Siddaramaiah: ನರೇಂದ್ರ ಮೋದಿ ರಾಜ್ಯಕ್ಕೆ ಆಶೀರ್ವಾದವೋ? ಶಾಪವೋ? ಜೆಪಿ ನಡ್ಡಾಗೆ ಸಿದ್ದರಾಮಯ್ಯ ಪ್ರಶ್ನೆ

ರಾಜ್ಯವು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತವಾಗಬಾರದು ಎನ್ನುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಈಗ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಕೂಡ ಸರಣಿ ಟ್ವೀಟ್ ಮಾಡಿದ್ದು ಜೆಪಿ ನಡ್ಡಾ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ್ದ ಜೆಪಿ ನಡ್ಡಾ, ಕರ್ನಾಟಕ ರಾಜ್ಯ ನರೇಂದ್ರ ಮೋದಿ ಅವರ ಆಶೀರ್ವಾದಿಂದ ವಂಚಿತವಾಗಬಾರದು, ಬಿಜೆಪಿಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ಮತ್ತೆ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದರು. ನಡ್ಡಾ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಕೂಡ ವಿರೋಧ ವ್ಯಕ್ತವಾಗಿದೆ.

Siddaramaiah On JP Nadda Comments About Narendra Modi Blessings On Karnataka

ನಡ್ಡಾ ಹೇಳಿಕೆಗೆ ಸಿದ್ದರಾಮಯ್ಯ ಭಾರಿ ವಿರೋಧ ವ್ಯಕ್ತಪಡಿಸಿದ್ದು ಸಾಲು ಸಾಲು ಪ್ರಶ್ನೆಗಳ ಮೂಲಕ ಟೀಕೆ ಮಾಡಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಗಳ ಬಗ್ಗೆ ವಿವರಣೆ ನೀಡಿರುವ ಅವರು ಇದೆಲ್ಲಾ ಮೋದಿಯ ಆಶೀರ್ವಾದವೇ ಇಲ್ಲ ಶಾಪವಾ ಎಂದು ಕೇಳಿದ್ದಾರೆ.

ತೆರಿಗೆ ಹಂಚಿಕೆಯ ತಾರತಮ್ಯ ನೀತಿಯಲ್ಲಿ ಕರ್ನಾಟಕ ಅಂದಾಜು ಒಂದು ಲಕ್ಷ ಕೋಟಿ ಕಳೆದುಕೊಂಡಿದ್ದ, ಕನ್ನಡಿಗರು ಒಂದು ಲಕ್ಷ ಕೋಟಿ ರುಪಾಯಿ ಕಳೆದುಕೊಂಡಿದ್ದಾರೆ, ಕನ್ನಡಿಗರು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರುಪಾಯಿ ತೆರಿಗೆಯಲ್ಲಿ ಹದಿನೈದಯ ಪೈಸೆ ಮಾತ್ರ ನೀಡಲಾಗುತ್ತಿದೆ, ಇದು ನರೇಂದ್ರ ಮೋದಿಯವರ ಆಶೀರ್ವಾದವೇ ಅಥವಾ ಶಾಪವೇ ಎಂದು ಕೇಳಿದ್ದಾರೆ.

ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗಿದೆ

ಕೇಂದ್ರ ಬಿಜೆಪಿ ಸರ್ಕಾರದ ಅನುದಾಣ ಕಡಿತದಿಂದಾಗಿ ರಾಜ್ಯದ ಮೇಲೆ ಸಾಲ ಹೆಚ್ಚಾಗಿದೆ. 2.40 ಲಕ್ಷ ಕೋಟಿ ರುಪಾಯಿಗಳಿದ್ದ ರಾಜ್ಯದ ಸಾಲ 5.60 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದ್ದು, ಕನ್ನಡಿಗನ ತಲೆಮೇಲೆ 86 ಸಾವಿರ ಸಾಲದ ಹೊರೆ ಬಿದ್ದಿರುವುದು ನರೇಂದ್ರ ಮೋದಿಯವರ ಆಶೀರ್ವಾದವಾ ಎಂದು ಪ್ರಶ್ನಿಸಿದ್ದಾರೆ.

2019ರಲ್ಲಿ ನೆರೆ ಹಾವಳಿ ನಷ್ಟಕ್ಕೆ 35 ಸಾವಿರ ಕೋಟಿ ಪರಿಹಾರ ಕೇಳಿದ್ದರೂ, ಕೇವಲ 1,869 ಕೋಟಿ ರುಪಾಯಿ ಮಾತ್ರ ಕೇಂದ್ರ ಬಿಜೆಪಿ ಸರ್ಕಾರ ಕೊಟ್ಟಿತು, 2020 ಮತ್ತು 2021ರಲ್ಲಿ ಕೂಡ ಇದೇ ಅನ್ಯಾಯ ಮುಂದುವರೆಸಿತು. ಐಬಿಪಿಎಸ್ ಮತ್ತು ಎಲ್ಐಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲಿಕ್ಕೆ ಅವಕಾಶ ನೀಡದೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿ ಕನ್ನಡಿಗ ಯುವಜನರ ಹೊಟ್ಟೆಗೆ ಹೊಡೆದದ್ದು ಪ್ರಧಾನಿ ಮೋದಿ ಆಶೀರ್ವಾದವಾ ಅಥವಾ ಶಾಪವಾ ಎಂದು ಕೇಳಿದ್ದಾರೆ.

ಕನ್ನಡಿಗರು ಕಟ್ಟಿ ಬೆಳೆಸಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಮತ್ತು ವಿಜಯಬ್ಯಾಂಕ್ ಗಳನ್ನು ನುಂಗಿ ಹಾಕಿದ್ದು, ಕನ್ನಡಿಗರ ಹೆಮ್ಮೆಯ 'ನಂದಿನಿ'ಯನ್ನು ಗುಜರಾತ್ ಮೂಲದ 'ಅಮುಲ್' ಆಪೋಶನ ತೆಗೆದುಕೊಳ್ಳಲು ಹೊರಟಿರುವುದು ಕೂಡ ನರೇಂದ್ರ ಮೋದಿ ಆಶೀರ್ವಾದದಿಂದಲಾ ಎಂದು ಜೆಪಿ ನಡ್ಡಾರನ್ನು ಪ್ರಶ್ನಿಸಿದ್ದಾರೆ.

ಕರ್ನಾಟಕದ ಗಡಿಪ್ರದೇಶವನ್ನು ಆಕ್ರಮಿಸುವ ದುರುದ್ದೇಶದಿಂದ ಮಹಾರಾಷ್ಟ್ರದ ಬಿಜೆಪಿ ಬೆಂಬಲಿತ ಸರ್ಕಾರ ಅಲ್ಲಿನ 865 ಹಳ್ಳಿಗಳಲ್ಲಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು. ಮಹದಾಹಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲು ವಿಳಂಬ ಮಾಡಿದ್ದು, ಮೇಕೆದಾಟು ಯೋಜನೆಗೆ ಅನುಮತಿ ನೀಡಲು ವಿಫಲವಾಗಿದ್ದು, ಕೇಂದ್ರ ಸರ್ಕಾರದ ನೆರವಿನ ಕೊರತೆಯಿಂದ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿರುವುದು ನರೇಂದ್ರ ಮೋದಿ ಆಶೀರ್ವಾದವೇ? ಶಾಪವೇ? ಎಂದು ಕೇಳಿದ್ದಾರೆ.

ರಾಜ್ಯ ಬಿಜೆಪಿ ನಾಯಕರು 40 ಪರ್ಸೆಂಟ್ ಕಮಿಷನ್ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳನ್ನು ನುಂಗಿ ಹಾಕಿದ್ದಾರೆ ಎಂದು ಆರೋಪಿಸಿರುವ ಸಿದ್ಧರಾಮಯ್ಯ ಇದು ನರೇಂದ್ರ ಮೋದಿಯವರ ಆಶಿರ್ವಾದವೊ ಅಥವಾ ಶಾಪವೋ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+