ಸಚಿವ ಸಂಪುಟ ವಿಸ್ತರಣೆ : ಯಾರು ಯಾರು ರೇಸಿನಲ್ಲಿದ್ದಾರೆ?

ಮುಂದಿನ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸಚಿವರಾಗಲು ರೇಸಿನಲ್ಲಿ ಯಾರು ಯಾರಿದ್ದಾರೆ?

ಬೆಂಗಳೂರು, ಜೂನ್ 04 : ಮುಂದಿನ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ ಮಂತ್ರಿ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸಚಿವರಾಗಲು ರೇಸಿನಲ್ಲಿ ಯಾರು ಯಾರಿದ್ದಾರೆ? ಜಿ ಪರಮೇಶ್ವರ ಅವರಿಂದ ತೆರವಾಗಿರುವ ಗೃಹ ಸಚಿವ ಸ್ಥಾನಕ್ಕೆ ಯಾರು ಸೂಕ್ತ ಅಭ್ಯರ್ಥಿ? ಮುಂದೆ ಓದಿ..

ಜೂನ್ 5 ರಿಂದ 16 ರ ತನಕ ವಿಧಾನಸಭೆ ಅಧಿವೇಶನ ನಡೆಯಲಿದೆ. ಇದಾದ ಬಳಿಕ ಖಾಲಿ ಇರುವ ಮೂರು ಸ್ಥಾನಗಳನ್ನು ತುಂಬುವ ನಿರೀಕ್ಷೆಯಿದೆ. [ಪರಂಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿದ್ದುಗೆ ಚುನಾವಣೆ ನೇತೃತ್ವ]

ಹೊಸಬರಿಗೆ ಸಚಿವ ಸ್ಥಾನ ನೀಡುವ ಸುಳಿವು ನೀಡಿದ ಸಿದ್ದರಾಮಯ್ಯ ಅವರು, ಯಾರಿಗೆ ಅದೃಷ್ಟ ಸಿಗಲಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.

ಖಾಲಿ ಇರುವ ಮೂರು ಸ್ಥಾನಗಳಲ್ಲಿ ಒಂದು ಕುರುಬ ಸಮುದಾಯಕ್ಕೆ, ಮತ್ತೊಂದು ಪರಿಶಿಷ್ಟ ಬಲಗೈ ಗೆ ಹಾಗೂ ಇನ್ನೊಂದನ್ನು ವೀರಶೈವ ಸಮುದಾಯಕ್ಕೆ ನೀಡುವ ಸಾಧ್ಯತೆಯಿದೆ. ಇರುವ ಮೂರು ಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಲಾಬಿ ಆರಂಭವಾಗಿದೆ

ಮೇಟಿಗೆ ಮತ್ತೆ ಅವಕಾಶವಿಲ್ಲ

ಮೇಟಿಗೆ ಮತ್ತೆ ಅವಕಾಶವಿಲ್ಲ

ವಿಡಿಯೋ ಹಗರಣದಲ್ಲಿ ಸಿಲುಕಿ ಕ್ಲೀನ್ ಚಿಟ್ ಪಡೆದಿರುವ ಮಾಜಿ ಅಬಕಾರಿ ಸಚಿವ ಎಚ್ ವೈ ಮೇಟಿ ಅವರನ್ನು ಮತ್ತೊಮ್ಮೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೆಚ್ಚಾಗಿದೆ. ಚುನಾವಣೆಯ ಮುಂದಿಟ್ಟುಕೊಂಡು ರಗಳೆ ಬೇಡ ಎಂದು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಜತೆಗೆ ಹೊಸದಾಗಿ ಶಾಸಕಿಯಾಗಿರುವ ಗೀತಾ ಮಹದೇವ ಪ್ರಸಾದ್ ಅವರು ಸಂಪುಟ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯೂ ಇದೆಯಾದರೂ ಇಬ್ಬರಿಗೂ ಸಂಪುಟ ಭಾಗ್ಯವಿಲ್ಲ.

ಕುರುಬ ಸಮುದಾಯದಿಂದ ಯಾರು?

ಕುರುಬ ಸಮುದಾಯದಿಂದ ಯಾರು?

ಕುರುಬ ಸಮುದಾಯದಿಂದ ಮಂತ್ರಿಯಾಗಲು ಕುರುಬ ಸಮುದಾಯದ ಕುಂದಗೋಳ ಶಾಸಕ ಸಿ.ಎಸ್‌. ಶಿವಳ್ಳಿ, ಹೊಸದುರ್ಗ ಶಾಸಕ ಬಿ.ಜಿ ಗೋವಿಂದಪ್ಪ ಮತ್ತು ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಅವರು ರೇಸಿನಲ್ಲಿದ್ದಾರೆ. ಆದರೆ, ಮಾಜಿ ಸಚಿವ ಎಚ್ಎಂ ರೇವಣ್ಣ ಅವರಿಗೆ ಸ್ಥಾನ ಸಿಗುವ ಅವಕಾಶ ಹೆಚ್ಚಾಗಿದೆ.

ಗೃಹ ಸಚಿವ ಸ್ಥಾನ ಯಾರಿಗೆ ಕೊಡಬೇಕು

ಗೃಹ ಸಚಿವ ಸ್ಥಾನ ಯಾರಿಗೆ ಕೊಡಬೇಕು

ಗೃಹ ಸಚಿವ ಸ್ಥಾನ ಯಾರಿಗೆ ಕೊಡಬೇಕು ಎಂಬುದೇ ದೊಡ್ಡ ತಲೆ ನೋವಿನ ಸಂಗತಿಯಾಗಿದೆ.ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿರುವ ಡಿ.ಕೆ. ಶಿವಕುಮಾರ್, ಹಿಂದಿನ ಗೃಹ ಸಚಿವ ರಾಗಿದ್ದ ಕೆ.ಜೆ. ಜಾರ್ಜ್ ಅವರ ಪೈಕಿ ಒಬ್ಬರಿಗೆ ಗೃಹ ಖಾತೆ ಜವಾಬ್ದಾರಿ ನೀಡಲಾಗುತ್ತದೆ, ರೋಷನ್ ಬೇಗ್ ಅವರಿಗೆ ಬೆಂಗಳೂರು ಉಸ್ತುವಾರಿ ನೀಡಲಾಗುತ್ತದೆ ಎಂಬ ಸುದ್ದಿಯೂ ಇದೆ.

ಪರಿಶಿಷ್ಟರ ಸ್ಥಾನದಿಂದ ಮಂತ್ರಿ

ಪರಿಶಿಷ್ಟರ ಸ್ಥಾನದಿಂದ ಮಂತ್ರಿ

ಪರಿಶಿಷ್ಟರ ಸ್ಥಾನದಿಂದ ಮಂತ್ರಿ ಹುದ್ದೆ ಪಡೆಯಲು ವಿಧಾನಪರಿಷತ್ ಸದಸ್ಯೆ ಮೋಟಮ್ಮ,ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಆರ್.ಬಿ. ತಿಮ್ಮಾಪುರ,ನಾಗಠಾಣ ಶಾಸಕ ರಾಜು ಅಲಗೂರ ಸೇರಿದಂತೆ ಅನೇಕರು ಯತ್ನ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+