Siddaramaiah: ವಿಧಾನಸಭೆಯಲ್ಲಿ ಹೈಡ್ರಾಮಾ; ಭಾಷಣ ಓದದೆ ತೆರಳಿದ ಗವರ್ನರ್: ಸಿದ್ದರಾಮಯ್ಯ ಕಿಡಿ
ಬೆಂಗಳೂರು: ಇಂದಿನಿಂದ ಜನವರಿ 31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ. ನರೇಗಾ ಹೆಸರು ಬದಲಾವಣೆಗೆ ಆಕ್ಷೇಪಿಸಿ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದಿದ್ದು, ಈ ಅಧಿವೇಶನಕ್ಕೆ ರಾಜ್ಯಪಾಲರು ಬರಲು ನಿರಾಕರಿಸಿದ್ದರು, ಇದೀಗ ಸದನಕ್ಕೆ ಬಂದು ಭಾಷಣ ಮಾಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸೌಧಕ್ಕೆ ಆಗಮಿಸಿದ್ದು, ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಗೆಹ್ಲೋಟ್ ಭಾಷಣ ಮಾಡಿದ್ದು, ಆರ್ಥಿಕ ಸ್ಥಿತಿಗತಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ನನ್ನ ಸರ್ಕಾರ ಬದ್ಧವಾಗಿದೆ. ಅವರಿಗೆ ನನ್ನ ಶುಭಾಶಯ, ಜೈ ಹಿಂದ್, ಜೈಕರ್ನಾಟಕ ಎಂದು ರಾಜ್ಯಪಾಲರು ಭಾಷಣ ಮುಗಿಸಿದ್ದಾರೆ. ಈ ಮೂಲಕ ಸರ್ಕಾರ ಕೊಟ್ಟ ಭಾಷಣ ಓದದೇ ಕೆಲ ಅಂಶಗಳನ್ನು ಮಾತ್ರ ಓದಿ ಭಾಷಣ ಮುಗಿಸಿದ್ದಾರೆ. ಭಾಷಣ ಮಾಡದೆ ಹೊರಟ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದ್ದಾರೆ. ಅಲ್ಲದೇ ವಿಧಾನಸಭೆಯಲ್ಲಿ ರಾಜ್ಯಪಾಲರನ್ನ ಕಾಂಗ್ರೆಸ್ ಸದಸ್ಯರು ಅಡ್ಡಗಟ್ಟಿದ್ದು, ರಾಜ್ಯಪಾಲರ ನಡೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಂಡಿಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ರಾಜ್ಯಪಾಲರು ಅವರು ರೆಡಿ ಮಾಡಿಕೊಂಡ ಭಾಷಣವನ್ನು ಓದುವಂತಿಲ್ಲ. ರಾಜ್ಯ ಸಚಿವ ಸಂಪುಟ ಸಭೆ ಸಿದ್ದ ಪಡಿಸಿದ ಭಾಷಣವನ್ನು ರಾಜ್ಯಪಾಲರು ಓದಲೇಬೇಕು. ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಬೇಕು. ಮನ್ ರೇಗಾ ಬದಲಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಂದಿದ್ದಾರೆ. ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದಾರೆ. ಸಂವಿಧಾನದ ಪ್ರಕಾರ ರಾಜ್ಯಪಾಲರು ಭಾಷಣ ಮಾಡವುದು ಕರ್ತವ್ಯ ಎಂದು ಹೇಳಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಗೆಹ್ಲೋಟ್ ಭಾಷಣ ಮಾಡಿದ್ದು, ಆರ್ಥಿಕ ಸ್ಥಿತಿಗತಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ನನ್ನ ಸರ್ಕಾರ ಬದ್ಧವಾಗಿದೆ. ಅವರಿಗೆ ನನ್ನ ಶುಭಾಶಯ, ಜೈ ಹಿಂದ್, ಜೈಕರ್ನಾಟಕ ಎಂದು ರಾಜ್ಯಪಾಲರು ಭಾಷಣ ಮುಗಿಸಿದ್ದಾರೆ. ಈ ಮೂಲಕ ಸರ್ಕಾರ ಕೊಟ್ಟ ಭಾಷಣ ಓದದೇ ಕೆಲ ಅಂಶಗಳನ್ನು ಮಾತ್ರ ಓದಿ ಭಾಷಣ ಮುಗಿಸಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕು. ಆರ್ಟಿಕಲ್ 176 ಸ್ಪಷ್ಟವಾಗಿ ಹೇಳುತ್ತದೆ ರಾಜ್ಯಪಾಲರ ಅವರು ತಯಾರು ಮಾಡುವಂತದಹದು ಓದುವಂತಹದು ಅಲ್ಲ, ಕ್ಯಾಬಿನೆಟ್ ಏನು ತಯಾರು ಮಾಡುತ್ತದೆ ಅದನ್ನ ಓದಲೇಬೇಕು. ಜಂಟಿ ಅಧಿವೇಶನ ಜೊತೆಗೆ ವಿಶೇಷ ಅಧಿವೇಶನ ಕರಿದಿದ್ವಿ. ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನ ತಗೆದು, ಜಿ ರಾಮಜೀ ಹೊಸ ಕಾಯ್ದೆ ಮಾಡಿದ್ದಾರೆ. ಇದನ್ನ ನಮ್ಮ ಸರ್ಕಾರದ್ದು ತೀವ್ರ ವಿರೊಧವಿದೆ.
ಒಂದು ಮಹತ್ಮಾಗಾಂಧಿಜೀ ಅವರ ಹೆಸರು ತೆಗೆದುಹಾಕಿದ್ದಕ್ಕೆ ಹಳ್ಳಿಗಾಡನಲ್ಲಿ ಇರುವಂತಹ ಬಡ ಕಾರ್ಮಿಕರಿಗೆ ಕನಿಷ್ಠ 100 ದಿನ ಉದ್ಯೋಗ ಕೊಡಬೇಕು ಎಂಬುದು ಈ ಹಿಂದೆ ಮಾಡಿದ್ರು, ಇದರಲ್ಲಿ ಉದ್ಯೋಗ ಕೊಡುತ್ತಿವೆ ಎಂಬುವುದು ಖಾತ್ರಿ ಇಲ್ಲ.ಮೊದಲು ಅವರ ಅವರ ಜಮೀನಿನಲ್ಲಿ ಕೆಲಸ ಮಾಡಬಹುದಿತ್ತು, ಇದರಲ್ಲಿ ಎಲ್ಲಿ ಕೆಲಸ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಈ ಕಾಯ್ದೆಯಲ್ಲಿ ಈ ರೂಲ್ಸ್ ಇಲ್ಲ, ವಿರೋಧ ಪಕ್ಷದವರು ಉದ್ದೇಶ ಪೂರ್ವಕವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅದನ್ನ ನಾವು ವಿರೋಧ ಮಾಡಿದ್ದೇವೆ.
ಮನರೇಗಾವನ್ನು ಮತ್ತೆ ಸ್ಥಾಪಿಸಬೇಕು. ಮನರೇಗಾ ಯೋಜನೆ ತರುವರೆಗೂ ನಾವು ಹೋರಾಟ ಮಾಡುತ್ತೇವೆ, ರಾಜ್ಯಪಾಲರ ನಾವು ಸಿದ್ದಪಡಿಸಿರುವ ಭಾಷಣ ಓದಿಲ್ಲ. ಅವರು ಸಿದ್ದಪಡಿಸಿಕೊಂಡ ಭಾಷಣ ಓದಿದ್ದಾರೆ
ಸಂವಿಧಾನದ ವಿಧಿಗಳಿಗೆ ವಿರೋಧ ಮಾಡಿದ್ದಾರೆ. ಸಂವಿಧಾನ ಉಲ್ಲಂಘನೆ ಮಾಡಿದ್ದಾರೆ, ಸಂವಿಧಾನ 176 ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ನಮ್ಮ ಸರ್ಕಾರ ಪ್ರತಿಭಟನೆ ಮಾಡುತ್ತದೆ, ನಮ್ಮ ಪಕ್ಷ ಪ್ರತಿಭಟನೆ ಮಾಡುತ್ತದೆ
ನಮ್ಮ ಶಾಸಕರು ಪ್ರತಿಭಟನೆ ಮಾಡುತ್ತಾರೆ, ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ. ಕೇಂದ್ರ ಸರ್ಕಾರ ಅವರ ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲು ರಾಜ್ಯಪಾರಿಂದ ಅವರು ಮಾಡಿರುವ ಭಾಷಣ ಓದಿಸಿದ್ದಾರೆ. ಇದು ಸಂವಿಧಾನ ವಿರುದ್ಧವಾಗಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications