• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಲವು ಚರ್ಚೆಗೆ ಆಹಾರವಾದ ಸಿದ್ದರಾಮಯ್ಯ, ತೇಜಸ್ವಿ ಸೂರ್ಯ ಭೇಟಿ

|

ರಾಜಕೀಯವಾಗಿ ಎಷ್ಟೇ ವಿರೋಧಿಗಳಾಗಿದ್ದರೂ ಅವರಿಗೂ ವೈಯಕ್ತಿಕ ಬದುಕು, ಗೆಳೆತನ ಎನ್ನುವುದು ಇರುವುದಿಲ್ಲವೇ. ನಾನು ಸೈದ್ದಾಂತಿಕವಾಗಿ ಮಾತ್ರ ಯಡಿಯೂರಪ್ಪನವರ ವಿರೋಧಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದುಂಟು.

   ಅಸಲಿಗೆ Ramesh ಮಗಳ ಮದುವೆಯಲ್ಲಿ ಆಗಿದ್ದು ಏನು ? | Oneindia Kannada

   ಆದರೂ, ರಾಜಕೀಯ ಬದ್ದ ವಿರೋಧಿಗಳು ಭೇಟಿಯಾದರೆ ಅದು ಸಾಕಷ್ಟು ಚರ್ಚೆಗೆ ಆಹಾರವಾಗುತ್ತದೆ, ಇನ್ನಿಲ್ಲದ ಗುಸುಗುಸು ಸುದ್ದಿಗೆ ನಾಂದಿ ಹಾಡುತ್ತದೆ. ಅಂತದ್ದೊಂದು ಘಟನೆ ಒಂದು ದಿನದ ಹಿಂದೆ ನಡೆದಿದೆ.

   ನಾಯಕತ್ವ ಬದಲಾವಣೆ ಹೊಸ ಗಡುವು ಕೊಟ್ಟ ಸಿದ್ದರಾಮಯ್ಯ! ನಾಯಕತ್ವ ಬದಲಾವಣೆ ಹೊಸ ಗಡುವು ಕೊಟ್ಟ ಸಿದ್ದರಾಮಯ್ಯ!

   ಅಸಲಿಗೆ ಆಗಿದ್ದಿಷ್ಟೇ.. ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರ ಪುತ್ರಿಯ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹಲವು ಗಣ್ಯರು ಭಾಗವಹಿಸಿದ್ದರು.

   ಅದರಲ್ಲಿ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್, ಇನ್ನು ಬಿಜೆಪಿಯ ತೇಜಸ್ವಿ ಸೂರ್ಯ ಮತ್ತು ಮುನಿರತ್ನ ಕೂಡಾ ಸೇರಿದ್ದರು. ಅವರೆಲ್ಲರೂ, ಒಂದೆಡೆ ಕುಳಿತು ಚರ್ಚಿಸುತ್ತಿರುವ ಫೋಟೋ ಈಗ ಸಾಕಷ್ಟು ವೈರಲ್ ಆಗಿದ್ದು, ಒಂದೆಡೆಯಾದರೆ, ಜೆಡಿಎಸ್ ಅದಕ್ಕೆ ರಾಜಕೀಯ ಬಣ್ಣ ಕಟ್ಟಿ, ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

   ತಾಳ್ಮೆ ಅಂದ್ರೆ ತಾಳ್ಮೆ, ಸಚಿವ ಸ್ಥಾನದ ಹಿಂದೆ ಬಿದ್ದಿರುವ ಬಿಜೆಪಿಯವರಿಗೆ ಮುನಿರತ್ನ ರೋಲ್ ಮಾಡೆಲ್ ಆಗಲಿ! ತಾಳ್ಮೆ ಅಂದ್ರೆ ತಾಳ್ಮೆ, ಸಚಿವ ಸ್ಥಾನದ ಹಿಂದೆ ಬಿದ್ದಿರುವ ಬಿಜೆಪಿಯವರಿಗೆ ಮುನಿರತ್ನ ರೋಲ್ ಮಾಡೆಲ್ ಆಗಲಿ!

   ಕರ್ನಾಟಕ ಜೆಡಿಎಸ್ ಪೋಸ್ಟ್

   ಕರ್ನಾಟಕ ಜೆಡಿಎಸ್ ಪೋಸ್ಟ್

   ಕರ್ನಾಟಕ ಜೆಡಿಎಸ್ ಘಟಕ #ShameonyouSiddu ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಬರೆದುಕೊಂಡಿದ್ದು ಹೀಗೆ, "ಯಾರೋ ಕಟ್ಟಿದ ಪಕ್ಷಕ್ಕೆ ಹೋಗಿ ಸಿಎಂ ಆಗಿ ಈಗ ವೈಯಕ್ತಿಕ ದ್ವೇಷ ಸಾಧನೆಗೆ ಆ ಪಕ್ಷವನ್ನೇ ಹಾಳು ಮಾಡುತ್ತಿರುವ ಈ ದುರಹಂಕಾರಿ ವ್ಯಕ್ತಿಯದ್ದು ಎಂತಹ ನೀಚ ಮನಸ್ಥಿತಿ. ಹೊರಗಡೆ ಸಾಚಾ ರೀತಿ ಮಾತನಾಡುವುದು, ಒಳಗೊಳಗೆ ಕಂತ್ರಿ ಆಟ ಆಡುವುದು" ಇದು ಜೆಡಿಎಸ್ ಹಾಕಿರುವ ಪೋಸ್ಟ್. ಇದಕ್ಕೆ ಬೈರತಿ ಸುರೇಶ್ ಅಭಿಮಾನಿ ಬಳಗದ ತಿರುಗೇಟು ಹೀಗಿತ್ತು:

   ಸಿದ್ದರಾಮಯ್ಯ ಒಬ್ಬ ಹಿರಿಯ ರಾಜಕಾರಣಿ

   ಸಿದ್ದರಾಮಯ್ಯ ಒಬ್ಬ ಹಿರಿಯ ರಾಜಕಾರಣಿ

   "ಸಿದ್ದರಾಮಯ್ಯ ಒಬ್ಬ ಹಿರಿಯ ರಾಜಕಾರಣಿ, ಯುವಕರಿಗೆ ಅವರೊಬ್ಬ ಮಾದರಿ ರಾಜಕಾರಣಿ. ರಾಜ್ಯಾದ್ಯಂತ ಯುವ ಶಾಸಕರು, ಯುವ ಸಂಸದರು ಸಿದ್ದರಾಮಯ್ಯನವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಅವರನ್ನ ಮಾತಾಡಿಸಿ ಸಲಹೆ ಸೂಚನೆಗಳನ್ನ ಪಡೆದುಕೊಳ್ಳುತ್ತಾರೆ. ಇದರಲ್ಲಿ ಸಿದ್ದರಾಮಯ್ಯನವರ ತಪ್ಪೇನು" ಎಂದು ಬೈರತಿ ಪ್ರಶ್ನಿಸಿದ್ದಾರೆ.

    ವಿಧಾನಮಂಡಲದಲ್ಲಿ ರೈತ ವಿರೋಧಿ ಕೃಷಿ ಕಾಯ್ದೆ

   ವಿಧಾನಮಂಡಲದಲ್ಲಿ ರೈತ ವಿರೋಧಿ ಕೃಷಿ ಕಾಯ್ದೆ

   "ಮೇಲಾಗಿ ಸಿದ್ದರಾಮಯ್ಯನವರೇ ಯಾರ ಬಳಿ ಹೋಗಲಿಲ್ಲವಲ್ಲಾ?
   ವಿಧಾನಮಂಡಲದಲ್ಲಿ ರೈತ ವಿರೋಧಿ ಕೃಷಿ ಕಾಯ್ದೆಗೆ ಬೆಂಬಲ ಕೊಟ್ಟು ಅನ್ನ ಕೊಡುತ್ತಿದ್ದ ರೈತರಿಗೆ ಬೆನ್ನಿಗೆ ಚೂರಿ ಹಾಕಿದ ಮನುಷ್ಯ ರಾಜಕೀಯದಲ್ಲಿ ಇರೋದು ದುರಂತ.
   ರೈತರ ಓಟ್ ಮೇಲೆ ಉಸಿರಾಡುತ್ತಿದ್ದ ಜೆಡಿಎಸ್ ಪಕ್ಷ ರೈತರಿಗೆ ವಿರುದ್ಧವಾಗಿ ಬಿಜೆಪಿಗೆ ಬೆಂಬಲ ಕೊಟ್ಟು ಅದೇಗೆ ಮತ್ತೆ ರೈತರ ಬಳಿ ಹೋಗಿ ವೋಟ್ ಕೇಳುತ್ತೋ ನೋಡೋಣ" ಎಂದು ಬೈರತಿ ಅಭಿಮಾನಿಗಳ ಬಳಗ ತಿರುಗೇಟು ನೀಡಿದೆ.

   ಈ ಪೋಟೋ ನೋಡಿ ಜೆಡಿಎಸ್ ಹೈಕ್ಳು ಬೇಜಾನ್ ಉರ್ಕೊಂಡಿವಿಯಂತೆ

   ಈ ಪೋಟೋ ನೋಡಿ ಜೆಡಿಎಸ್ ಹೈಕ್ಳು ಬೇಜಾನ್ ಉರ್ಕೊಂಡಿವಿಯಂತೆ

   #ShameOnYouJDS #BjpBteamJDS Karnataka JDS ಈ ಪೋಟೋ ನೋಡಿ ಜೆಡಿಎಸ್ ಹೈಕ್ಳು ಬೇಜಾನ್ ಉರ್ಕೊಂಡಿವಿಯಂತೆ. ನಿನ್ನೆ ಚಿತ್ರ ನಟ ರಮೇಶ್ ಅರವಿಂದ್ ಮಗಳ ಮದುವೆಯಲ್ಲಿ ಇದೊಂದು ಸಹಜ ಭೇಟಿಗೆ ಇಷ್ಟೊಂದು ಉರ್ಕೊಂಡ್ರೆ ಹೇಗೆ ? ನಿಮ್ಮ ನಾಯಕರ ಹಾಗೆ ತಡ ರಾತ್ರಿ ಭೇಟಿ ಮಾಡಿರೋದಲ್ಲ ಸ್ವಾಮಿ" ಎಂದು ಬೈರತಿ ಸುರೇಶ್ ಅಭಿಮಾನಿ ಬಳಗದ ಫೇಸ್ ಬುಕ್ ನಲ್ಲಿ ಪೋಸ್ಟ್ ಆಗಿದೆ.

   English summary
   Siddaramaiah And Tejaswi Surya Met In Ramesh Arvind Daughter Marriage, JDS FB Post,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X