Get Updates
Get notified of breaking news, exclusive insights, and must-see stories!

ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಜ್ಜು: ಏನಿದು ಸಿದ್ದು ಲೆಕ್ಕಾಚಾರ?

ಬೆಂಗಳೂರು, ಮಾರ್ಚ್25:‌ ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ಅಭ್ಯರ್ಥಿಗಳ ಆಯ್ಕೆಯೇ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ಸಿದ್ದರಾಮಯ್ಯ ಹೈಕಮಾಂಡ್‌ ನಾಯಕರ ಸೂಚನೆ ಬೆನ್ನಲ್ಲೇ ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ದು,ಕೋಲಾರ ಕಾರ್ಯಕರ್ತರು ಈ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ.

ಹೌದು, ಸಿದ್ದರಾಮಯ್ಯ ಕೋಲಾರದಿಂದ ಹಿಂದೆ ಸರಿದ ಕುರಿತು ಸಾಕಷ್ಟು ವಿರೋಧಗಳು ಕೇಳಿ ಬಂದಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದೇ ಸಿದ್ದರಾಮಯ್ಯ ಅವರಿಗೆ ಗೊಂದಲಕ್ಕೆ ಕಾರಣವಾಗಿತ್ತು. ಇನ್ನೂ ಹೈಕಮಾಂಡ್‌ ಯಾವ ಕ್ಷೇತ್ರದಿಂದ ಟಿಕೆಟ್‌ ನೀಡುತ್ತೋ ಆ ಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ರು. ಆದರೆ, ಇದೀಗ ವರುಣಾ ದಿಂದ ಸ್ಪರ್ಧಿಸುವ ಇಗಿತವನ್ನ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.

Siddaramaiah Is Preparing To Contest In Both Kolar And Varuna

ಇನ್ನೂ ಕೋಲಾರ ಹಾಗೂ ವರುಣಾ ಎರಡು ಕ್ಷೇತ್ರದಲ್ಲೂ ಸ್ಪರ್ಧಿಸುವ ಬಯಕೆಯನ್ನು ಹೈಕಮಾಂಡ್‌ ಒಪ್ಪುವ ಸಾಧ್ಯತೆಗಳು ಹೆಚ್ಚಿದ್ದು, ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರು ಈ ಎರಡೂ ಕ್ಷೇತ್ರಗಳಿಗೆ ಪ್ರಕಟವಾಗಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ರಿಸ್ಕ್‌ ಇರುವ ಕ್ಷೇತ್ರ ಬೇಡ, ಸುರಕ್ಷಿತವಾದ ಕ್ಷೇತ್ರವನ್ನ ನೋಡಿ ಸ್ಪರ್ಧಿಸಿ ಎಂದು ರಾಹುಲ್‌ ಗಾಂಧಿ ಸಲಹೆಯನ್ನ ನೀಡಿದು, ಈ ವಿಚಾರ ಸಿದ್ದರಾಮಯ್ಯ ಅವರಲ್ಲಿ ಸಾಕಷ್ಟು ಗೊಂದಲವನ್ನ ಉಂಟು ಮಾಡಿತ್ತು. ಆದರೇ, ಕೊನೆ ಕಣದಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದರೇ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕಾರಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತಮ್ಮ ಆಕಾಂಕ್ಷೆಯ ಬಗ್ಗೆ ಹೈಕಮಾಂಡ್‌ಗೆ ಸಿದ್ದರಾಮಯ್ಯ ಅವರು ಗುರುವಾರ ಸಂದೇಶ ರವಾನಿಸಿದ್ದರು ಎಂದು ಹೇಳಲಾಗುತ್ತಿದೆ.

ವರುಣಾ ಹಾಗೂ ಕೋಲಾರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದಾಗ ಒಂದು ವೇಳೆ ಎರಡು ಕ್ಷೇತ್ರಗಳಲ್ಲೂ ಗೆದ್ದರೆ ಆಗ ವರುಣಾ ಕ್ಷೇತ್ರವನ್ನು ಮತ್ತೆ ಡಾ.ಯತೀಂದ್ರಗೆ ಬಿಟ್ಟುಕೊಡುವ ಚಿಂತನೆಯನ್ನ ಸಿದ್ದರಾಮಯ್ಯ ನಡೆಸಿದ್ದಾರೆ ಎನ್ನಲಾಗಿದೆ. ಇತ್ತ ಕೋಲಾರದಲ್ಲಿ ಸ್ಪರ್ಧೆ ಮಾಡದೇ ಇದ್ದಲ್ಲಿ ಸಾಕಷ್ಟು ವಿರೋಧಗಳು ಕೇಳಿ ಬರುತ್ತವೆ ಅದೇ ಅಲ್ಲದೇ ಅಲ್ಲಿ ಬೇಋಎ ಅಭ್ಯರ್ಥಿಯನ್ನ ಹಾಕುವುದು ಕಷ್ಟಕರವಾಗುತ್ತದೆ ಎಂದು ಎರಡು ಕ್ಷೇತ್ರದಲ್ಲಿ ಸ್ಪರ್ಧೆಗೆ ರೆಡಿಯಾಗಿದ್ದಾರೆ ಎನ್ನಲಾಗಿದೆ.

Siddaramaiah Is Preparing To Contest In Both Kolar And Varuna

ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?

ನಮ್ಮ ಮನೆಯಲ್ಲಿ ವರುಣಾದಿಂದ ಸ್ಪರ್ದಿಸುವಂತೆ ಹೇಳಿದ್ದಾರೆ. ವರುಣಾ ಕ್ಷೇತ್ರದಲ್ಲೇ ಟಿಕೆಟ್ ನೀಡುವಂತೆ ಹೇಳಿದ್ದೇನೆ, ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆಯೂ ನಮ್ಮ ಮನೆಯಲ್ಲಿ ಹೇಳ್ತಿದ್ದಾರೆ. ನನಗೆ 25 ಕ್ಷೇತ್ರಗಳಲ್ಲಿ ನನಗೆ ಸ್ಪರ್ಧಿಸುವಂತೆ ಆಹ್ವಾನವಿದೆ. ಎಲ್ಲಾ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದೇನೆಂದ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಡಾ.ಯತೀಂದ್ರ ಅವರು ಮಾತನಾಡಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ ಮತ್ತು ವರುಣ ಎರಡೂ ಕ್ಷೇತ್ರದಲ್ಲೂ ಸ್ಪರ್ಧಿಸುವ ಇಂಗಿತ ಹೊಂದಿದ್ದಾರೆ ಎಂದು ಹೇಳಿದರು. ಹೈಕಮಾಂಡ್‌ ಕೋಲಾರ ಬೇಡ ವರುಣಾದಲ್ಲಿ ಸ್ಪರ್ಧಿಸಿ ಅಂತ ಹೇಳಿತ್ತು. ಈ ಸಮಯದಲ್ಲಿ ಕೋಲಾರ ಕ್ಷೇತ್ರದಿಂದ ಹಿಂದೆ ಸರಿದರೆ ಕಾಂಗ್ರೆಸ್‌ಗೆ ಹಿನ್ನಡೆ ಆಗುತ್ತೆ ಎಂದು ಅಲ್ಲಿನ ನಾಯಕರು ಹೇಳಿದ್ದಾರೆ.

ಹೀಗಾಗಿ ಸಿದ್ದರಾಮಯ್ಯ ಅವರು ಕೋಲಾರವನ್ನು ಬಿಡುವಂತಿಲ್ಲ. ಹೈಕಮಾಂಡ್‌ ಸೂಚನೆಯಂತೆ ವರುಣವನ್ನೂ ಬಿಡಲು ಆಗಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರು ಕೋಲಾರ ಮತ್ತು ವರುಣ ಎರಡು ಕ್ಷೇತ್ರದಲ್ಲೂ ಸ್ಪರ್ಧಿಸುವ ಇಂಗಿತದಲ್ಲಿದ್ದಾರೆ ಎಂದು ಹೇಳಿದರು.

ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ನಾನು ಸಲಹೆ ಕೊಟ್ಟಿದೆ. ಕೋಲಾರದ ನಾಯಕರ ಒತ್ತಾಯದ ಮೇರೆಗೆ ಕೋಲಾರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ರು, ಇದೀಗ ಹೈಕಮಾಂಡ್ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಕೋಲಾರ ಕ್ಷೇತ್ರ ಬಿಟ್ಟರೆ ಈಗ ಕ್ಯಾಡಿಂಡೇಟ್ ಹಾಕುವುದು ಕಷ್ಟವಾಗುತ್ತದೆ. ಹೀಗಾಗಿ ಕೋಲಾರದಿಂದ ತಂದೆ ಸ್ಪರ್ಧೆ ಮಾಡುತ್ತಾರೆ.

ಕೋಲಾರ ಮತ್ತು ವರುಣ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ. ಪ್ರತಿ ಪಕ್ಷಗಳು ಸೇರಿ ಸಿದ್ದರಾಮಯ್ಯ ಅವರನ್ನ ಸೋಲಿಸಲು ಯತ್ನಿಸುತ್ತಿವೆ, ಅವರ ಒನ್ ಪಾಯಿಂಟ್ ಅಜೆಂಡಾ ಸಿದ್ದರಾಮಯ್ಯ ಅವರನ್ನ ಸೋಲಿಸುವುದು. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಲ್ಲರೂ ಒಟ್ಟಾಗಿ ಷಡ್ಯಂತ್ರ ರೂಪಿಸಿದ್ರು. ಹಣದಹೊಳೆ ಹರಿಸಿ ಸಿದ್ದರಾಮಯ್ಯ ಸೋಲಿಸಲು ಯತ್ನಿಸಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಅಮಿತ್ ಶಾ ವರುಣಾ ಕ್ಷೇತ್ರದ ಕುರಿತು ಚರ್ಚೆ ವಿಚಾರವಾಗಿ ಮಾತನಾಡಿ, ಅವರ ಒನ್ ಪಾಯಿಂಟ್ ಅಜೆಂಡಾ ತಂದೆ ಅವರನ್ನ ಸೋಲಿಸುವುದು. ಕುಮಾರಸ್ವಾಮಿ ಅವರಿಗೆ ನೈತಿಕತೆ ಇದಿದ್ದರೆ ಸಿದ್ದರಾಮಯ್ಯ ಸೋಲಿಸಲು ಯತ್ನಿಸುತ್ತಿರಲಿಲ್ಲ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನ ಸೋಲಿಸಿದರು.

ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಿ ತಂದೆ ಪರವಾಗಿ ಮತ ಕೇಳುತ್ತೇವೆ, ವರುಣ ಕ್ಷೇತ್ರದ ಜನರು ನಮ್ಮ ತಂದೆಯ ಪರವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+