಿದೆ.

      ನಿನ್ನೆ ಮಾತನಾಡಿದ್ದ ಕುಮಾರಸ್ವಾಮಿ, 'ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಹದ್ದಾಗಿ ಕುಕ್ಕಿದವು' ಎಂದು ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

      'ಹೌದು ನಾನು ನಂಬಿದ ಗಿಣಿಗಳೇ ಹದ್ದಾಗಿ ಕಾಡಿದ್ದು ನಿಜ, ನಾಲ್ಕು ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಕುಕ್ಕದೇ ಬಿಡುತ್ತಾ? ಅನುಭವಕ್ಕಿಂತ ದೊಡ್ಡ ಪಾಠ ಏನಿದೆ ಹೇಳಿ?' ಎಂದು ಕುಮಾರಸ್ವಾಮಿ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

      Siddaramaiah Tweet Reply To Kumaraswamy

      ಸಿದ್ದರಾಮಯ್ಯ ಅವರು ನಾಲ್ಕು ದಶಕದ ರಾಜಕೀಯ ಒಡನಾಟವನ್ನು ದೇವೇಗೌಡ ಕುಟುಂಬ ಹಾಗೂ ಜೆಡಿಎಸ್‌ನೊಂದಿಗೆ ಹೊಂದಿದ್ದರು, ಅವರ ರಾಜಕೀಯ ಶೈಲಿಯ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅರಿವಿತ್ತು. ಹಾಗಿದ್ದೂ ಮೈತ್ರಿ ಮಾಡಿಕೊಂಡರು. ಇದೇ ವಿಷಯವನ್ನೇ ತಮ್ಮ ಟ್ವೀಟ್‌ನಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿ ದೇವೇಗೌಡ ಕುಟುಂಬದ ರಾಜಕೀಯದ ಅರಿವಿದ್ದು ಮೈತ್ರಿ ಮಾಡಿಕೊಂಡಿದ್ದು ತಮ್ಮ ತಪ್ಪೇ ಎಂದು ಸಿದ್ದರಾಮಯ್ಯ ಸೂಚ್ಯವಾಗಿ ಹೇಳಿದ್ದಾರೆ.

      ಹೊಸಕೋಟೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಮಂಡ್ಯದಲ್ಲಿ ಜನರು ಸ್ವಾಭಿಮಾನಕ್ಕಾಗಿ ಮತ ಚಲಾಯಿಸಿದರು. ಅಲ್ಲಿ ಹಣ, ಜಾತಿಯನ್ನು ನೋಡಲಿಲ್ಲ' ಎಂದಿದ್ದರು. ಇದು ಕುಮಾರಸ್ವಾಮಿ ಅವರನ್ನು ಕೆರಳಿಸಿತ್ತು. 'ಮೈಸೂರು, ಕೋಲಾರ, ತುಮಕೂರಿನಲ್ಲಿ ಮೈತ್ರಿ ಸೋಲಲು ಸಿದ್ದರಾಮಯ್ಯ ಕಾರಣ' ಎಂದು ಕುಮಾರಸ್ವಾಮಿ ನಿನ್ನೆ ಆರೋಪಿಸಿದ್ದರು.

      ಉಪಚುನಾವಣೆ ಘೊಷಣೆಗೂ ಮುನ್ನಾ ಮಂದಗತಿಯಲ್ಲಿದ್ದ ಮಾಜಿ ಮೈತ್ರಿಗಳ ಕಚ್ಚಾಟ, ಚುನಾವಣೆ ಘೋಷಣೆ ನಂತರ ನಿಧಾನಕ್ಕೆ ಮೇಲೇರುತ್ತಿದ್ದು, ಇದರ ಲಾಭ ಬಿಜೆಪಿಗೆ ಆಗುತ್ತದೆಯೇ ನೋಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+