ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸಂಪುಟ ವಿಸ್ತರಣೆ, ಲೇಟೆಸ್ಟ್ ಸುದ್ದಿ ಏನಿದೆ?

By Mahesh
|
Google Oneindia Kannada News

ಬೆಂಗಳೂರು, ಜೂನ್ 19: ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಪ್ರಕ್ರಿಯೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಭಾನುವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಇಂದೇ ಹೊಸ ಸಚಿವರಿಗೆ ಖಾತೆ ಹಂಚುವ ಸಾಧ್ಯತೆಯಿದೆ. ಆಲ್ಲಿ ತನಕ ನಡೆಯಲಿರುವ ಬೆಳವಣಿಗೆಗಳ ಕ್ವಿಕ್ ಲುಕ್ ನಿಮಗೆ ಇಲ್ಲಿ ಸಿಗಲಿದೆ.

ಒಟ್ಟು 14 ಹಾಲಿ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, 13 ಅಥವಾ 14 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಹಾಲಿ ಸಚಿವರಿಗೆ ಸಿದ್ದರಾಮಯ್ಯ ಅವರೇ ಕರೆ ಮಾಡಿ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ. [ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]

ಆದರೆ, ಇಲ್ಲಿ ತನಕ ಯಾರೂ ರಾಜೀನಾಮೆ ನೀಡಿಲ್ಲ. ಮಧ್ಯಾಹ್ನ 1 ಗಂಟೆ ತನಕ ಗಡುವು ನೀಡಲಾಗಿದೆ. [ಸಿದ್ದರಾಮಯ್ಯ ಸಂಪುಟ ಸೇರುವ ಶಾಸಕರ ಪಟ್ಟಿ]

Siddaramaiah Cabinet Expansion reshuffle Latest updates

ಭಾನುವಾರದ ಪ್ರಮುಖ ಬೆಳವಣಿಗೆಗಳು:

ಆದರೆ, ನೂತನ ಸಚಿವರ ಜೊತೆ ಸಂಪುಟ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಕ್ಷದಲ್ಲಿ ಯಾವುದೇ ಬಂಡಾಯ ವಾತಾವರಣವಿಲ್ಲ, 8 ಜನ ರಾಜೀನಾಮೆ ನೀಡುತ್ತಿಲ್ಲ ಎಂದಿದ್ದಾರೆ.

* ಬೆಂಗಳೂರಿನ ಶಾಸಕರಿಂದ ಅಸಮಾಧಾನದ ಹೊಗೆ: ಎಂ ಕೃಷ್ಣಪ್ಪ(ವಿಜಯನಗರ), ಪ್ರಿಯಾಕೃಷ್ಣ, ಎಸ್ ಟಿ ಸೋಮಶೇಖರ್ (ಯಶವಂತಪುರ), ಮುನಿರತ್ನ, ಭೈರತಿ ಬಸವರಾಜ್ (ಕೆಆರ್ ಪುರಂ), ಆರ್ ವಿ ದೇವರಾಜ್(ಚಿಕ್ಕಪೇಟೆ) ರಾಜೀನಾಮೆ ನೀಡಲು ನಿರ್ಧಾರ.

* ಇತ್ತ ಬೆಂಗಳೂರಿನಲ್ಲಿ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ಜೋರಾಗಿ ನಡೆದಿದೆ.

ST Somashekar

* ಕಲಬುರಗಿಯ ಜಗತ್ ವೃತ್ತದಲ್ಲಿ ವೀರಶೈವ ಲಿಂಗಾಯುತ ವೇದಿಕೆಯಿಂದ ಪ್ರತಿಭಟನೆ, ಸಚಿವ ಖಮರುಲ್ ಇಸ್ಲಾಂರನ್ನು ಸಂಪುಟದಿಂದ ಕೈಬಿಡದಂತೆ ಆಗ್ರಹ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಕ್ರೋಶ.[ಶ್ರೀನಿವಾಸಪ್ರಸಾದ್ ರನ್ನು ಕೈಬಿಟ್ಟಿದ್ದಕ್ಕೆ ಮೈಸೂರಲ್ಲಿ ಆಕ್ರೋಶ]

* ಉತ್ತರ ಕರ್ನಾಟಕ ಭಾಗದ ಮುಸ್ಲಿಂ ನಾಯಕರನ್ನು ಕಡೆಗಣಿಸಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಏನು ಲಾಭ, ನಾನು ದಿನದಲ್ಲಿ 12ಕ್ಕೂ ಅಧಿಕ ಗಂಟೆಗಳ ಕಾಲ ದುಡಿಯುತ್ತಿದ್ದೇನೆ ಎಂದು ಖಮರುಲ್ ಹೇಳಿದ್ದಾರೆ.

Khamarul Islam

* ಬದಾಮಿ ಶಾಸಕ ಬಿಬಿ ಚಿಮ್ಮನಕಟ್ಟಿ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ.

* ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ರಿಂದ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಬಗ್ಗೆ ಅಸಮಾಧಾನ. ಅವರ ಅಭಿಮಾನಿಗಳಿಂದ ನಂಜನಗೂಡಿನಲ್ಲಿ ರಸ್ತೆ ತಡೆದು ಪ್ರತಿಭಟನೆ.

* ಸಿಎಂ ದ್ಯಾವಪ್ಪ, ಅಂಬರೀಷ್ ಅಭಿಮಾನಿ, ಪೊಲೀಸರ ವಶಕ್ಕೆ, ಮಂಡ್ಯದ ಸಂಜಯ್ ವೃತ್ತದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ, ದ್ಯಾವಪ್ಪರನ್ನು ರಕ್ಷಿಸಿದ ಪೊಲೀಸರು. [ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್]

* ಬೀದರ್ ಜಿಲ್ಲೆ ಹುಮ್ನಾನಾದ್ ಪಟ್ಟಣ ಬಂದ್ ಆಚರಣೆ, ಶಾಸಕ ರಾಜಶೇಖರ್ ಪಾಟೀಲ್ ಅವರ ಬೆಂಬಲಿಗರಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ, ಬಸ್ ಸಂಚಾರ ಸ್ಥಗಿತ.
* ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಯೋಗೇಶ್ವರ್, ನನಗೆ ಮಂತ್ರಿ ಪದವಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹೈಕಮಾಂಡ್ ನನಗೆ ನೀಡಿರುವ ಭರವಸೆ ಉಳಿಸಿಕೊಳ್ಳುವ ವಿಶ್ವಾಸವಿದೆ. ಆತ(ಡಿಕೆ ಶಿವಕುಮಾರ್) ಅಧ್ಯಕ್ಷ(ಕೆಪಿಸಿಸಿ) ನಾಗಲು ಯಾರ ಬೆಂಬಲ ಬೇಕಾಗಿಲ್ಲ. ಅದೇ ರೀತಿ ನನಗೆ ಸಚಿವನಾಗಲು ಯಾರ ಬೆಂಬಲ ಬೇಕಿಲ್ಲ ಎಂದಿದ್ದಾರೆ.

* ಶಾಸಕ ಸಿಪಿ ಯೋಗೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ಒತ್ತಡ, ಲಾಬಿ ನಡೆಸಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನಗಳನ್ನು ನಡೆಸಿದ್ದಾರೆ. [ಸಿಐಡಿಗೆ ಬೇಕಾದ ಯೋಗೇಶ್ವರ್ ಗೆ ಸಚಿವ ಸ್ಥಾನ ಏಕೆ?]

CP Yogeshwar


* ಎಂ ಕೃಷ್ಣಪ್ಪ ಅವರ ಬೆಂಬಲಿಗರಿಂದ ಭಾರಿ ಪ್ರತಿಭಟನೆ, ವಿಜಯನಗರದ ಮೆಟ್ರೋ ನಿಲ್ದಾಣಕ್ಕೆ ನುಗ್ಗಿ ಗಲಾಟೆ, ಆತಂಕಗೊಂಡ ಮೆಟ್ರೋ ಪ್ರಯಾಣಿಕರು. ಏಳೆಂಟು ನಿಮಿಷಗಳ ಕಾಲ ತಡವಾಗಿ ಚಲಿಸಿದ ರೈಲು. ರಸ್ತೆಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ, ಕೃಷ್ಣಪ್ಪ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಆಗ್ರಹ.

* ಎಂ ಕೃಷ್ಣಪ್ಪ ಅವರ ಹೆಸರು ಸಚಿವ ಸ್ಥಾನಕ್ಕೆ ಕೇಳಿ ಬಂದರೂ ಅವರಿಗೆ ಇನ್ನೂ ಸಿಎಂ ಸಿದ್ದರಾಮಯ್ಯ ಅವರಿಂದ ಕರೆ ಹೋಗಿಲ್ಲ.

* ಸಚಿವ ಸ್ಥಾನ ಆಕಾಂಕ್ಷಿ ಎಚ್ ಶಿವಶಿಂಕರ್ ರೆಡ್ಡಿ ಕಾರ್ಯಕರ್ತರಿಂದ ಗೌರಿಬಿದನೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ, ಕಲ್ಲು ತೂರಾಟ.

* ಬೀದರ್ ಜಿಲ್ಲೆ ಹುಮ್ನಾನಾದ್ ಪಟ್ಟಣ ಬಂದ್ ಆಚರಣೆ, ಶಾಸಕ ರಾಜಶೇಖರ್ ಪಾಟೀಲ್ ಅವರ ಬೆಂಬಲಿಗರಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ, ಬಸ್ ಸಂಚಾರ ಸ್ಥಗಿತ.

M Krishnappa

* ಗೃಹ ಸಚಿವ ಜಿ ಪರಮೇಶ್ವರ ಅವರು ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡು, ಪ್ರಮಾಣ ವಚನ ಸಮಾರಂಭಕ್ಕೆ ಗೈರು ಹಾಜರಾಗಲಿದ್ದಾರೆ. ಜರ್ಮನಿಗೆ ತೆರಳಿದ್ದಾರೆ. [ಸಂಪುಟದಿಂದ ಹೊರಹೋಗಲಿರುವ 13 ಸಚಿವರು]

* ಬೆಂಗಳೂರಿನ ವಿಜಯನಗರದಲ್ಲಿ ಲೇಔಟ್ ಕೃಷ್ಣಪ್ಪ ಅವರ ಬೆಂಬಲಿಗರಿಂದ ರಸ್ತೆ ತಡೆ, ಪ್ರತಿಭಟನೆ.

* 'ಅಪ್ಪನ ಘನತೆಗೆ ತಕ್ಕಂತೆ ಕಾರ್ಯನಿರ್ವಹಿಸುವೆ, ಯುವ ಶಾಸಕರಿಗೆ ಅವಕಾಶ ನೀಡುವ ಸಲುವಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ' ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ.

English summary
Siddaramaiah Cabinet Expansion reshuffle Latest updates: Karnataka Chief Minister Siddaramaiah is set to reshuffle his cabinet on Jun 19 evening. but he is facing protest from rebel leaders and many likely to skip the oath taking ceremony including G Parameshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X