ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ, ಡಿಕೆಶಿ ಪ್ರತ್ಯೇಕ ಬಸ್ ಯಾತ್ರೆ ರದ್ದು, ಒಟ್ಟಿಗೆ ರಾಜ್ಯ ಪ್ರವಾಸ!

|
Google Oneindia Kannada News

ಬೆಂಗಳೂರು, ನ.16: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಸಜ್ಜಾಗುತ್ತಿದೆ. ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಪ್ರಭಾವವಿರುವಾಗಲೇ ರಾಜ್ಯ ಕಾಂಗ್ರೆಸ್ ತನ್ನ ಕಾರ್ಯ ಚುರುಕುಗೊಳಿಸಿದೆ.

ಇದೇ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರಾಜ್ಯದಲ್ಲಿ ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ಪ್ರವಾಸ ಕೈಗೊಳ್ಳುವ ಬಗ್ಗೆ ವರದಿಗಳು ಬಂದಿದ್ದವು. ಸಿದ್ದರಾಮಯ್ಯ ತಾವೇ ಈ ಬಗ್ಗೆ ಸ್ಪಷ್ಟಪಡಿಸಿದ್ದರು. ಆದರೆ, ಪ್ರತ್ಯೇಕ ಬಸ್ ಪ್ರವಾಸಕ್ಕೆ ಕಾಂಗ್ರೆಸ್ ಹೈಕಮಾಂಡ್ ತಡೆ ನೀಡಿದೆ.

Siddaramaiah; ಕೋಲಾರದಿಂದ ಸ್ಪರ್ಧೆ, ಪ್ಲಸ್ ಪಾಯಿಂಟ್‌ಗಳು!Siddaramaiah; ಕೋಲಾರದಿಂದ ಸ್ಪರ್ಧೆ, ಪ್ಲಸ್ ಪಾಯಿಂಟ್‌ಗಳು!

ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯನ್ನು ಉಳಿಸಿಕೊಳ್ಳುವ ಸಲುವಾಗಿ, ರಾಜ್ಯದಲ್ಲಿ ಸ್ಥಳೀಯವಾಗಿ ಕಾಂಗ್ರೆಸ್ ಹೆಚ್ಚು ಬೆಂಬಲವನ್ನು ಗಳಿಸಲು ರಾಜ್ಯಾದಂತ್ಯ ಬಸ್ ಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿದೆ. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಎರಡು ತಂಡಗಳು ಪ್ರವಾಸ ಮಾಡಲು ಸಜ್ಜಾಗಿದ್ದವು. ಆದರೆ, ಇಬ್ಬರು ನಾಯಕರು ಒಟ್ಟಾಗಿಯೇ ಪ್ರಚಾರ ಮಾಡುವಂತೆ ಹೈಕಮಾಂಡ್ ತಿಳಿಸಿದೆ.

ಒಟ್ಟಾಗಿ ಪ್ರಚಾರ ನಡೆಸಲಿರುವ ಸಿದ್ದರಾಮಯ್ಯ, ಶಿವಕುಮಾರ್

ಒಟ್ಟಾಗಿ ಪ್ರಚಾರ ನಡೆಸಲಿರುವ ಸಿದ್ದರಾಮಯ್ಯ, ಶಿವಕುಮಾರ್

ಕರ್ನಾಟಕದಲ್ಲಿ 2023ರ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಡಿ. ಕೆ. ಶಿವಕುಮಾರ್ ಪ್ರತ್ಯೇಕವಾಗಿ ಯಾತ್ರೆ ನಡೆಸಲು ಯೋಜಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಸ್ಪಷ್ಟ ಸಂದೇಶ ನೀಡಿದ್ದು, ಪ್ರತ್ಯೇಕ ಪ್ರವಾಸ ಬೇಡ, ಒಟ್ಟಾಗಿ ಪ್ರಚಾರ ಮಾಡಿ ಎಂದು ತಿಳಿಸಿದೆ.

ಯಾತ್ರೆ ನಡೆಸಲು ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪ್ರತಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದು, ಈ ಕ್ಷೇತ್ರಗಳ ಸಮಸ್ಯೆಗಳನ್ನು ಅಧ್ಯಯನ ಮಾಡಿದ ನಂತರ ಯಾತ್ರೆಯ ವಿವರವಾದ ಯೋಜನೆಯನ್ನು ರೂಪಿಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪ್ರತೇಕ ಬಸ್ ಪ್ರವಾಸ, ಪ್ರತಿಪಕ್ಷಗಳಿಗೆ ಟೀಕಾಸ್ತ್ರ ಆತಂಕ

ಪ್ರತೇಕ ಬಸ್ ಪ್ರವಾಸ, ಪ್ರತಿಪಕ್ಷಗಳಿಗೆ ಟೀಕಾಸ್ತ್ರ ಆತಂಕ

ಈಗಾಗಲೇ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ನಡುವೆ ಎಲ್ಲವೂ ಸರಿಯಾಗಿಲ್ಲ ಕಾಂಗ್ರೆಸ್ ಇಬ್ಭಾಗವಾಗುತ್ತಿದೆ ಎಂದು ಆಡಳಿತರೂಢ ಬಿಜೆಪಿ ಪದೇ ಪದೇ ಆರೋಪಿಸುತ್ತಿದೆ.

ಇಂತಹ ಸಮಯದಲ್ಲಿ ಇಬ್ಬರು ನಾಯಕರು ಪ್ರತ್ಯೇಕವಾಗಿ ರಾಜ್ಯ ಪ್ರವಾಸ ಮಾಡಿದರೇ ಇದನ್ನೇ ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳಬಹುದು ಎಂಬ ಆತಂಕವನ್ನು ಹಲವು ಕಾಂಗ್ರೆಸ್ ನಾಯಕರು ಹೊರಹಾಕಿದ್ದಾರೆ. ಹೀಗಾಗಿ ಇಬ್ಬರು ನಾಯಕರು ಒಟ್ಟಿಗೆ ಪ್ರಯಾಣಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಸಮಯದ ಅಭಾವದಿಂದ ಪ್ರತ್ಯೇಕ ಯಾತ್ರೆ ಯೋಜನೆಯಾಗಿತ್ತು

ಸಮಯದ ಅಭಾವದಿಂದ ಪ್ರತ್ಯೇಕ ಯಾತ್ರೆ ಯೋಜನೆಯಾಗಿತ್ತು

ಕೆಪಿಸಿಸಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ರಾಜ್ಯದಲ್ಲಿನ ಕ್ಷೇತ್ರಗಳನ್ನು ವಿಭಜಿಸುವುದು ಕೆಪಿಸಿಸಿಯ ಆರಂಭಿಕ ಯೋಜನೆಯಾಗಿತ್ತು. ಒಂದು ತಂಂಡ ಉತ್ತರದ ಪ್ರದೇಶಗಳನ್ನು ಮತ್ತು ಇನ್ನೊಂದು ತಂಡ ದಕ್ಷಿಣ ಜಿಲ್ಲೆಗಳಲ್ಲಿ ಯಾತ್ರೆ ಮಾಡುವಂತೆ ಯೋಜನೆ ರೂಪಿಸಲಾಗಿತ್ತು.

"ಇಬ್ಬರು ನಾಯಕರ ನಡುವೆ ಯಾತ್ರೆ ಇಬ್ಭಾಗವಾಗಿರುವುದಕ್ಕೆ ಸಮಯದ ಅಭಾವವೇ ಕಾರಣ. ಎಲ್ಲಾ 224 ವಿಧಾನಸಭಾ ಸ್ಥಾನಗಳನ್ನು ಸಂಪರ್ಕಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ನಮ್ಮ ಪಕ್ಷದಲ್ಲಿ ಇಬ್ಬರು ಪ್ರಮುಖ ನಾಯಕರಿರುವುದರಿಂದ, ಅವರ ನಡುವೆ ಕೆಲಸಗಳನ್ನು ಹಂಚಿದರೆ, ಇಬ್ಬರು ಪಕ್ಷದ ಸಂದೇಶವನ್ನು ಸರಿಯಾಗಿ ತಲುಪಿಸುತ್ತಾರೆ. ಆದರೆ, ಇದನ್ನು ಇಬ್ಬರೂ ನಾಯಕರು ಒಟ್ಟಾಗಿಲ್ಲ ಎಂದು ತೋರಿಸಲು ಪ್ರತಿಪಕ್ಷಗಳು ಬಳಸಬಹುದು ಎಂಬುದನ್ನು ನಾವು ತಿಳಿದುಕೊಂಡೆವು" ಎಂದು ಹೆಸರು ಹೇಳಲು ಇಚ್ಛಿಸದ ನಾಯಕರೊಬ್ಬರು ಹೇಳಿದ್ದಾರೆ.

 ಯಾತ್ರೆಗೆ ಸಿದ್ಧವಾಗಿದೆ ಸಿದ್ದರಾಮಯ್ಯ ಅವರ ಬಸ್!

ಯಾತ್ರೆಗೆ ಸಿದ್ಧವಾಗಿದೆ ಸಿದ್ದರಾಮಯ್ಯ ಅವರ ಬಸ್!

'ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ಬಸ್ ಯಾತ್ರೆ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಪಕ್ಷದ ನಾಯಕತ್ವದಿಂದ ಎಲ್ಲ ವಿವರಗಳನ್ನು ರೂಪಿಸಲಾಗುವುದು. ಪಕ್ಷದ ಒಗ್ಗಟ್ಟು ಮುಖ್ಯವಾಗಿದ್ದು, ಜಿಲ್ಲೆಗಳಲ್ಲಿ ಪ್ರವಾಸ ಮಾಡುವಾಗ ಇಬ್ಬರೂ ನಾಯಕರು ಒಟ್ಟಿಗೆ ಇರಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಬಸ್ ಯಾತ್ರೆಗೂ ಮುನ್ನ ಪಕ್ಷವು ಜಿಲ್ಲಾವಾರು ಸಭೆಗಳನ್ನು ನಡೆಸುತ್ತಿದ್ದು, ಸ್ಥಳೀಯ ಮುಖಂಡರ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನೂ ಬಗೆಹರಿಸಲಾಗುತ್ತಿದೆ. ಈಗಾಗಲೇ ಅರ್ಧ ಜಿಲ್ಲೆಗಳಲ್ಲಿ ಸಭೆಗಳು ಪೂರ್ಣಗೊಂಡಿದ್ದು, ಉಳಿದ ಜಿಲ್ಲೆಗಳಲ್ಲಿ ಸಭೆ ಮುಗಿದ ನಂತರ ಯಾತ್ರೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಮುಖಂಡರು ಹೇಳಿದ್ದಾರೆ.

ಇನ್ನು, ಯಾತ್ರೆ ನಡೆಸಲು ಸಿದ್ದರಾಮಯ್ಯ ಅವರ ತಂಡದಿಂದ ಈಗಾಗಲೇ ಬಸ್ ತಯಾರಾಗಿದೆ. ಸಿದ್ದರಾಮಯ್ಯ ಅವರು ಭಾನುವಾರ ಕೋಲಾರಕ್ಕೆ ಇತರ ಕೆಲವು ನಾಯಕರೊಂದಿಗೆ ಪ್ರಯಾಣಿಸುವ ಮೂಲಕ ಬಸ್‌ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಿದ್ದರು. ಸಿದ್ದರಾಮಯ್ಯನವರ ಕಚೇರಿಯ ಪ್ರಕಾರ, ಕಾಂಗ್ರೆಸ್ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಬಸ್ ಅನ್ನು ಬಾಡಿಗೆಗೆ ನೀಡಿದ್ದರು.

English summary
Karnataka assembly elections 2023: Opposition leader Siddaramaiah and KPCC chief D. K. Shivakumar's separate state tour by bus droped by Congress. Both leaders will campaign together in Karnataka. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X