ಪರಂಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿದ್ದುಗೆ ಚುನಾವಣೆ ನೇತೃತ್ವ
ಬೆಂಗಳೂರು, ಮೇ 31: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಇರುವಂತೆ ಕಾಂಗ್ರೆಸ್ ನಲ್ಲಿ ರೂಪುರೇಷೆಯನ್ನು ಘೋಷಣೆ ಮಾಡಲಾಗಿದೆ. ಅದರ ಪ್ರಕಾರ ಸ್ಥಾನ-ಮಾನಗಳ ವಿವರ ಹೀಗಿದೆ.

ಚುನಾವಣೆ ನೇತೃತ್ವ : ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ : ಡಾ.ಜಿ.ಪರಮೇಶ್ವರ್
ಕೆಪಿಸಿಸಿ ಕಾರ್ಯಾಧ್ಯಕ್ಷ : ಎಸ್.ಆರ್.ಪಾಟೀಲ್
ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ : ಡಿಕೆ ಶಿವಕುಮಾರ್
ದಕ್ಷಿಣ ಕರ್ನಾಟಕ ಪಕ್ಷದ ಉಸ್ತುವಾರಿ : ದಿನೇಶ್ ಗುಂಡೂರಾವ್
ಉತ್ತರ ಕರ್ನಾಟಕ ಪಕ್ಷದ ಉಸ್ತುವಾರಿ : ಎಸ್.ಆರ್.ಪಾಟೀಲ್
ಎಐಸಿಸಿ ಕಾರ್ಯದರ್ಶಿ: ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತರು: ಕೆ.ಎಚ್.ಮುನಿಯಪ್ಪ
ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪರಮೇಶ್ವರ್ ಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ.
ಇಡೀ ತಂಡವನ್ನು ಗಮನಿಸುವಾಗ ಜಾತಿ ಸಮೀಕರಣ ನೋಡಿಯೇ ಇಂಥದ್ದೊಂದು ತಂಡ ರಚಿಸಿರುವುದು ಸ್ಪಷ್ಟವಾಗುತ್ತದೆ.[ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಪರಂ ಮುಂದುವರಿಕೆಗೆ ಹೈಕಮಾಂಡ್ ಒಲವು]
ಹಿಂದುಳಿದ ವರ್ಗ(ಕುರುಬ), ಪರಿಶಿಷ್ಟ ಜಾತಿ, ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ...ಹೀಗೆ ಚುನಾವಣೆ ಮುಂಚೂಣಿಯಲ್ಲಿ ಜಾತಿ ಬ್ರಿಗೇಡ್ ಸಿದ್ಧಪಡಿಸಿದೆ. ಕಾಂಗ್ರೆಸ್ ನಿಂದ ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಆಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುವಂತಿದೆ.












Click it and Unblock the Notifications