ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಕೈಯಲ್ಲಿ ಲಿಂಬೆಹಣ್ಣು, ಕಿಚಾಯಿಸಿದ ಪ್ರತಾಪ್ ಸಿಂಹ

|
Google Oneindia Kannada News

Recommended Video

ಸಿದ್ದು ಪ್ರಚಾರದ ವೇಳೆ ಕೈಯಲ್ಲಿ ನಿಂಬೆಹಣ್ಣು ಹಿಡಿದ್ದದಕ್ಕೆ ಕಿಚಾಯಿಸಿದ ಪ್ರತಾಪ್ ಸಿಂಹ | Oneindia Kannada

ಮೈಸೂರು, ಏ 5: ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಏ 4) ಚುನಾವಣಾ ಪ್ರಚಾರಕ್ಕಾಗಿ ಹಳ್ಳಿಗಳಿಗೆ ಭೇಟಿ ನೀಡಿದ್ದಾಗ ಅವರ ಕೈಯಲ್ಲಿ ಲಿಂಬೆಹಣ್ಣು ಇದ್ದದ್ದು ದೊಡ್ಡ ಸುದ್ದಿಯಾಗಿತ್ತು. ಬಿಜೆಪಿಯೂ ಈ ವಿಚಾರದಲ್ಲೂ ಅಣಕವಾಡಿತ್ತು, ಈಗ ಮೈಸೂರು ಸಂಸದ ಪ್ರತಾಪ್ ಸಿಂಹ್ ಅವರ ಸರದಿ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಮೌಢ್ಯವಿರೋಧಿ ಕಾನೂನಿನ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಕೈಯಲ್ಲಿ ಲಿಂಬೆಹಣ್ಣು ಹಿಡಿದೇ ಪ್ರಚಾರ ಯಾಕಯ್ಯ? ಎಂದು ಒಕ್ಕಣೆಯಿರುವ ಟ್ವೀಟ್ ಅನ್ನು ಪ್ರತಾಪ್ ಮಾಡಿದ್ದಾರೆ.

ಸಿಖ್ಖರ ಹತ್ಯೆ ಮಾಡಿ ಸಮರ್ಥಿಸಿಕೊಂಡ ದರಿದ್ರ ಪಕ್ಷ ಕಾಂಗ್ರೆಸ್: ಪ್ರತಾಪ್ ಸಿಂಹಸಿಖ್ಖರ ಹತ್ಯೆ ಮಾಡಿ ಸಮರ್ಥಿಸಿಕೊಂಡ ದರಿದ್ರ ಪಕ್ಷ ಕಾಂಗ್ರೆಸ್: ಪ್ರತಾಪ್ ಸಿಂಹ

ಜೊತೆಗೆ, ಒಬ್ಬ ಹಿಂದೂ ವಿರೋಧಿಯ ಬಾಯಲ್ಲಿ ನನ್ನ ಹೆಸರಲ್ಲೂ "ರಾಮ"ನಿದ್ದಾನೆ ಎಂದು ಹೇಳಿಸಿದ, ಸೋಲಿನ ಭೀತಿ ಹುಟ್ಟಿಸಿ ಕೈಯಲ್ಲಿ ನಿಂಬೆ ಹಣ್ಣು ಹಿಡಿಸಿದ ಕರ್ನಾಟಕದ ಸಮಸ್ತ ಹಿಂದೂಗಳಿಗೂ ಧನ್ಯವಾದಗಳು! ಎಂದೂ ಪ್ರತಾಪ್, ಮುಖ್ಯಮಂತ್ರಿಗಳನ್ನು ಅಣಕವಾಡಿದ್ದಾರೆ.

siddaramaiah-holds-lemon-during-election-campaign-prataSiddaramaiah holds lemon during election campaign, MP Pratap Simha tweet reaction p-simha-tweet-reaction

"ಕೈ"ನಲ್ಲಿ ನಿಂಬೆಹಣ್ಣು ಬಿಟ್ಟು ಗಜನಿಂಬೆಹಣ್ಣು ಹಿಡಿದುಕೊಂಡರು ನಾಡಿನ ಜನ ಸಿದ್ದಣ್ಣನ "ಕೈ" ಗೆ ಜಿಲೇಬಿ ಮಿಷನ್(ಚಿಪ್ಪು) ಕೊಡುವುದು ಗ್ಯಾರಂಟಿ..! #ನಿಂಬೆಹಣ್ಣು ಹಿಡಕೊಂಡಿರೋ #ಕೈಯಲ್ಲಿ #ಚೊಂಬು ಬರೋಕೆ ಇನ್ನು #ನಲವತ್ತು ದಿನಗಳು ಮಾತ್ರ ಉಳಿದಿರೋದು..

ಸಿದ್ದಣ್ಣ ನೀವು ಕೊಳ್ಳೆಗಾಲಕ್ಕೇ ಹೋಗಿ ನಿಂಬೆಹಣ್ಣಲ್ಲ ಕುಂಬಳಕಾಯಿ ಮಂತ್ರಿಸಿಕೊಂಡು ಬಂದ್ರು ಈ ಸಲ ಕಪ್ ನಮ್ದೇ.. ವೋಟ್ ಗಾಗಿ ರಾಮನ ಜಪ ಮಾಡೋರು ಬಿಜೆಪಿ.ಸುಳ್ಳಿಗೆ ಒಂದು ಮಿತಿ ಬೇಡ್ವಾ?..ಹೀಗೆ ಹಲವು ಕಾಮೆಂಟುಗಳು, ಪ್ರತಾಪ್ ಸಿಂಹ ಅವರ ಟ್ವೀಟಿಗೆ ಬಂದಿದೆ.

ಹಳ್ಳಿಗಳಿಗೆ ಭೇಟಿ ನೀಡುವಾಗ ಜನರು ಲಿಂಬೆಹಣ್ಣನ್ನು ನೀಡಿ ಸ್ವಾಗತಿಸುತ್ತಾರೆ. ಅದು ಮೂಢನಂಬಿಕೆಯಲ್ಲ ಎನ್ನುವುದು ಎಲ್ಲಾ ಕನ್ನಡಿಗರಿಗೆ ಗೊತ್ತಿದೆ. ಟ್ವೀಟ್ ಮಾಡುವ ಮೊದಲು ಕರ್ನಾಟಕದ ಬಗ್ಗೆ ತಿಳಿದುಕೊಳ್ಳಿ ಎಂದು ಸಿದ್ದರಾಮಯ್ಯ, ಬಿಜೆಪಿ ಟ್ವೀಟಿಗೆ ತಿರುಗೇಟು ನೀಡಿದ್ದಾರೆ.

English summary
Chief Minister Siddaramaiah holds lemon during election campaign, Mysuru MP Pratap Simha tweet reaction. Pratap tweeted, because of fear of defeat in the upcoming election CM holds the lemon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X