ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ.ಟಿ.ದೇವೇಗೌಡ, ರಾಜಕೀಯ, ಸ್ನೇಹ, ಸಿದ್ಧಾಂತ ಕುರಿತು ಸಿದ್ದರಾಮಯ್ಯ ಟ್ವೀಟ್

|
Google Oneindia Kannada News

Recommended Video

Lok Sabha Elections 2019 : ವಿಶೇಷ ಫೋಟೋ ಹಾಕಿ ಟ್ವೀಟ್ ಮಾಡಿದ ಸಿದ್ದು | Oneindia Kannada

ಬೆಂಗಳೂರು, ಏಪ್ರಿಲ್ 16: ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಮಾಡುತ್ತದೆಯೋ ಇಲ್ಲವೋ ಆದರೆ ಕೆಲವು ನಾಯಕರ ನಡುವಿನ ವೈಷಮ್ಯವನ್ನಂತೂ ಕಡಿಮೆ ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇನ್ನೆಂದೂ ಒಟ್ಟಾಗಲಾರರು ಎಂದುಕೊಂಡಿದ್ದ ಸಿದ್ದರಾಮಯ್ಯ-ದೇವೇಗೌಡ ಅವರು ಜಂಟಿಯಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ಒಂದೇ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಪರಸ್ಪರರ ಬಗ್ಗೆ ಜೇನು ಮೆತ್ತಿದ ಮಾತನ್ನಾಡುತ್ತಿದ್ದಾರೆ.

ಮೈಸೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್ - ಜೆಡಿಎಸ್ ಮುಖಂಡರು ಮೈಸೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್ - ಜೆಡಿಎಸ್ ಮುಖಂಡರು

ಮತ್ತೊಂದು ಕಡೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರಿಗೆ ಭಾರಿ ಅಂತರದ ಸೋಲುಣಿಸಿದ ಜಿ.ಟಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಭೇಟಿಯ ನಂತರ ಸಿದ್ದರಾಮಯ್ಯ ಅವರು ಟ್ವಿಟ್ಟರ್‌ನಲ್ಲಿ ಜಿ.ಟಿ.ದೇವೇಗೌಡ ತಮ್ಮ ಸ್ನೇಹದ ಕುರಿತು ಟ್ವೀಟ್ ಒಂದನ್ನು ಮಾಡಿರುವುದು ಗಮನ ಸೆಳೆಯುತ್ತಿದೆ.

Siddaramaiah tweet about GT Deve Gowda and political relationships

ತಾವು ಮತ್ತು ಜಿ.ಟಿ.ದೇವೇಗೌಡ ವೇದಿಕೆ ಮೇಲೆ ಆಪ್ತವಾಗಿ ಮಾತನಾಡುತ್ತಿರುವ ಫೊಟೊ ಹಾಕಿರುವ ಸಿದ್ದರಾಮಯ್ಯ ಅವರು, 'ನಾನು ಮತ್ತು ಸಚಿವ ಜಿ.ಟಿ.ದೇವೇಗೌಡ ಜಾತ್ಯತೀತ ತತ್ವಕ್ಕೆ ಬದ್ದವಾಗಿರುವವರು' ಎಂದಿದ್ದಾರೆ.

ಅದು 'ಮೂಡ್' ಅಲ್ಲ, ಜನರ ಅಭಿಪ್ರಾಯ:ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯಅದು 'ಮೂಡ್' ಅಲ್ಲ, ಜನರ ಅಭಿಪ್ರಾಯ:ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ

ರಾಜಕೀಯ ವಿರೋಧಿಯೊಂದಿಗಿನ ಪುನರ್‌ ಸ್ನೇಹದ ಬಗ್ಗೆಯೂ ಬರೆದಿರುವ ಸಿದ್ದರಾಮಯ್ಯ, 'ರಾಜಕೀಯ ಬೆಳವಣಿಗೆಗಳಲ್ಲಿ ವೈಯಕ್ತಿಕ ಸಂಬಂಧಗಳು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಆಗಾಗ ಏರುಪೇರುಗಳಾಗುತ್ತವೆ. ಅಂತಿಮವಾಗಿ ರಾಜಕೀಯ ಸಂಬಂಧವನ್ನು ನಿರ್ದೇಶಿಸುವುದು ಸಿದ್ಧಾಂತ' ಎಂದಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ರಾಜಕೀಯ ಒತ್ತಡದಲ್ಲಿ ಜಿ.ಟಿ.ದೇವೇಗೌಡ ಅವರೊಂದಿಗಿನ ಸಂಬಂಧ ಏರುಪೇರಾಗಿತ್ತು, ಆದರೆ ಇಬ್ಬರ ನಿಲವು ಒಂದೇ ಆಗಿರುವ ಕಾರಣ ನಮ್ಮ ರಾಜಕೀಯ ಸಂಬಂಧ ಮತ್ತೆ ಪುನರ್‌ ಸ್ಥಾಪಿತವಾಗಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅಂತಿಮವಾಗಿ ಬಿಜೆಪಿ ಸೋಲಿಸಲು ನಾವೆಲ್ಲಾ ಒಟ್ಟಾಗಿದ್ದೇವೆ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಹೇಳಿದ್ದಾರೆ.

English summary
Former CM Siddaramaiah tweet about GT Deve Gowda and political relationships. He said political ideologies decides relations in politics, me and GT Deve Gowda's ideology is same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X