ರಸ್ತೆಗಿಳಿದವು ಕೆಎಸ್ಆರ್‌ಟಿಸಿಯ 10 ಬಯೋಬಸ್

ಬೆಂಗಳೂರು, ಅಕ್ಟೋಬರ್ 02 : ಬಯೋ ಡೀಸೆಲ್‌ನಿಂದ ಸಂಚಾರ ನಡೆಸುವ ಕೆಎಸ್‌ಆರ್‌ಟಿಸಿಯ 10 ಬಯೋ ಬಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹಸಿರು ನಿಶಾನೆ ತೋರಿಸಿದ್ದಾರೆ. 107 ಬಸ್ಸುಗಳನ್ನು ಬಯೋ ಡೀಸೆಲ್ ಮೂಲಕ ಓಡಿಸುವ ಉದ್ದೇಶವನ್ನು ಕೆಎಸ್ಆರ್‌ಟಿಸಿ ಹೊಂದಿದೆ.

ಶುಕ್ರವಾರ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬಯೋ ಡೀಸೆಲ್ ಮೂಲಕ ಸಂಚಾರ ನಡೆಸುವ 10 ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಿದರು. ಪ್ರಾಯೋಗಿಕವಾಗಿ 10 ಬಸ್ಸುಗಳ ಸಂಚಾರವನ್ನು ಆರಂಭಿಸಲಾಗಿದೆ.

ksrtc

ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಚಿವಾಲಯ 2015ರ ಆಗಸ್ಟ್‌ನಲ್ಲಿ ಸಾರಿಗೆ ಇಲಾಖೆಗಳು ಶೇ 20 ರಿಂದ 100 ರಷ್ಟು ಮಿಶ್ರಣ ಹೊಂದಿರುವ ಬಯೋ ಡೀಸೆಲ್ ಬಳಸಬೇಕೆಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ಸದ್ಯ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಕೆಎಸ್ಆರ್‌ಟಿಸಿ 10 ಬಸ್ಸುಗಳ ಸಂಚಾರ ಆರಂಭಿಸಿದೆ. 107 ಬಸ್ಸುಗಳನ್ನು ಬಯೋ ಡೀಸೆಲ್ ಮೂಲಕ ಓಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಬಯೋ ಡೀಸೆಲ್‌ನಿಂದ ಓಡುವ ಬಯೋ ಬಸ್ಸಿನಿಂದ ಪ್ರತಿ ಲೀಟರ್ ಡೀಸೆಲ್ ಮೇಲೆ ಕೆಎಸ್ಆರ್‌ಟಿಸಿ 5 ರೂ. ಉಳಿಸಲಿದೆ ಮತ್ತು ಈ ಬಸ್ಸುಗಳಿಂದ ಮಾಲಿನ್ಯದ ಪ್ರಮಾಣವು ಕಡಿಮೆಯಾಗಲಿದೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

karnataka

ಈ ಬಯೋ ಡೀಸೆಲ್ ಉಪಯೋಗದಿಂದ ಬಸ್ಸುಗಳ ಇಂಜಿನ್‌ಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ತಾಂತ್ರಿಕ ಸಿಬ್ಬಂದಿ. ಕೆಎಸ್‌ಆರ್‌ಟಿಸಿ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಜೆಎಸ್‌ಎಸ್‌ ಇಂಜಿನಿಯರಿಂಗ್ ಕಾಲೇಜ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇವು ವಾಹನಗಳ ದಕ್ಷತೆಯನ್ನು ಮೌಲ್ಯಮಾಪನ, ಅಧ್ಯಯನ ಮಾಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+