• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಿಪ್ಪು ಜಯಂತಿಗೆ ಕೈಕೊಟ್ಟ ಸಿಎಂ, ಡಿಸಿಎಂ ವಿರುದ್ಧ ಸಿದ್ದರಾಮಯ್ಯ ಟ್ವೀಟ್‌

|

ಬೆಂಗಳೂರು, ನವೆಂಬರ್ 11: ಟಿಪ್ಪು ಜಯಂತಿಯಂದು ಸಿದ್ದರಾಮಯ್ಯ ಅವರು ಕ್ರೋಧಭರಿತವಾಗಿ ಟ್ವೀಟ್‌ ಒಂದನ್ನು ಮಾಡಿದ್ದಾರೆ. ಅದು ನೇರವಾಗಿ ಸಿಎಂ ಮತ್ತು ಡಿಸಿಎಂ ಗುರಿಯಾಗಿಸಿಕೊಂಡೇ ಮಾಡಿದ ಟ್ವೀಟ್‌ ಎಂದು ವಿಶ್ಲೇಷಿಸಲಾಗುತ್ತಿದೆ.

ಟಿಪ್ಪು ಜಯಂತಿಯಲ್ಲಿ ಭಾಗವಹಿಸದೆ ತಪ್ಪಿಸಿಕೊಂಡ ಸಿಎಂ, ಡಿಸಿಎಂ ಅವರನ್ನು ಪರೋಕ್ಷವಾಗಿ ಟ್ವೀಟ್‌ ಮೂಲಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

'ಟಿಪ್ಪು' ಜಪದಲ್ಲಿ ಕಳೆದುಕೊಂಡಿದ್ದೇ ಹೆಚ್ಚು: ರಾಜಕಾರಣಿಗಳಲ್ಲಿ ಕಾಡುತ್ತಿದೆಯೇ ಭಯ?

ಜಾತ್ಯಾತೀತವಾದ ಮೂಲಸಿದ್ದಾಂತದಲ್ಲಿ ನಾನು ರಾಜಿ ಮಾಡಿಕೊಳ್ಳಲಾರೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. ಆದರೆ ಈ ಸಾಲಿನ ನಡುವೆ (ರೀಡ್ ಬಿಟ್ವೀನ್ ಲೈನ್ಸ್‌) ಓದಿದಾಗ ತಮ್ಮದೇ ಸರ್ಕಾರದ ಪ್ರಮುಖರು ಜಾತ್ಯಾತೀತ ಸಿದ್ದಾಂತವನ್ನು ಮುರಿಯುತ್ತಿದ್ದಾರೆ ಎಂದು ಹೇಳಲು ಯತ್ನಿಸುತ್ತಿರುವುದು ಗೊತ್ತಾಗುತ್ತದೆ.

ಪರಂ, ಎಚ್ ಡಿಕೆ ವಿರುದ್ಧ ಮೈಸೂರಲ್ಲಿ ಕಿಡಿ ಕಾರಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್

ಸಾರ್ವಜನಿಕ ಹಿತದೃಷ್ಠಿಯಿಂದ ನಾನೂ ರಾಜಿಮಾಡಿಕೊಂಡಿದ್ದೇನೆ ಆದರೆ ಜಾತ್ಯಾತೀತ ಅಂತಹಾ ಮೂಲಸಿದ್ಧಾಂತದಲ್ಲಿ ನಾನು ರಾಜಿ ಮಾಡಿಕೊಳ್ಳಲಾರೆ. ಅಧಿಕಾರ ಇರುತ್ತೆ, ಹೋಗುತ್ತೆ i don't care ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಮತಾಂಧ ಎನ್ನುವುದರಲ್ಲಿ ಅನುಮಾನವೇ ಇಲ್ಲ: ಈಶ್ವರಪ್ಪ

ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರು ಬೇಕೆಂದೇ ಟಿಪ್ಪು ಜಯಂತಿ ಆಚರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕಾರ ಕಳೆದುಕೊಳ್ಳುವ ಭಯ ಹಾಗೂ ಜನವಿರೋಧಕ್ಕೆ ಕಾರಣವಾಗುವ ಭಯದಿಂದ ಇವರು ಜಯಂತಿಯಲ್ಲಿ ಭಾಗವಹಿಸಿಲ್ಲ ಎನ್ನಲಾಗುತ್ತಿದೆ.

ಕೋಮುವಾದದ ಕನ್ನಡಕ ಕಳಚಿಟ್ಟು ಟಿಪ್ಪುವನ್ನು ನೋಡಿ: ಬಿಜೆಪಿಗೆ ಸಿದ್ದರಾಮಯ್ಯ ಸಲಹೆ

ಅಧಿಕಾರದ ಆಸೆಗಾಗಿ ಟಿಪ್ಪು ಜಯಂತಿ ಆಚರಣೆಗೆ ಗೈರಾಗಿ ಜಾತ್ಯಾತೀತ ಸಿದ್ದಾಂತದ ದಾರಿ ಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಟ್ವೀಟ್‌ ಮೂಲಕ ವ್ಯಕ್ತಪಡಿಸಿದ್ದಾರೆ.

English summary
Former CM Siddaramaiah tweet about CM and DCM who intentionally quit Tipu Jayanthi. Siddaramaiah said no one should violate secularism ideology for power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X