ಸಿದ್ದರಾಮಯ್ಯ ರಾಜ್ಯದ ಐದನೇ ಒಬಿಸಿ ಸಿಎಂ: 9 ಲಿಂಗಾಯತರು, 7 ಒಕ್ಕಲಿಗರು ಸೇರಿ ಕರ್ನಾಟಕದ ಸಿಎಂಗಳ ಜಾತಿವಾರು ಪಟ್ಟಿ
ಬೆಂಗಳೂರು, ಮೇ 19: ಶನಿವಾರದಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿವಿಧ ರಾಜ್ಯಗಳ ಎಂಟು ಮುಖ್ಯಮಂತ್ರಿಗಳು ಈ ಭವ್ಯ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಕುರುಬ ಸಮುದಾಯಕ್ಕೆ ಸೇರಿರುವ ಅವರು ರಾಜ್ಯದ ಇತಿಹಾಸದಲ್ಲಿ ಎರಡು ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕದ ಏಳನೇ ಮುಖ್ಯಮಂತ್ರಿಯಾಗಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಒಂಬತ್ತು ಲಿಂಗಾಯತ ನಾಯಕರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ, ಒಕ್ಕಲಿಗರು ಏಳು ಬಾರಿ, ಇತರ ಹಿಂದುಳಿದ ವರ್ಗಗಳಿಂದ (ಒಬಿಸಿ) ಐವರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಒಬ್ಬರು ಬ್ರಾಹ್ಮಣ ಮುಖ್ಯಮಂತ್ರಿಯಾಗಿದ್ದಾರೆ.
ರಾಜ್ಯದ ಮೊದಲ ಮೂರು ಮುಖ್ಯಮಂತ್ರಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ 1956 ರಲ್ಲಿ ರಾಜ್ಯಗಳ ಮರುಸಂಘಟನೆ ಕಾಯಿದೆಯ ನಂತರ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಹಲವಾರು ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಲಾಯಿತು. ಈ ನಡೆಯನ್ನು ಅನುಸರಿಸಿ, ಲಿಂಗಾಯತರು ಕರ್ನಾಟಕದ ರಾಜಕೀಯದ ಮೇಲೆ ಪ್ರಭಾವ ಸಾಧಿಸಿದ್ದಾರೆ.
ರಾಜ್ಯದ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳ ಜಾತಿವಾರು ಪಟ್ಟಿ ಇಲ್ಲಿದೆ.
1- ಕೆ. ಚೆಂಗಲರಾಯ ರೆಡ್ಡಿ, ಕಾಂಗ್ರೆಸ್, ಅಕ್ಟೋಬರ್ 25, 1947 - ಮಾರ್ಚ್ 30, 1952
2- ಕೆಂಗಲ್ ಹನುಮಂತಯ್ಯ, ಕಾಂಗ್ರೆಸ್, ಮಾರ್ಚ್ 30, 1952 - ಆಗಸ್ಟ್ 19, 1956
3- ಕಡಿದಾಳ್ ಮಂಜಪ್ಪ, ಕಾಂಗ್ರೆಸ್, ಆಗಸ್ಟ್ 19, 1956 - ಅಕ್ಟೋಬರ್ 31, 1956
4- ಎಸ್.ನಿಜಲಿಂಗಪ್ಪ, ಕಾಂಗ್ರೆಸ್, ನವೆಂಬರ್ 1, 1956 - ಮೇ 16, 1958
5- ಬಿ.ಡಿ.ಜತ್ತಿ, ಕಾಂಗ್ರೆಸ್, ಮೇ 16, 1958 - ಮಾರ್ಚ್ 9, 1962

6- ಎಸ್.ಆರ್. ಕಂಠಿ, ಕಾಂಗ್ರೆಸ್, ಮಾರ್ಚ್ 14, 1962 - ಜೂನ್ 20, 1962
7- ಎಸ್.ನಿಜಲಿಂಗಪ್ಪ, ಕಾಂಗ್ರೆಸ್, ಜೂನ್ 21, 1962 - ಮೇ 28, 1968
8- ವೀರೇಂದ್ರ ಪಾಟೀಲ್, ಕಾಂಗ್ರೆಸ್, ಮೇ 29, 1968 - ಮಾರ್ಚ್ 18, 1971
9- ಡಿ.ದೇವರಾಜ್ ಅರಸ್, ಕಾಂಗ್ರೆಸ್, ಮಾರ್ಚ್ 20, 1972 - ಡಿಸೆಂಬರ್ 31, 1977
10- ಆರ್ ಗುಂಡೂರಾವ್, ಕಾಂಗ್ರೆಸ್, ಜನವರಿ 12, 1980 - ಜನವರಿ 6, 1983
11- ರಾಮಕೃಷ್ಣ ಹೆಗಡೆ, ಜನತಾ ಪಕ್ಷ, ಜನವರಿ 10, 1983 - ಆಗಸ್ಟ್ 10, 1988
12- ಎಸ್.ಆರ್. ಬೊಮ್ಮಾಯಿ, ಜನತಾ ಪಕ್ಷ, ಆಗಸ್ಟ್ 13, 1988 - ಏಪ್ರಿಲ್ 21, 1989
13- ವೀರೇಂದ್ರ ಪಾಟೀಲ್, ಕಾಂಗ್ರೆಸ್, ನವೆಂಬರ್ 30, 1989 - ಅಕ್ಟೋಬರ್ 10, 1990
14- ಎಸ್ ಬಂಗಾರಪ್ಪ, ಕಾಂಗ್ರೆಸ್, ಅಕ್ಟೋಬರ್ 17, 1990 - ನವೆಂಬರ್ 19, 1992
15- ಎಂ.ವೀರಪ್ಪ ಮೊಯ್ಲಿ, ಕಾಂಗ್ರೆಸ್, ನವೆಂಬರ್ 19, 1992 - ಡಿಸೆಂಬರ್ 11, 1994
16- ಹೆಚ್.ಡಿ. ದೇವೇಗೌಡ, ಜನತಾ ದಳ, ಡಿಸೆಂಬರ್ 11, 1994 - ಮೇ 31, 1996
17- ಜೆ.ಎಚ್. ಪಟೇಲ್ ಜನತಾ ದಳ, ಮೇ 31, 1996 - ಅಕ್ಟೋಬರ್ 07, 1999
18- ಎಸ್.ಎಂ. ಕೃಷ್ಣ ಕಾಂಗ್ರೆಸ್, ಅಕ್ಟೋಬರ್ 11, 1999 - ಮೇ 28, 2004
19- ಧರಂ ಸಿಂಗ್, ಕಾಂಗ್ರೆಸ್, ಮೇ 28, 2004 - ಫೆಬ್ರವರಿ 2, 2006
20- ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಫೆಬ್ರವರಿ 3, 2006 - ಅಕ್ಟೋಬರ್ 8, 2007
21- ಬಿಎಸ್ ಯಡಿಯೂರಪ್ಪ, ಬಿಜೆಪಿ, ನವೆಂಬರ್ 12, 2007 - ನವೆಂಬರ್ 19, 2007,
22- ಬಿಎಸ್ ಯಡಿಯೂರಪ್ಪ, ಬಿಜೆಪಿ, ಮೇ 30, 2008 - ಆಗಸ್ಟ್ 4, 2011
23- ಡಿ ವಿ ಸದಾನಂದ ಗೌಡ, ಬಿಜೆಪಿ, 5 ಆಗಸ್ಟ್ 2011 - ಜುಲೈ 11, 2012
24- ಜಗದೀಶ ಶೆಟ್ಟರ್, ಬಿಜೆಪಿ, ಜುಲೈ 12, 2012 - 8 ಮೇ 2013
25- ಸಿದ್ದರಾಮಯ್ಯ, ಕಾಂಗ್ರೆಸ್, ಮೇ 13, 2013 - ಮೇ 15, 2018
26- ಬಿಎಸ್ ಯಡಿಯೂರಪ್ಪ, ಬಿಜೆಪಿ, ಮೇ 17, 2018 - ಮೇ 23, 2018
27- ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್, ಮೇ 23, 2018 - 23 ಜುಲೈ 2019
28- ಬಿ.ಎಸ್. ಯಡಿಯೂರಪ್ಪ, ಬಿಜೆಪಿ, 26 ಜುಲೈ 2019 - 26 ಜುಲೈ 2021
29- ಬಸವರಾಜ ಬೊಮ್ಮಾಯಿ, ಬಿಜೆಪಿ, 28 ಜುಲೈ 2021-13 ಮೇ 2023
30- ಸಿದ್ದರಾಮಯ್ಯ, ಕಾಂಗ್ರೆಸ್, 20 ಮೇ 2023












Click it and Unblock the Notifications