Siddaramaiah: ವರುಣಾದಲ್ಲಿ ಸಿದ್ದರಾಮಯ್ಯಗೆ ಶುರುವಾಗಿದೆ ಸೋಲಿನ ಭಯ!? ಲಿಂಗಾಯತರಿಗೆ ಕ್ಷಮೆ ಕೇಳಿದ್ಯಾಕೆ?
ಮೈಸೂರು,ಮೈ 5: ಚುನಾವಣಾ ಹೊತ್ತಲಿ ಒಂದಲ್ಲ ಒಂದು ಕಾಂಗ್ರೆಸ್ ನಾಯಕರ ವಿವಾದತ್ಮಕ ಹೇಳಿಕೆಗಳು ಆಡಳಿತರೂಢ ಬಿಜೆಪಿಗೆ ವರದಾನವಾಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದದುರಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್ ನಾಯಕರ ಹೇಳಿಕೆಗಳೇ ಚುನಾವಣಾ ಅಸ್ತ್ರವಾಗಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಲಿಂಗಾಯತ ಮುಖ್ಯಮಂತ್ರಿ ಭ್ರಷ್ಟಚಾರ ಮಾಡಿರುವುದು ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.
ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನ ಬಿಜೆಪಿ ನಾಯಕರು ಲಿಂಗಾಯತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ರು, ಇದೀಗ ವರುಣಾದಲ್ಲಿ ಸ್ಪರ್ಧೆ ಮಾಡಿರುವ ಸಿದ್ದರಾಮಯ್ಯ ಅವರು ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದು, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಸಿದ್ದರಾಮಯ್ಯ ಅವರನ್ನ ಸೋಲಿಸಲು ಬಿಜೆಪಿ ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ವಿ ಸೋಮಣ್ಣ ಅವರನ್ನ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿ ಕಣಕ್ಕಿಳಿಸಿದೆ.

ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನ ಸೋಲಿಸಲು ಬಿಜೆಪಿ ನಾಯಕರು ಹಲವು ತಂತ್ರಗಳನ್ನ ನಡೆಸಿದ್ದು, ಸಿದ್ದರಾಮಯ್ಯ ಅವರು ಕೊಟ್ಟ ಈ ಲಿಂಗಾಯತ ಸಿಎಂ ಹೇಳಿಕೆಯನ್ನ ಚುನಾವಣಾ ಸರಕನ್ನಾಗಿ ಮಾಡಿಕೊಂಡಿದ್ದಾರೆ. ಇತ್ತ ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿರುವ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಲಿಂಗಾಯತ ಮತಗಳು ಕೈತಪ್ಪುವ ಭೀತಿ ಎದುರಾಗಿದೆ ಹೀಗಾಗಿ ವರುಣಾದಲ್ಲಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.
ಲಿಂಗಾಯತ ಸಮಾಜ ಕ್ಷಮಿಸಬೇಕು.. ಕ್ಷಮಿಸಬೇಕು..ಕ್ಷಮಿಸಬೇಕು ಎಂದು ವರುಣಾ ವಿಧಾನಸಭಾ ಕ್ಷೇತ್ರದ ರಾಂಪುರದಲ್ಲಿ ಸಿದ್ದರಾಮಯ್ಯ ಈ ಮಾತುಗಳನ್ನ ಆಡಿದ್ದಾರೆ. ಸಿದ್ದರಾಮಯ್ಯ ಇಲ್ಲಿ ಈ ರೀತಿ ಮೂರು ಮೂರು ಬಾರಿ ಲಿಂಗಾಯತ ಸಮಾಜವನ್ನು ಕ್ಷಮೆ ಕೇಳಿದ್ದಕ್ಕೆ ಕಾರಣ ತಾನು ಎಲ್ಲರ ಬೀದಿಗಳಿಗೆ ಪ್ರಚಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುವುದು ಎನ್ನಲಾಗಿದೆ.

ಅಧಿಕ ಸಂಖ್ಯೆಯಲ್ಲಿರುವ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಲಿಂಗಾಯತ ಮತಗಳು ಕೈತಪ್ಪುವ ಭೀತಿಯಿಂದಾಗಿ ಸಿದ್ದರಾಮಯ್ಯ ಈ ರೀತಿ ಮೂರು ಮೂರು ಬಾರಿ ಲಿಂಗಾಯತ ಸಮುದಾಯದ ಕ್ಷಮೆ ಕೇಳುವುದರ ಹಿಂದೆ ಬೇರೆಯದೇ ಲೆಕ್ಕಾಚಾರ ಇದೆ ಎನ್ನಲಾಗುತ್ತಿದೆ. ಈ ಹಿಂದೆ ಲಿಂಗಾಯತ ಸಿಎಂಗಳೇ ಈ ರಾಜ್ಯವನ್ನೇ ಹಾಳು ಮಾಡಿರುವುದು, ಭ್ರಷ್ಟಚಾರ ಮಾಡಿರುವುದು ಎಂದು ಹೇಳಿ ಸಿದ್ದರಾಮಯ್ಯ ದೊಡ್ಡ ವಿವಾದಕ್ಕೆ ಗುರಿಯಾಗಿದ್ದು, ಅದರ ಲಾಭವನ್ನ ಬಿಜೆಡಪಿ ಪಡೆದುಕೊಂಡಿತ್ತು.
ಹಿಂದಿನಿಂದಲೂ ಲಿಂಗಾಯತ ಸಮುದಾಯದ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿದ್ದು, ಇದೀಗ ಚುನಾವಣಾ ಹೊತ್ತಲಿ ಕೊಟ್ಟ ಈ ಹೇಳಿಕೆಯಿಂದಾಗಿ ಲಿಂಗಾಯತರ ಕೋಪಕ್ಕೆ ಸಿದ್ದರಾಮಯ್ಯ ಗುರಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿರುವ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಲಿಂಗಾಯತ ಮತಗಳು ಕೈತಪ್ಪುವ ಭೀತಿ ಎದುರಾಗಿದ್ದು, ವೀರಶೈವ-ಲಿಂಗಾಯತ ಸಮುದಾಯದ ಕೋಪವನ್ನು ತಣ್ಣಗಾಗಿಸಲು ಸಿದ್ದರಾಮಯ್ಯ ಈ ರೀತಿ ಕ್ಷಮೆಯಾಚಿಸಿದ್ದಾರೆ ಎನ್ನುವ ಚರ್ಚೆ ಗ್ರಾಸವಾಗಿದೆ.
ವರುಣಾ ಕ್ಷೇತ್ರದ ರಾಂಪುರದಲ್ಲಿ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ಬೀದಿ ಬೀದಿಗೆಲ್ಲ ಹೋಗುವುದಕ್ಕೆ ಆಗಲ್ಲ. ನಿಮಗೆಲ್ಲ ಕೈಮುಗಿದು ಹೋಗೋಣ ಎಂದು ಬಂದಿದ್ದೇನೆ ಕ್ಷಮಿಸಿ ಎಂದು ಹೇಳಿದ್ದಾರೆ. ಲಿಂಗಾಯತ ಸಮಾಜದವರು ಕ್ಷಮಿಸಬೇಕು. ಯಾಕಂದ್ರೆ, ನಾನು ಎರಡೇ ದಿನ ಮಾತ್ರ ವರುಣಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದಿದ್ದೇನೆ. ಕ್ಷಮಿಸಿ ಎಂದು ಹೇಳಿದ ಅವರು, ಅ ದೇವಸ್ಥಾನಗಳಿಗೆಲ್ಲ ಹೋಗೋಕೆ ಆಗಲ್ಲ. ಇದು ಮೊದಲನೇ ಊರು ಅಂತೇಳಿ ಕೆಲವು ದೇವಸ್ಥಾನಗಳಿಗೆ ಹೋಗಿದ್ದೇನೆ. ಮತ್ತೊಮ್ಮೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ವರುಣಾ ಕ್ಷೇತ್ರದ ರಾಂಪುರ ಗ್ರಾಮದಲ್ಲಿ ಲಿಂಗಾಯತ ಸಮುದಾಯದ ಕ್ಷಮೆ ಕೋರಿದ ಸಿದ್ದರಾಮಯ್ಯ, ಲಿಂಗಾಯತರ ಪ್ರಾಬಲ್ಯವಿರುವ ಹದಿನಾರು ಗ್ರಾಮದಲ್ಲೂ ತಾವು ಲಿಂಗಾಯತ ವಿರೋಧಿಯಲ್ಲ ಎಂದು ಹೇಳಿವ ಮೂಲಕ ಅಪಪ್ರಚಾರಕ್ಕೆ ಕಿವಿ ಕೊಡಬೇಡಿ ಅಂತಾ ಮನವಿ ಮಾಡಿದ್ದಾರೆ. ನನ್ನನ್ನ ವಿರಶೈವ ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಬಸವಣ್ಣನ ಅಭಿಮಾನಿ, ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಬಸವಣ್ಣನ ಪೋಟೋ ಇಡಲು ಆದೇಶ ಮಾಡಿದವನು ನಾನು. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗೂ ಕಡ್ಡಾಯ ಭಾವಚಿತ್ರ ಅಳವಡಿಕೆಗೆ ಆದೇಶ ನೀಡಿದೆ ಎಂದು ಹೇಳಿದರು.












Click it and Unblock the Notifications