ಮಾಂಸ ತಿನ್ನುವುದು, ತಿನ್ನದೇ ಇರುವದು ವಿವಾದವೇ ಅಲ್ಲ: ಸಿದ್ದರಾಮಯ್ಯ ಹೇಳಿದ್ದೇನು.?
ಬಿಜೆಪಿ ರಾಜ್ಯ ನಾಯಕರಿಗೆ ಜನರಿಗೆ ಮುಖ ತೋರಿಸುವ ಶಕ್ತಿ ಇಲ್ಲ. ಹೀಗಾಗಿ ಮೋದಿ ,ನಡ್ಡಾ ,ಅಮಿತ್ ಶಾ ಅವರನ್ನ ಕರೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಾಗಲಕೋಟೆ,ಫೆಬ್ರವರಿ23: ಮಾಂಸ ತಿಂದು ಈ ಹಿಂದೆ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡಿದ್ದು, ಸಿದ್ದರಾಮಯ್ಯ ವಿರುದ್ದ ರಾಜ್ಯ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸುವ ಮೂಲಕ ಟೀಕೆ ಮಾಡಿದ್ರು.
ಆದರೆ ಬಿಜೆಪಿ ನಾಯಕ ಸಿ ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ವಿಚಾರಕ್ಕೆ ಇದೀಗ ಸಿದ್ದರಾಮಯ್ಯ ಉತ್ತರಿದ್ದಾರೆ. ದೇವಸ್ಥಾನಕ್ಕೆ ಹೋಗೋದು,ಹೋಗದೇ ಇರುವುದು, ಮಾಂಸ ತಿನ್ನುವುದು, ತಿನ್ನದೇ ಇರುವದು ವಿವಾದವೇ ಅಲ್ಲ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿವಾದಗಳು ಇರುವುದು ಜನರ ಸಮಸ್ಯೆಗಳು ಹಾಗೂ ಕೊರತೆಗಳಲ್ಲಿ. ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ನಾನು ಈಗಾಗಲೇ ಬಿಜೆಪಿಗರಿಗೆ ನಾವು ಚರ್ಚೆ ಮಾಡಲು ತಯಾರಿದ್ದೇವೆ. ನೀವು ತಯಾರಿದ್ದೀರಾ ಎಂದು ಕೇಳಿದ್ದೇನೆ ಎಂದು ಹೇಳಿದರು.
ಈ ನಾಡಿನ ರೈತರಿಗೆ, ಬಡವರಿಗೆ ಏನು ಮಾಡಿದೀರಿ ಅಂತ ಅವರು ಹೇಳಬೇಕು. ಜನರ ಸಮಸ್ಯೆಗಳನ್ನು ಬಗೆ ಹರಿಸುವದನ್ನು ಬಿಟ್ಟು. ನಾಮ(ತಿಲಕ) ಹಾಕಿಕೊಳ್ಳುವದು ದೇವಸ್ಥಾನಕ್ಕೆ ಹೋಗುವುದು, ಟಿಪ್ಪು ಸುಲ್ತಾನ,ಗಾಂಧಿ ,ಗೋಡ್ಸೆ,ಸಾವರ್ಕಕರ್ ಬಗ್ಗೆ ಮಾತನಾಡುವದು ಇವೆಲ್ಲ ರಿಲೆವೆಂಟ್ ವಿಷಯಗಳಲ್ಲ ಎಂದು ಕಿಡಿಕಾರಿದರು.

ಪ್ರಧಾನಮಂತ್ರಿ ಮೋದಿ ಮೇಲಿಂದ ಮೇಲೆ ಕರ್ನಾಟಕಕ್ಕೆ ಬರುತ್ತಿರುವ ವಿಚಾರವಾಗಿ ಮಾತನಾಡಿ, ಮೋದಿ ಪ್ರವಾಹ ಬಂದಾಗ ಬರಲಿಲ್ಲ.ಕೊವೀಡ್ ಬಂದಾಗ ಬರಲಿಲ್ಲ,ಕೊವೀಡ್ ಬಂದಾಗ ಆಕ್ಸಿಜನ್ ಇಲ್ಲದೆ ಜನರು ಸತ್ತರು. ಅವಾಗ ಕೂಡ ಬರಲಿಲ್ಲ ಎಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.
ನಮ್ಮ ಆಕ್ಸಿಜನ್ ಬೇರೆಯವರಿಗೆ ಕೊಡ್ತಾ ಇದ್ದರು,ಕೋರ್ಟ್ ನಮ್ಮ ಪರವಾಗಿ ನಿಂತು ಅಂತ ಆಕ್ಸಿಜನ್ ಇಲ್ಲೇ ಉಳಿತು. ಈಗ ಚುನಾವಣೆಗೋಸ್ಕರ ರಾಜ್ಯಕ್ಕೆ ಬರ್ತಾ ಇದ್ದಾರೆ. ಚುನಾವಣೆ ಗೆಲ್ಲಬೇಕು ಅನ್ನುವ ಉದ್ದೇಶದಿಂದ ಬರ್ತಾ ಇದ್ದಾರೆ. ಜನರ ಅಭಿವೃದ್ಧಿ ಬಗ್ಗೆ ಅವರು ಯೋಚನೆ ಮಾಡುತ್ತಿದ್ದಾರಾ? ಇಲ್ಲ . ರೈತರ ಸಮಸ್ಯೆ ವಿಚಾರ ಮಾಡತ್ತಾರಾ? ಇಲ್ಲ ಎಂದು ಕಿಡಿಕಾರಿದರು.
ಬಿಜೆಪಿ ರಾಜ್ಯ ನಾಯಕರಿಗೆ ಜನರಿಗೆ ಮುಖ ತೋರಿಸುವ ಶಕ್ತಿ ಇಲ್ಲ. ಹೀಗಾಗಿ ಮೋದಿ ,ನಡ್ಡಾ ,ಅಮಿತ್ ಶಾ ಅವರನ್ನ ಕರೆಸುತ್ತಿದ್ದಾರೆ. ಭ್ರಷ್ಟರು ಆಗಿದ್ದಕ್ಕೆ ಜನರ ಮುಂದೆ ಹೋಗುವುದಕ್ಕೆ ಭಯವಾಗಿದೆ. ಮೋದಿ ಅವರನ್ನು ಮುಂದೆ ಇಟ್ಟುಕೊಂಡು ಬಿಜೆಪಿ ನಾಯಕರು ಹಿಂದಿಂದೆ ಜನರ ಬಳಿ ಹೋಗುತ್ತಾ ಇದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.












Click it and Unblock the Notifications