• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆ ಸೋತ ಖರ್ಗೆ, ಸಿದ್ದರಾಮಯ್ಯ!

|
Google Oneindia Kannada News

ಬೆಂಗಳೂರು, ನ 9: ಮೇಕೆದಾಟು ಮತ್ತು ಬಿಟ್ ಕಾಯಿನ್ ದಂಧೆಯ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ಸಮರ ಜೋರಾಗಿ ನಡೆಯುತ್ತಿದೆ. ಬಿಟ್ ಕಾಯಿನ್ ವಿಚಾರದಲ್ಲಿ ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

ಇನ್ನು, ಮೇಕೆದಾಟು ಅಣೆಕಟ್ಟು ಯೋಜನೆ ಕಾಮಗಾರಿ ತಕ್ಷಣ ಆರಂಭಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಡಿಸೆಂಬರ್ ಮೊದಲ ವಾರ ಮೇಕೆದಾಟಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕಾಂಗ್ರೆಸ್ ಪ್ರಕಟಿಸಿದ ನಂತರ ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ವಾದ/ಪ್ರತಿವಾದ ಅಂಕೆಯಿಲ್ಲದಂತೆ ಸಾಗುತ್ತಿದೆ.

22 ನಿಮಿಷದ ವಿಡಿಯೋದಲ್ಲಿ ಸ್ಫೋಟಕ ಮಾಹಿತಿ ಹೊರಹಾಕಿದ ಜಾರಕಿಹೊಳಿ22 ನಿಮಿಷದ ವಿಡಿಯೋದಲ್ಲಿ ಸ್ಫೋಟಕ ಮಾಹಿತಿ ಹೊರಹಾಕಿದ ಜಾರಕಿಹೊಳಿ

ಈ ನಡುವೆ ಬಿಜೆಪಿ ಟ್ವೀಟ್ ಒಂದು ಮಾಡಿದ್ದು, ಅದರಲ್ಲಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಚುನಾವಣೆಯಲ್ಲಿ ಸೋತರು ಎಂದು ಬಿಜೆಪಿ ಲೇವಡಿ ಮಾಡಿದೆ.

2013ರಲ್ಲಿ ವರುಣಾ ಕ್ಷೇತ್ರದಿಂದ ಚುನಾವಣೆ ಗೆದ್ದಿದ್ದ ಸಿದ್ದರಾಮಯ್ಯ, 2018ರ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಮಗ ಡಾ.ಯತೀಂದ್ರಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಯಿಂದ ಸ್ಪರ್ಧಿಸಿ ಸೋತಿದ್ದರು. ಇನ್ನು, ಮಲ್ಲಿಕಾರ್ಜುನ ಖರ್ಗೆಯವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಪರಾಭವಗೊಂಡಿದ್ದರು. ಈ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದ್ದು ಹೀಗೆ:

 ಕುಗ್ಗುತ್ತಿದ್ದ ಜನಪ್ರಿಯತೆಯನ್ನು ಮತ್ತೆ ಬಾಚಿಕೊಂಡ ಪ್ರಧಾನಿ ಮೋದಿ: ವಿಶ್ವದಲ್ಲೇ ನಂಬರ್ 1 ಕುಗ್ಗುತ್ತಿದ್ದ ಜನಪ್ರಿಯತೆಯನ್ನು ಮತ್ತೆ ಬಾಚಿಕೊಂಡ ಪ್ರಧಾನಿ ಮೋದಿ: ವಿಶ್ವದಲ್ಲೇ ನಂಬರ್ 1

ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆ ಸೋತ ಖರ್ಗೆ, ಸಿದ್ದರಾಮಯ್ಯ

"ಮಗನನ್ನು ಮಂತ್ರಿ ಮಾಡಿದ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆ ಚುನಾವಣೆಯಲ್ಲಿ ಸೋತರು. ಮಗನನ್ನು ಶಾಸಕನಾಗಿಸುವ ಉಮೇದಿನಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು. ಡಿಕೆಶಿ ಅವರೇ, ನಿಮಗೆ ಮಗಳನ್ನು ರಾಜಕೀಯಕ್ಕೆ ಕರೆ ತರುವ ಕನಸಿದೆಯೇ ? ಇದ್ದರೆ #ಜನಾಕ್ರೋಶ ಎದುರಿಸಲು ಸಿದ್ಧರಾಗಿ. #ಜನವಿರೋಧಿಕಾಂಗ್ರೆಸ್‌" ಇದು ಬಿಜೆಪಿ ಮಾಡಿರುವ ಟ್ವೀಟ್.

 ಕಾಂಗ್ರೆಸ್ಸಿಗರೇ‌, ನೀವು ಮಾಡಿದ ಐತಿಹಾಸಿಕ ಅನ್ಯಾಯ ಮರೆಯಲು ಸಾಧ್ಯವೇ?

ಕಾಂಗ್ರೆಸ್ಸಿಗರೇ‌, ನೀವು ಮಾಡಿದ ಐತಿಹಾಸಿಕ ಅನ್ಯಾಯ ಮರೆಯಲು ಸಾಧ್ಯವೇ?

"ಕಾಂಗ್ರೆಸ್ಸಿಗರೇ‌, ನೀವು ಭಾರತೀಯರಿಗೆ ಮಾಡಿದ ಐತಿಹಾಸಿಕ ಅನ್ಯಾಯವನ್ನು ಮರೆಯಲು ಸಾಧ್ಯವೇ? ಈ ಕಾರಣಕ್ಕಾಗಿ ಜನರೇ ನಿಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆ. #ಜನಾಕ್ರೋಶ'ದ ಬಿಸಿಯಲ್ಲಿ
@INCIndia ಪಕ್ಷ ಅಧಿಕಾರ ಕಳೆದುಕೊಂಡು ಬೀದಿಗೆ ಬಂದಿರುವುದು ನಿಜವಲ್ಲವೇ? ರಾಜ್ಯಾದ್ಯಂತ ಜನಾಕ್ರೋಶ ಸಭೆ ನಡೆಸುವುದಕ್ಕೆ @INCKarnataka ಪಕ್ಷ ನಿರ್ಧರಿಸಿದೆ. ಕಾಂಗ್ರೆಸ್ಸಿಗರೇ ಯಾರ ವಿರುದ್ಧ ಈ ಜನಾಕ್ರೋಶ? 60 ವರ್ಷಗಳ ಕಾಲ ದೇಶ ಆಳಿದ ನಂತರವೂ ಅಸಮಾನತೆ, ಬಡತನವನ್ನು ಜೀವಂತವಿಟ್ಟ ಕಾರಣಕ್ಕಾಗಿ ಜನಾಕ್ರೋಶ ಸಭೆ ನಡೆಸುತ್ತೀರಾ?" ಎಂದು ಬಿಜೆಪಿ ಇನ್ನೊಂದು ಟ್ವೀಟ್ ಮಾಡಿದೆ.

 ಮೇಕೆದಾಟು ಯೋಜನೆ ಆರಂಭಿಸಲು ಕಾನೂನಿನ ಯಾವುದೇ ಅಡೆತಡೆ ಇಲ್ಲ

ಮೇಕೆದಾಟು ಯೋಜನೆ ಆರಂಭಿಸಲು ಕಾನೂನಿನ ಯಾವುದೇ ಅಡೆತಡೆ ಇಲ್ಲ

"ಕೇಂದ್ರ - ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರಕಾರಗಳು ಮೇಕೆದಾಟು ಯೋಜನೆ ಆರಂಭಿಸಲು ಕಾನೂನಿನ ಯಾವುದೇ ಅಡೆತಡೆ ಇಲ್ಲ. ಆದರೂ ಈ ಎರಡೂ ಸರಕಾರಗಳು ಬದ್ಧತೆ ಪ್ರದರ್ಶಿಸುತ್ತಿಲ್ಲ. ಇದರಿಂದ ನ್ಯಾಯಾಧೀಕರಣ ಮತ್ತು ಪ್ರಾಧಿಕಾರದ ಆದೇಶದ ಅನ್ವಯ ಕರ್ನಾಟಕದ ಪಾಲಿಗೆ ಸಿಗಬೇಕಾದ ಕಾವೇರಿ ನೀರು ಸಮುದ್ರದ ಪಾಲಾಗಿ, ಪೋಲಾಗುತ್ತಿದೆ. ಮೇಕೆದಾಟು ಅಣೆಕಟ್ಟು ನಮ್ಮ ಹಣ, ಭೂಮಿ, ನೀರನ್ನು ಬಳಸಿಕೊಳ್ಳುವ ಯೋಜನೆ. ಬೇರೆ ಯಾರದೇ ಅನುಮತಿ ಅಗತ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ. ಮುಖ್ಯಮಂತ್ರಿಗಳು ಕೂಡ ಯಾರ ಅನುಮತಿ ಬೇಕಾಗಿಲ್ಲ, ಕಾಮಗಾರಿ ಆರಂಭಿಸುತ್ತೇವೆ ಎಂದಿದ್ದಾರೆ. ಆದರೆ ಯೋಜನೆ ಆರಂಭಿಸುವ ಇಚ್ಛಾಶಕ್ತಿ ಮಾತ್ರ ಅವರಲ್ಲಿ ಕಾಣುತ್ತಿಲ್ಲ"ಎಂದು ಮೇಕೆದಾಟು ವಿಚಾರದಲ್ಲಿ ಬಿಜೆಪಿ ಸರಕಾರದ ವಿರುದ್ದ ಕಿಡಿಕಾರಿದೆ.

ಹೋಟೆಲ್‌ಗಳ ನಂತರ ದರ ಹೆಚ್ಚಳದ ಸರದಿ ಆಟೋಗಳದ್ದು

ಇನ್ನು ಬೆಲೆ ಏರಿಕೆ ವಿಚಾರದಲ್ಲಿ ಬಿಜೆಪಿಯ ವಿರುದ್ದ ಟ್ವೀಟ್ ಮಾಡಿರುವ ಕಾಂಗ್ರೆಸ್ ಐಟಿ ಘಟಕ, "ಹೋಟೆಲ್‌ಗಳ ನಂತರ ದರ ಹೆಚ್ಚಳದ ಸರದಿ ಆಟೋಗಳದ್ದು. ಈಗಾಗಲೇ ಗ್ಯಾಸ್ ಬೆಲೆ ಹೆಚ್ಚಳದಿಂದ ಕಂಗೆಟ್ಟಿದ್ದ ಆಟೋ ಚಾಲಕರಿಗೆ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ, ಜೊತೆಗೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯನ್ನೂ ಎದುರಿಸುತ್ತಿದ್ದಾರೆ. ಬೇಜವಾಬ್ದಾರಿ ಸರ್ಕಾರವೊಂದು ಹೇಗೆ ಇಡೀ ವ್ಯವಸ್ಥೆಯನ್ನ ಹಾಳುಗೆಡವಬಹುದು ಎನ್ನಲು ಬಿಜೆಪಿಯೇ ಉದಾಹರಣೆ" ಎಂದು ಆಕ್ರೋಶ ವ್ಯಕ್ತ ಪಡಿಸಿದೆ.

English summary
Congress Leaders Siddaramaiah and Mallikarjun Kharge lose in election for their Children Political Future; BJP teased. Siddaramaiah lose in chamundeshwari constituency, mallikarjuna khrage lose loka sabha election in kalaburagi constituency. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X