ಸರ್ಕಾರ ರೈತರನ್ನು ಬೀದಿಗೆ ತಂದು ನಿಲ್ಲಿಸಲು ಮಾಡುತ್ತಿರುವ ಪ್ರಯತ್ನಗಳ ಪಟ್ಟಿ
ಬೆಂಗಳೂರು, ಡಿಸೆಂಬರ್ 09: ರಾಜ್ಯದಲ್ಲಿ ಅನ್ನದಾತ ಕಂಗಾಲಾಗಿದ್ದಾನೆ ಸಂಕಷ್ಟ ಆಲಿಸಬೇಕಾದ ಸರ್ಕಾರವೇ ರೈತನ ಬೆನ್ನುಮೂಳೆ ಮುರಿಯುತ್ತಿದೆ ಲಜ್ಜೆ ಬಿಟ್ಟ. ರಾಜ್ಯದಲ್ಲಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ರೈತರನ್ನು ಬೀದಿಗೆ ತಂದು ನಿಲ್ಲಿಸಲು ಮಾಡುತ್ತಿರುವ ಪ್ರಯತ್ನಗಳ ಪಟ್ಟಿಯನ್ನ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ.
ರೈತರನ್ನು ಬೀದಿಗೆ ತಂದು ನಿಲ್ಲಿಸಲು ಮಾಡುತ್ತಿರುವ ಪ್ರಯತ್ನಗಳ ಪಟ್ಟಿ:
▪️ಬರ ಪರಿಹಾರ ಕೊಡದೆ ಇರುವುದು.
▪️ಐಪಿ ಸೆಟ್ ಹೊರೆಯನ್ನು ಹಾಕುವುದು.
▪️ಪಿಎಂ ಕಿಸಾನ್ ಯೋಜನೆ ನಿಲ್ಲಿಸುವುದು.
▪️ಪಂಪ್‌ಸೆಟ್‌ಗಳಿಗೆ ವಿದ್ಯುತ್ ತೆಗೆಯುವುದು.
▪️ಬೆಳೆ ಬೆಳೆಯ ಬೇಡಿ ಎಂದು ನಿರ್ಬಂಧ ಹೇರುವುದು.
▪️ಪ್ರತಿಭಟನೆಗೆ ಇಳಿದಾಗ ದಬ್ಬಾಳಿಕೆ ನಡೆಸುವುದು.

ರಾಜ್ಯದ ಕಾಂಗ್ರೆಸ್ ಸರ್ಕಾರದ ನಿರಂತರ ರೈತ ವಿರೋಧಿ ಧೋರಣೆಯ ವಿರುದ್ಧ ನಾಡಿನ ರೈತ ಸಮುದಾಯ ಸಿಡಿದೆದ್ದಿದೆ. ರೈತ ಸಮುದಾಯಕ್ಕೆ ನಿರಂತರ ಅನ್ಯಾಯ ಎಸಗುತ್ತಲೆ ಬಂದಿರುವ ಸಿಎಂ ಸಿದ್ದರಾಮಯ್ಯ ಅವರು, ಈಗ ಅಧಿಕಾರದ ಸೊಕ್ಕಿನಿಂದ ರೈತರ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವುದು, ನಾಡಿನ ರೈತ ಸಮುದಾಯಕ್ಕೆ ಮಾಡುತ್ತಿರುವ ಅಪಮಾನ.
ಸರ್ಕಾರದಿಂದ ರೈತರಿಗೆ ದೊರೆಯುತ್ತಿದ್ದ ಸೌಲಭ್ಯಗಳನ್ನು ಹತ್ತಿಕ್ಕಿದ್ದು ಮಾತ್ರವಲ್ಲದೇ, ಈಗ ರೈತರ ಪ್ರತಿಭಟನೆಯನ್ನು ಸಿಎಂ ಸಿದ್ದರಾಮಯ್ಯರವರು ಹತ್ತಿಕ್ಕುತ್ತಿರುವುದು, ಅವರ ದುರಂಹಕಾರದ ಪರಮಾವಧಿಯ ಪ್ರದರ್ಶನ. ಕರ್ನಾಟಕದ ಲೂಟಿಯ ಮಾಡೆಲ್‌ನ್ನು ಕಾಂಗ್ರೆಸ್ ದೇಶಾದ್ಯಂತ ವಿಸ್ತರಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗುತ್ತಿಗೆದಾರರ ಮಂಚದ ಅಡಿ ಸಿಕ್ಕಂತೆಯೇ ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯರ ಮನೆಯಲ್ಲಿ ₹200 ಕೋಟಿ ಅಕ್ರಮ ಹಣ ಪತ್ತೆಯಾಗಿದೆ!
ರಾಜ್ಯದಲ್ಲಿ ರೈತ ವಿರೋಧಿ @INCKarnataka ಸರ್ಕಾರ ರೈತರನ್ನು ಬೀದಿಗೆ ತಂದು ನಿಲ್ಲಿಸಲು ಮಾಡುತ್ತಿರುವ ಪ್ರಯತ್ನಗಳ ಪಟ್ಟಿ:
— BJP Karnataka (@BJP4Karnataka) December 9, 2023
▪️ಬರ ಪರಿಹಾರ ಕೊಡದೆ ಇರುವುದು.
▪️ಐಪಿ ಸೆಟ್ ಹೊರೆಯನ್ನು ಹಾಕುವುದು.
▪️ಪಿಎಂ ಕಿಸಾನ್ ಯೋಜನೆ ನಿಲ್ಲಿಸುವುದು.
▪️ಪಂಪ್‌ಸೆಟ್‌ಗಳಿಗೆ ವಿದ್ಯುತ್ ತೆಗೆಯುವುದು.
▪️ಬೆಳೆ ಬೆಳೆಯ ಬೇಡಿ ಎಂದು ನಿರ್ಬಂಧ ಹೇರುವುದು.…
ಭ್ರಷ್ಟಾಚಾರದ ನವ ಇತಿಹಾಸ ಬರೆಯುತ್ತಿರುವ ಕಾಂಗ್ರೆಸ್ ಶಾಸಕರ ಮನೆಯಲ್ಲಿ ಹುಡುಕಿದರೆ ಅದಕ್ಕಿಂತಲೂ ಹೆಚ್ಚು ಸಿಗಬಹುದು. ಜನರನ್ನು ವಂಚಿಸಿ ತಮ್ಮ ಕಪಾಟು-ಮಂಚಗಳಲ್ಲಿ ಹಣ ಸಂಗ್ರಹಿಸುವುದೇ ಕಾಂಗ್ರೆಸ್ಸಿಗರ ಏಕೈಕ ಗುರಿಯಾಗಿದೆ. ಕರ್ನಾಟಕವೂ ಇಂಥ ಭ್ರಷ್ಟರ ಪಾಲಾಗಿರುವುದು ಸಮಸ್ತ ಕನ್ನಡಿಗರ ಪಾಲಿನ ಸಾರ್ವಕಾಲಿಕ ದುರಾದೃಷ್ಟ ಎಂದು ರಾಜ್ಯ ಬಿಜೆಪಿ ಹೇಳಿದೆ.
ರಾಜ್ಯದ ಇಂಧನ ಸಚಿವ ಕೆ. ಜೆ. ಜಾರ್ಜ್‌ರವರಿಗೆ, ರಾಜ್ಯದಲ್ಲಿ ಎಲೆಕ್ಟ್ರಿಕಲ್ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿರುವುದೇ ತಿಳಿದಿಲ್ಲವಂತೆ..! ಸ್ವಾಮಿ ಕೆ ಜೆ ಜಾರ್ಜ್ ಅವರೇ, ನೀವು ಕರ್ನಾಟಕದ ಇಂಧನ ಸಚಿವರು ಎಂಬುದಾದರೂ ನಿಮಗೆ ತಿಳಿದಿದೆಯೇ..?? ಎಂದು ಬಿಜೆಪಿ ಪ್ರಶ್ನಿಸಿದ್ದು, ಬಹುಶಃ ನೀವು ತೆಲಂಗಾಣಕ್ಕೆ ಹೋದಾಗ ಅಲ್ಲಿ ಸೂಟ್ ಕೇಸ್ ಮಾತ್ರ ಬಿಟ್ಟು ಬಂದಿಲ್ಲ, ನಿಮ್ಮ ನೆನಪಿನ ಶಕ್ತಿಯನ್ನು ಅಲ್ಲಿಯೇ ಬಿಟ್ಟು ಬಂದಿದ್ದೀರಿ ಅನಿಸುತ್ತದೆ!
ಬರ ನಿರ್ವಹಣೆ ವೈಫಲ್ಯ ಮತ್ತು ಸ್ಟಾಲಿನ್ ಪ್ರೇಮಕ್ಕಾಗಿ ಕಾವೇರಿ ನೀರು ಹರಿಬಿಟ್ಟ ಕಾಂಗ್ರೆಸ್ ಸರ್ಕಾರದ ಕರ್ಮ ಫಲವನ್ನು ಬೆಂಗಳೂರಿನ ಜನತೆ ಈಗ ಉಣ್ಣಬೇಕಾಗಿದೆ. ಬೆಂಗಳೂರಿಗೆ ಕುಡಿಯುವ ನೀರನ್ನೇ ಒದಗಿಸಲು ಹರ ಸಾಹಸ ಪಡುತ್ತಿರುವ ಕಾಂಗ್ರೆಸ ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಹಣ ಬಿಡುಗಡೆ ಮಾಡಿ ಭರ್ಜರಿಯಾಗಿ ಸ್ವತಃ ತಾನೇ ತಿನ್ನುತ್ತಿದೆ. ಬೆಂಗಳೂರಿಗೆ ನೀರೇ ಇಲ್ಲದಿದ್ದರೂ ಕಾಂಗ್ರೆಸ್ಸಿಗೆ ಚಿಂತೆಯೇ ಇಲ್ಲ, ಏಕೆಂದರೆ ಎಲ್ಲಾ ಚುನಾವಣಾ ಖರ್ಚುಗಳನ್ನೂ ಬೆಂಗಳೂರೇ ನೋಡಿಕೊಳ್ಳುತ್ತಿದೆಯಲ್ಲಾ ಎಂದು ರಾಜ್ಯ ಬಿಜೆಪಿ ಕುಟುಕಿದೆ.












Click it and Unblock the Notifications