Karnataka Budget: ಬಜೆಟ್‌ ಕುರಿತು ಸದನದಲ್ಲಿ ವಿವರಣೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು, ಮಾರ್ಚ್ 22: ಬಜೆಟ್ ಕೇವಲ ಅಂಕಿ ಸಂಖ್ಯೆಗಳ ಆಟವಲ್ಲ. ಇದು 7 ಕೋಟಿ ಜನರ ಬದುಕಿನ ಉಸಿರಿನ ಪ್ರತೀಕ, ಬಜೆಟ್‍ನಲ್ಲಿ ನಮ್ಮ ಸರ್ಕಾರದ ಧ್ಯೇಯೋದ್ದೇಶಗಳು, ಅಭಿವೃದ್ಧಿಗಳ ಕುರಿತದ್ದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಹೇಳಿದರು. ಶುಕ್ರವಾರ ವಿಧಾನಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ನಡೆದ ಸಾಮಾನ್ಯ ಚರ್ಚೆಗೆ ಉತ್ತರವನ್ನು ನೀಡಿದ ಅವರು 4-5 ವಿಚಾರಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಬಜೆಟ್ ಮೇಲೆ ಚರ್ಚಿಸಲಾಗಿದೆ. ಮುಖ್ಯವಾಗಿ, ರಾಜ್ಯದ ಸಾಲ ಹಾಗೂ ಆರ್ಥಿಕ ಪರಿಸ್ಥಿತಿ, ಗ್ಯಾರಂಟಿ ಯೋಜನೆಗಳು, ಎಸ್.ಸಿ. ಎಸ್.ಪಿ ಮತ್ತು ಟಿ.ಎಸ್.ಪಿ ವಿಚಾರ, ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ, ಕ್ಷೇತ್ರಗಳಿಗೆ ಅಭಿವೃದ್ಧಿ ಅನುದಾನ ಹಾಗೂ ಪ್ರದೇಶವಾರು ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ.

ಬಜೆಟ್ ಕುರಿತು ಮಾಧ್ಯಮದವರು ಅಭೂತಪೂರ್ವವಾಗಿ ಸ್ವಾಗತಿಸಿವೆ. ಶ್ಲಾಘನೆ ಮಾಡಿವೆ. ವಿಶ್ಲೇಷಣೆಗಳನ್ನು ಬರೆದಿವೆ. ನಮ್ಮ ಬಜೆಟ್‍ನ್ನು ಅರ್ಥ ಮಾಡಿಕೊಂಡು ಜನರಿಗೆ ತಲುಪಿಸಿವೆ. ಇದಲ್ಲದೇ ನಾಡಿನ ಜನತೆ, ವಿವಿಧ ಸಂಘ ಸಂಸ್ಥೆಗಳಾದ ಎಫ್‍ಕೆಸಿಸಿಐ, ಸಿ.ಐ.ಐ., ಚಲನಚಿತ್ರ ರಂಗ ಇನ್ನಿತರ ಸಂಘಸಂಸ್ಥೆಗಳು ಸರ್ಕಾರದ ಬಜೆಟ್ ನ್ನು ಹೊಗಳಿದ್ದಾರೆ. ನಾಡಿನ ವಿವಿಧ ವಲಯಗಳ ಜನರು ನಮ್ಮ ಬಜೆಟ್ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಗಳು ನಮಗೆ ಇನ್ನಷ್ಟು ಶಕ್ತಿ ತುಂಬಲಿವೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

Siddaramaiah Gave Complete Information About Discussion On Budget In The Assembly

2025-26ನೇ ಸಾಲಿನಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್‍ನ್ನು ನಾನು ಮಂಡಿಸಿದ್ದೇನೆ. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ನಮ್ಮ ರಾಜ್ಯದ ಬಜೆಟ್ ಗಾತ್ರ ಶೇ.10.3 ರಷ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಜನಸಂಖ್ಯೆಯ ಗಾತ್ರದಲ್ಲಿ ಕರ್ನಾಟಕವು 8ನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹಿಸಿ ಕೊಡುವ ವಿಚಾರದಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಜಿಡಿಪಿಯಲ್ಲಿ ಕರ್ನಾಟಕವು ಮಹಾರಾಷ್ಟ್ರ, ತಮಿಳುನಾಡಿನ ನಂತರ 3ನೇ ಸ್ಥಾನದಲ್ಲಿದೆ. ಆದರೆ, 2025-26ನೇ ಸಾಲಿನ ನಮ್ಮ ಬಜೆಟ್ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ 5ನೇ ದೊಡ್ಡ ಬಜೆಟ್ ಆಗಿದೆ ಎಂದು ಹೇಳಿದರು.

2024-25 ರಲ್ಲಿ 1,89,893 ಕೋಟಿ ರೂ.ಗಳಷ್ಟು ರಾಜ್ಯದ ಸ್ವಂತ ತೆರಿಗೆ ಸಂಗ್ರಹವಾಗಬಹುದೆಂದು ಅಂದಾಜು ಮಾಡಲಾಗಿತ್ತು. ಫೆಬ್ರವರಿ ಅಂತ್ಯದವರೆಗೆ 1,57,111 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಶೇ. 82.7 ರμÁ್ಟಗಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಸುಮಾರು 1,77,000 ಕೋಟಿ ರೂ.ಗಳಷ್ಟು ಸಂಗ್ರಹವಾಗಬಹುದು. ಇದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ತುಸು ಕಡಿಮೆ. ಕರ್ನಾಟಕವು ದೇಶದ ಒಂದು ಭಾಗ. ದೇಶದಲ್ಲಿ ನಡೆಯುವ ಬೆಳವಣಿಗೆಗಳು ರಾಜ್ಯದ ಮೇಲೂ ಪರಿಣಾಮ ಬೀರುತ್ತವೆ. ಇದು ದೇಶದ ಆರ್ಥಿಕ ಬೆಳವಣಿಗೆಯು ಸಮರ್ಪಕವಾಗಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು.

ರಾಜ್ಯವು ಅಭಿವೃದ್ಧಿ ಹೊಂದುತ್ತಿದೆ ಎಂಬುದಕ್ಕೆ ನಮ್ಮ ಬಜೆಟ್ ಸಾಕ್ಷಿಯಾಗಿದೆ. 2022-23 ರಲ್ಲಿ 2,65,720 ಕೋಟಿ ರೂ.ಗಳಷ್ಟಿದ್ದ ಆಯವ್ಯಯ ಗಾತ್ರ 2025-26ನೇ ಸಾಲಿಗೆ 4,09,549 ಕೋಟಿ ರೂ. ಗಳಿಗೆ ಏರಿಕೆ ಆಗುತ್ತದೆ. ವ್ಯತ್ಯಾಸ 2022-23ಕ್ಕೆ ಹೋಲಿಸಿದರೆ 1,43,829 ಕೋಟಿ ರೂ.ಗಳನಷ್ಟಾಗುತ್ತದೆ. ನಮ್ಮ ಆಯವ್ಯಯ ಗಾತ್ರ ಶೇ.54.12 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು. ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂ.ಗಳನ್ನು ನಾನು ಒದಗಿಸಿದ್ದೇನೆ. ನಾನು ಮೊದಲೆ ಹೇಳಿದ ಹಾಗೆ ನಮ್ಮ ಸರ್ಕಾರ ಜನರ ಕಲ್ಯಾಣವನ್ನು ಹಾಗೂ ರಾಜ್ಯದ ಅಭಿವೃದ್ಧಿಯನ್ನು ಏಕಕಾಲದಲ್ಲಿ ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಕುರಿತ ಜಗತ್ತಿನ ವ್ಯಾಖ್ಯಾನಗಳು ಬದಲಾಗುತ್ತಿವೆ.

ಇನ್ನು ವಿತ್ತೀಯ ಶಿಸ್ತನ್ನು ನಮ್ಮ ಬಜೆಟ್ ಕಾಪಾಡಿಕೊಂಡಿದೆ. ವಿತ್ತೀಯ ಕೊರತೆಯು ಜಿ.ಎಸ್.ಡಿ.ಪಿ.ಯ ಶೇ.3 ರಷ್ಟನ್ನು ಮೀರಬಾರದು ಎಂದಿದೆ. ಅದರಂತೆ ನಮ್ಮ ವಿತ್ತೀಯ ಕೊರತೆಯು ಶೇ.2.95 ರಷ್ಟಿದೆ. ಹಾಗೆಯೇ ಜಿ.ಎಸ್.ಡಿ.ಪಿ ಗೆ ಎದುರಾಗಿ ನಮ್ಮ ಹೊಣೆಗಾರಿಕೆಗಳು ಶೇ.25 ರಷ್ಟನ್ನು ಮೀರಬಾರದು ಎಂದಿದೆ. 2025-26ರ ಹೊಣೆಗಾರಿಕೆ ಶೇ.24.91 ರಷ್ಟಾಗುತ್ತದೆ. ಕರ್ನಾಟಕವು 2021-22 ರಲ್ಲಿ ಶೇ.26.71 ರಷ್ಟು ಹೊಣೆಗಾರಿಕೆಯನ್ನು ಹೊಂದಿತ್ತು. 2021-22 ರಲ್ಲಿ ವಿತ್ತೀಯ ಕೊರತೆ ಶೇ. 3.03 ರಷ್ಟಿತ್ತು.

ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ಸೇರಿದಂತೆ ಇತರೆ ಎಲ್ಲಾ ಕಲ್ಯಾಣ ಯೋಜನೆಗಳಿಗೆ ಹಾಗೂ ಸಹಾಯಧನಗಳಿಗೆ ಸರಿ ಸುಮಾರು 1 ಲಕ್ಷ ಕೋಟಿವರೆಗೆ ವಿನಿಯೋಗಿಸುತ್ತಿದೆ. 2024-25 ರಲ್ಲಿ 7ನೇ ವೇತನ ಆಯೋಗ ಜಾರಿ ಆಗಿರುವುದರಿಂದ 2025-26 ನೆ ಸಾಲಿಗೆ ಸರ್ಕಾರಿ ನೌಕರರ ಸಂಬಳಕ್ಕಾಗಿ 85,860 ಕೋಟಿ ರೂ. ಮತ್ತು ಪಿಂಚಣಿಗಾಗಿ 38,580 ಕೋಟಿ ರೂ. ಸೇರಿ ಒಟ್ಟು ವೇತನಗಳಿಗಾಗಿ 1,24,440 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿದೆ. ಬಡ್ಡಿ ಪಾವತಿಗಾಗಿ 45,600 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿಗಳಿಗಾಗಿ ಒಟ್ಟು 1,70,040 ಕೋಟಿ ರೂ.ಗಳು.

2025-26ರ ಬಜೆಟ್ ಬಡವರ, ಮಹಿಳೆಯರ, ಮಕ್ಕಳ, ಶೋಷಿತರ, ದುರ್ಬಲ ವರ್ಗದವರ, ಯುವಜನರ, ಕಾರ್ಮಿಕರ, ರೈತರ, ಹಿಂದುಳಿದವರ, ಅಲ್ಪಸಂಖ್ಯಾತರ ಏಳಿಗೆಯನ್ನು ಹಾಗೂ ಸಂಪತ್ತನ್ನು ಉತ್ಪಾದನೆ ಮಾಡುವವರ ಹಿತರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ನಾಡಿನ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುವ ಮೂಲಕ ಕರ್ನಾಟಕವನ್ನು ಸಮಗ್ರ ಹಾಗೂ ಸುಸ್ಥಿರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಶ್ರಮಿಸುವ ನಿಟ್ಟಿನಲ್ಲಿ ನಾನು ಆಯವ್ಯಯವನ್ನು ರೂಪಿಸಲಾಗಿದೆ.

ನಮ್ಮ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬ ಆರೋಪಕ್ಕೆ 2013-14 ರಿಂದ 2017-18 ಹಾಗೂ 2023-24 ರಿಂದ 2024-25 ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರ ಪಡೆದಿರುವ ಒಟ್ಟು ಸಾಲವು 3,21,037 ಕೋಟಿ ರೂ.ಗಳು. ಈ ಅವಧಿಯಲ್ಲಿ ಹಿಂದಿನ ಸರ್ಕಾರಗಳು ಮಾಡಿದ ಸುಮಾರು 75,856 ಕೋಟಿ ರೂ.ಗಳನ್ನು ತೀರಿಸಲಾಗಿದೆ ಅಲ್ಲದೆ, ಈ ಅವಧಿಯಲ್ಲಿ 2,37,524 ಕೋಟಿ ರೂ. ಗಳಷ್ಟು ಅನುದಾನವನ್ನು ಬಂಡವಾಳ ಕಾಮಗಾರಿಗಳಿಗೆ ನೀಡಲಾಗಿದೆ ಹಾಗೂ ಬಂಡವಾಳ ಯೋಜನೆಗಳಿಗೆ ಅನುದಾನ ಒದಗಿಸುವ ಮೂಲಕ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯಾಗಿರುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+