ಸಿದ್ದರಾಮಯ್ಯ ಎಲ್ಲ ಕಡೆ ದ್ರೋಹ ಬಗೆಯುತ್ತಲೇ ಬಂದಿದ್ದಾರೆ: ಶ್ರೀರಾಮುಲು

ಬಾಗಲಕೋಟೆ, ನವೆಂಬರ್ 15: ಸಿದ್ದರಾಮಯ್ಯನವರು ಎಲ್ಲ ಕಡೆಗೆ ದ್ರೋಹ ಮಾಡುತ್ತಾ ಬಂದಿದ್ದಾರೆ. ಬಾದಾಮಿಯಲ್ಲಿ ರಾಜಕೀಯ ಪುನರ್‌ ಜೀವನ ನೀಡಿದ ಚಿಮ್ಮನಕಟ್ಟಿ ಅವರಿಗೆ ಹಾಗೂ ಎಸ್.ಆರ್.ಪಾಟೀಲ್‌ ಅವರನ್ನು ಮುಗಿಸಿದ್ದಾರೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮಲು ಟೀಕಿಸಿದ್ದಾರೆ.

ಬಾಗಲಕೋಟೆಯ ನವನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಳ್ಳಾರಿಯಲ್ಲಿ ನಡೆಯುವ ಎಸ್.ಟಿ ಯುವ ಮೋರ್ಚಾ ರಾಜ್ಯ ಮಟ್ಟದ ಸಮಾವೇಶ ಹಿನ್ನೆಲೆ, ಆಯೋಜನೆ ಮಾಡಿದ್ದ ಕಾರ್ಯಕರ್ತರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಾದಾಮಿಯಲ್ಲಿ ಗಂಟೆಗಟ್ಟಲೆ ಕೆಲಸ ಮಾಡಿ ಮುಖಂಡರು ಸಿದ್ದರಾಮಯ್ಯನವರಿಗೆ ಗೆಲ್ಲಿಸಿಕೊಟ್ಟರು,ಈಗ ಚಿಮ್ಮನಕಟ್ಟಿ, ಎಸ್.ಆರ್.ಪಾಟೀಲ್‌ ಈ ಬಾರಿ ಬರೋಬ್ಬರಿ ಮಾಡುತ್ತಾರೆ. ಅದಕ್ಕಾಗಿಯೇ ಈ ಸಲ ಕೋಲಾರಕ್ಕೆ ಹೋಗ್ತಿದ್ದಾರೆ ಎಂದರು.

ಕೋಲಾರದಲ್ಲೂ ಅವರು ನಿಲ್ಲೋದಿಲ್ಲ

ಕೋಲಾರದಲ್ಲೂ ಅವರು ನಿಲ್ಲೋದಿಲ್ಲ. ಮತ್ತೇ ವರುಣಾಗೆ ಓಡಿ ಹೋಗ್ತಾರೆ. ಅಲ್ಲಿ ವರುಣಾದಲ್ಲೂ ನಾವು ಗಟ್ಟಿಯಾಗಿದ್ದೇವೆ. ಅಲ್ಲಿ ಯಾರಿದ್ದಾರೆ ಅಂತ ಗೊತ್ತಲ್ಲ ಎಂದು ಹೇಳಿದ ಶ್ರೀರಾಮಲು, ಈ ಬಗ್ಗೆ ಮುಂದಿನ ದಿನಗಳಲ್ಲಿ ನಮ್ಮ ರಾಜಾಹುಲಿ ಯಡಿಯೂರಪ್ಪನವರು ತೀರ್ಮಾನ ತೆಗೆದುಕೊಳ್ತಾರೆ ಎಂದರು.

ವರುಣಾದಲ್ಲಿ ಯಾರು ನಿಲ್ಲಬೇಕೆಂದು ಬಿಎಸ್‌ವೈ ನಿರ್ಧಾರ ಮಾಡುತ್ತಾರೆ. ನಾನೆಂದೂ ತಿಂದುಂಡ ಮನೆ ಜಂತಿ ಎನಿಸುವ ಕೆಲಸ ಮಾಡಿಲ್ಲ.ಸಿದ್ದರಾಮಯ್ಯನವರು,ಎಲ್ಲಾ ಕಡೆಗೆ ದ್ರೋಹ ಮಾಡುತ್ತಲೇ ಬಂದಿದ್ದಾರೆ.ಪಾಪ, ದೊಡ್ಡ ಮನುಷ್ಯ ದೇವೇಗೌಡರ ಹೆಸರು ಹೇಳಿಕೊಂಡು ಬಂದು ಬಂದು ಬೆನ್ನಿಗೆ ಚೂರಿ ಹಾಕಿದರು. ಮಾಜಿ ಡಿಸಿಎಂ ಪರಮೇಶ್ವರ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಎಲ್ಲರನ್ನ ಮುಗಿಸುತ್ತಲೇ ಬಂದರು. ಇದನ್ನು ನೋಡಿದ್ರೆ ದೊಡ್ಡ ಪಟ್ಟಿಯೇ ಆಗುತ್ತೇ ಎಂದು ವ್ಯಂಗ್ಯವಾಡಿದರು.

Siddaramaiah has been betraying everywhere Says Sriramulu

ನಮ್ಮ ಬಾದಾಮಿ ಮಂದಿಗೆ ಏನು ಗೊತ್ತಿಲ್ಲ. ಪಾಪ, ಬಿಟ್ಟು ಕೊಟ್ಟರು,ಇಂದು ಚಿಮ್ಮನಕಟ್ಟಿ ಸಹ ನಮ್ಮನ್ನ ನೆನಪಿಸ್ತಾರೆ, ಸುಮ್ಮನೆ ರಾಮುಲು ಇದ್ದರೆ ಒಳ್ಳೆಯದಿತ್ತು ಅಂತಾರೆ. ನಾವು ಸುಮ್ಮನೆ ಮುಳ್ಳು ಮಾಡಿಕೊಂಡು ಕುಳಿತಿದ್ದೀವಿ ಎಂದು ತಿಳಿಸಿದ್ದಾರೆ ಎಂದು ಶ್ರೀರಾಮಲು ಭಾಷಣದ ಉದ್ದಕ್ಕೂ ಸಿದ್ದರಾಮಯ್ಯನವರು ವಿರುದ್ದ ವಾಗ್ದಾಳಿ ನಡೆಸಿದರು.

ಮೊಳಕಾಲ್ಮೂರು ಕ್ಷೇತ್ರದಿಂದ ಮತ್ತೆ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಸಧ್ಯಕ್ಕೆ ಇವಾಗ ಇರುವಂತಹ ತೀರ್ಮಾನ. ನಾನು ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತಿದ್ದಿನಿ. ಎಲ್ಲಿ ನಿಲ್ಲಬೇಕು ಅಂತ ಪಾರ್ಟಿ ಏನೂ ತೀರ್ಮಾನ ತಗೊಂಡಿಲ್ಲ. ಪಾರ್ಟಿ ಏನೂ ಸೂಚನೆ ಕೊಡುತ್ತೊ ಅದರ ಪ್ರಕಾರ ಕೆಲಸ ಮಾಡ್ಕೊಂಡ ಹೋಗ್ತಿನಿ. ಪಾರ್ಟಿ ಸೂಚನೆ ಕೊಟ್ಟ ತಕ್ಷಣ ಅದನ್ನ ತಿಳಿಸುತ್ತೇನೆ‌ ಎಂದ ಅವರು, ಸದ್ಯಕ್ಕಂತೂ ನಾನು ಮೊಳಕಾಲ್ಮೂರು ಶಾಸಕ ಇದ್ದೇನೆ. ನನಗೆ ಇಚ್ಚೆ ಅಲ್ಲೆ ಇರಬೇಕು ಅಂತಿದೆ. ಮುಂದೆ ಪಾರ್ಟಿ ಏನೂ ತೀರ್ಮಾನ ಕೈಗೊಳ್ಳುತ್ತೋ ಹಾಗೆ ಕೆಲಸ ಮಾಡುತ್ತೇನೆ ಎಂದರು.

ಎಸ್ಟಿ ಸರ್ಟಿಫಿಕೇಟ್ ಗೊಂದಲ ವಿಚಾರವಾಗಿ ಮಾತನಾಡಿ, ನಾನು ಸಂಭಂಧಿಸಿದ ಅಧಿಕಾರಿಗಳ ಜೊತೆ ಮಾತಾಡುತ್ತೇನೆ.ಸಿಎಂ ಗಮನಕ್ಕೂ ತರುತ್ತೇನೆ. ಯಾಕಂದ್ರೆ ಸ್ವಲ್ಪ ಗೊಂದಲ ಇದೆ. 90% ಕೆಲಸ ಮೀಸಲಾತಿ ಮಾಡಿ ಕೊಟ್ಟಿದ್ದಾರೆ. 10% ಕೆಲಸ ಮಾತ್ರ ಗೊಂದಲ ಇದೆ,ಅದನ್ನೂ ಸರಿಪಡಿಸುತ್ತೇನೆ. ಯಾವುದೇ ಪ್ರಶ್ನೆ ಇಲ್ಲ, ಅದೂ ಕೂಡ ಸರಿ ಮಾಡಿ ಕೊಡುತ್ತೇನೆ ಎಂದರು.

ಜನಾರ್ಧನ ರೆಡ್ಡಿ ಕಾಂಗ್ರೆಸ್‌ಗೆ ಹೋಗ್ತಾರೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮಲು, ನನಗೆ ಯಾವುದೇ ಮಾಹಿತಿ ಇಲ್ಲ. ಯಾಕಂದ್ರೆ ಬಹಳ ಸಲ ಭೇಟಿ ಆದಾಗ,ಅವರು ಕೆಲವು ಆಂತರಿಕ ವಿಚಾರಗಳನ್ನ ಹೇಳಿದ್ದಾರೆ. ಆ ವಿಚಾರಗಳನ್ನ ನಮ್ಮ ನಾಯಕರಾದ ಸಿಎಂ ಬೊಮ್ಮಾಯಿ ಅವರಿಗೂ, ರಾಷ್ಟ್ರೀಯ ನಾಯಕರ ಗಮನಕ್ಕು ತಂದಿದ್ದಿನಿ ಎಂದರು. ನಮ್ಮವರೇ ನಮಗೆ ಮೋಸ ಮಾಡಿದ್ದಾರೆ ಎಂಬ ಜನಾರ್ಧನ ರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅದರ ಬಗ್ಗೇನೆ ನನ್ನತ್ರ ಮಾತಾಡಿದ್ದಾರೆ‌. ನನ್ನ ಆಂತರಿಕ ಕೆಲವು ವಿಚಾರಗಳನ್ನ ಮಾತಾಡಿದ್ದಿನಿ. ಅವರು ನೋವಾಗಿದೆ ಅನ್ನುವ ಸಮಯದಲ್ಲಿ ,ಆ ಎಲ್ಲಾ ವಿಚಾರಗಳನ್ನ ,ನಮ್ಮ ರಾಷ್ಟ್ರೀಯ ನಾಯಕರಿಗೆ ಮುಟ್ಟಿಸುವ ಕೆಲಸ ಮಾಡಿದ್ದೀನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+