ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಾ ಉಪ ಚುನಾವಣೆಯಲ್ಲಿ ಸ್ನೇಹಿತ ಡಾ. ರಾಜೇಶ್‌ಗೌಡಗೆ ಬೆಂಬಲ: ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಹೇಳಿಕೆ!

|
Google Oneindia Kannada News

ಬೆಂಗಳೂರು, ಅ. 19: ರಾಜಕೀಯವೇ ಹಾಗೆ. ಅಲ್ಲಿ ಸ್ನೇಹ, ಸಂಬಂಧ ಎಲ್ಲವೂ ವೈಯಕ್ತಿಕವಾಗಿ ಮಾತ್ರ ಇರುತ್ತವೆ. ಇದೀಗ ಶಿರಾ ಉಪ ಚುನಾವಣೆಯಲ್ಲಿಯೂ ಅಂತಹ ಪ್ರಸಂಗ ಎದುರಾಗಿದೆ. ತಮ್ಮ ಆಪ್ತ ಸ್ನೇಹಿತನ ವಿರುದ್ದವೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ, ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪ್ರಚಾರಕ್ಕಿಳಿದಿದ್ದಾರೆ. ಶಿರಾ ಉಪಸಮರದ ಪ್ರಚಾರ ಸಭೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ. ಶಿರಾ ನಗರ ಹಾಗೂ ಗೌಡಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಸದ್ಯ ಬಿಜೆಪಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ರಾಜೇಶ್ ಗೌಡ ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಆಪ್ತಸ್ನೇಹಿತರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ವೈಯಕ್ತಿಕ ನೆಲೆಯಲ್ಲಿ ಸ್ನೇಹ ವಿಶ್ವಾಸವೇ ಬೇರೆ, ಆದರೆ, ಉಪ ಚುನಾವಣೆ ಘೋಷಣೆಯಾದ ನಂತರ ಪುತ್ರನ ಸ್ನೇಹಿತನನ್ನು ದಾಳವಾಗಿ ಬಳಸಿಕೊಂಡು ಮತ್ತೊಂದು ಪಕ್ಷಕ್ಕೆ ಕಳುಹಿಸುವ ಜಾಯಮಾನ ನನ್ನದಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ್ದರು.

ಉಪ ಚುನಾವಣಾ ಅಖಾಡಕ್ಕೆ ಸಂಸದ ಡಿಕೆ ಸುರೇಶ್: ಮೊದಲ ದಿನವೇ ಭರ್ಜರಿ ಬೇಟೆ!ಉಪ ಚುನಾವಣಾ ಅಖಾಡಕ್ಕೆ ಸಂಸದ ಡಿಕೆ ಸುರೇಶ್: ಮೊದಲ ದಿನವೇ ಭರ್ಜರಿ ಬೇಟೆ!

ಹೀಗಾಗಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಪ್ರಚಾರ ಕುತೂಹಲ ಮೂಡಿಸಿದೆ. ಡಾ. ಯತೀಂದ್ರ ಅವರು ಚುನಾವಣಾ ಪ್ರಚಾರದಲ್ಲಿ ಸ್ನೇಹಿತನ ಕುರಿತು ಏನಂದರು? ಮುಂದೆ ಓದಿ.

ಸ್ನೇಹಿತ ನಿಜ ಎಂದು ಡಾ. ಯತೀಂದ್ರ!

ಸ್ನೇಹಿತ ನಿಜ ಎಂದು ಡಾ. ಯತೀಂದ್ರ!

ಪ್ರಚಾರ ಸಭೆಯಲ್ಲಿ ಮಾತನಾಡಿರುವ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಡಾ. ರಾಜೇಶ್ ಗೌಡ ಅವರು ನನ್ನ ಸ್ನೇಹಿತರೇ. ಆದರೆ ವೈಯಕ್ತಿಕ ಸಂಬಂಧವೇ ಬೇರೆ ರಾಜಕೀಯವೇ ಬೇರೆ. ಅವರು ಸ್ನೇಹಿತರಾಗಿದ್ದಾಗ ಅವರ ತಂದೆ ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿದ್ದರು ಎಂದು ಶಾಸಕ ಯತೀಂದ್ರ ಹೇಳಿದ್ದಾರೆ.

ಈಗ ಅವರೊಂದಿಗೆ ಪಾಲುದಾರಿಕೆ ಇಲ್ಲ

ಈಗ ಅವರೊಂದಿಗೆ ಪಾಲುದಾರಿಕೆ ಇಲ್ಲ

ನಾನು ಹಾಗೂ ಡಾ. ರಾಜೇಶ್ ಗೌಡ ಅವರು ಪಾಲುದಾರಕೆಯಲ್ಲಿ ಲ್ಯಾಬ್ ಕೂಡ ಮಾಡಿದ್ದೇವು. ಆಮೇಲೆ ಅದರಿಂದ ಹೊರಗೆ ಬಂದಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸಿ ಅಂತಾ ಕೇಳಿಕೊಂಡಿದ್ದರು ಎಂಬುದನ್ನು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಅವರಿಗೆ ಟಿಕೆಟ್ ಕುರಿತು ಭರವಸೆ

ಅವರಿಗೆ ಟಿಕೆಟ್ ಕುರಿತು ಭರವಸೆ

ಆದರೆ ಡಾ. ರಾಜೇಶ್ ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ಬಗ್ಗೆ ಭರವಸೆ ಕೊಟ್ಟಿರಲಿಲ್ಲ. ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ನಮ್ಮ ಹಿರಿಯರು, ಅದರೇ ಅಭ್ಯರ್ಥಿ ಅಂತಾ ಹೇಳಿದ್ದೇವು. ಟಿಕೆಟ್ ಕೊಡೊಕೆ ಆಗುವುದಿಲ್ಲ. ಪಕ್ಷಕ್ಕೆ ಸೇರಿ ಕೆಲಸ ಮಾಡಿ ಅಂತಾ ಹೇಳಿದ್ದೇವು ಎಂದು ಶಾಸಕ ಡಾ. ಯತೀಂದ್ರ ನೆನಪಿಸಿಕೊಂಡರು.

Recommended Video

Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2
ರಾಜೇಶ್ ಗೌಡರಿಗೆ ನನ್ನ ಬೆಂಬಲವಿಲ್ಲ

ರಾಜೇಶ್ ಗೌಡರಿಗೆ ನನ್ನ ಬೆಂಬಲವಿಲ್ಲ

ಆದರೆ ಅವರಿಗೆ ಅವಸರಕ್ಕೆ ಟಿಕೆಟ್ ಬೇಕಾಗಿತ್ತು, ಹಾಗಾಗಿ ಬಿಜೆಪಿ ಸೇರಿದ್ದಾರೆ. ರಾಜೇಶ್ ಗೌಡ ಸ್ನೇಹಿತರು ಅನ್ನೋ ಕಾರಣಕ್ಕೆ ಪಕ್ಷ ನಿಷ್ಠೆ ಬಿಡುವುದಕ್ಕೆ ಆಗುವುದಿಲ್ಲ. ನಾನು ಅವರಿಗೆ ಬೆಂಬಲ ಕೊಟ್ಟಿದ್ದೇವೆ ಎಂಬುದು ಬಿಜೆಪಿಯ ಅಪಪ್ರಚಾರ ಅಷ್ಟೆ, ಹಾಗೆಲ್ಲಾ ಏನು ಇಲ್ಲಾ ಎಂದು ಶಿರಾದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

English summary
Former chief minister Siddaramaiah's son, Varuna Congress MLA Dr. Yathindra Siddaramaiah started canvas in Sira by election. On this occasion MLA Dr. Yathindra Siddaramaiah talked about his friend and BJP candidate Dr. Rajesh Gowda also, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X