ಸೂರ್ಯನ ನಕ್ಷತ್ರಕ್ಕೆ ಚಂದ್ರನ ಸಂಕ್ರಮಣ: ಇಂದಿನಿಂದ ಈ ರಾಶಿಯವರಿಗೆ ಧನ ಲಾಭ, ಹೆಚ್ಚುವುದು ಸಿರಿ ಸಂಪತ್ತು
ಮೇ 25 ಅಂದರೆ ಇಂದು ಗಂಗಾ ದಸರಾವನ್ನು ಆಚರಿಸಲಾಗುತ್ತದೆ. ಇಂದಿನ ದಿನವೇ ಚಂದ್ರನು ಸೂರ್ಯನ ಉತ್ತರಫಲ್ಗುಣಿ ನಕ್ಷತ್ರಕ್ಕೆ ಸಂಕ್ರಮಿಸಿದ್ದಾನೆ. ಇಂದು ಮುಂಜಾನೆ 2:50 ಕ್ಕೆ, ಚಂದ್ರನು ಉತ್ತರಫಲ್ಗುಣಿ ನಕ್ಷತ್ರಕ್ಕೆ ಕಾಲಿಟ್ಟಿದ್ದಾನೆ. ಜ್ಯೋತಿಷ್ಯದಲ್ಲಿ ಸೂರ್ಯನ ನಕ್ಷತ್ರಕ್ಕೆ ಚಂದ್ರನ ಪ್ರವೇಶ ಮಹತ್ವದ್ದಾಗಿದೆ. ಇದು ವ್ಯಕ್ತಿಗಳ ಮನಸ್ಸು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳ ಮೇಲೆ ಆಳವಾದ ಪರಿಣಾಮ ಬೀರಬಹುದು.
ಚಂದ್ರನ ನಕ್ಷತ್ರ ಬದಲಾವಣೆಯಿಂದ ಯಾವ ರಾಶಿಯವರಿಗೆ ಪ್ರಯೋಜನ:

ಮಿಥುನ ರಾಶಿ:
ಚಂದ್ರನು ಉತ್ತರಫಾಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ಮಿಥುನ ರಾಶಿಯವರಿಗೆ ಶುಭ ಫಲವೇ ಸಿಗುವುದು. ಉದ್ಯೋಗ ಹುಡುಕಾಟ ನಡೆಸುತ್ತಿದ್ದವರಿಗೆ ನಿರೀಕ್ಷೆಯ ಕೆಲಸ ಸಿಗುವುದು. ಸಂಜೆಯ ವೇಳೆಗೆ ನಿಮಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರದಲ್ಲಿಯೂ ದೊಡ್ಡ ಮಟ್ಟದ ಲಾಭವಾಗುವುದು.ಆರ್ಥಿಕ ಸ್ಥಿತಿ ಬಲವಾಗುವುದು. ಅರ್ಧಕ್ಕೆ ನಿಂತು ಹೋಗಿರುವ ಕೆಲಸ ಮತ್ತೆ ಪೂರ್ಣವಾಗುವುದು. ಮಾನಸಿಕ ಶಾಂತಿ ಹೆಚ್ಚಾಗುವುದು.

ಕರ್ಕಾಟಕ ರಾಶಿ:
ಸೂರ್ಯ ರಾಶಿಗೆ ಚಂದ್ರನ ಸಂಕ್ರಮಣ ಕರ್ಕಾಟಕ ರಾಶಿಯವರಿಗೆ ಶುಭಕರವಾಗಿರುತ್ತದೆ. ತಾಯಿಯ ಆರೋಗ್ಯ ಸುಧಾರಿಸುತ್ತದೆ ಮತ್ತು ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕೆಲಸದ ಬಗ್ಗೆಒಳ್ಳೆಯ ಸುದ್ದಿ ಬರಬಹುದು. ಬಡ್ತಿ ಸಿಗಬಹುದು ಅಥವಾ ವೇತನದಲ್ಲಿ ಏರಿಕೆಯಾಗಬಹುದು. ವ್ಯಾಪಾರದಲ್ಲಿ ಯಶಸ್ಸು ಸಿಗುವುದು. ಜಗಳ, ಮನಸ್ತಾಪಗಳು ಕೊನೆಯಾಗಿ ಸಂಬಂಧಗಳು ಗಟ್ಟಿಯಾಗುವುದು.

ಸಿಂಹ ರಾಶಿ:
ಚಂದ್ರನ ನಕ್ಷತ್ರ ಸಂಕ್ರಮಣ ಸಿಂಹ ರಾಶಿಯವರಿಗೂ ಶುಭ ಫಲವನ್ನೇ ನೀಡುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ನಾಯಕತ್ವದ ಸಾಮರ್ಥ್ಯಗಳು ಹೆಚ್ಚಾಗಬಹುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಜೀವನ ಹೊಸ ದಿಕ್ಕಿನತ್ತ ಸಾಗುವುದು. ಉತ್ತಮ ಅವಕಾಶಗಳು ಒಲಿದು ಬರುವುದು.

ಧನು ರಾಶಿ:
ಧನು ರಾಶಿಯವರಿಗೂ ಚಂದ್ರನ ನಕ್ಷತ್ರ ಬದಲಾವಣೆ ಶುಭಕರವಾಗಬಹುದು. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಸರ್ಕಾರಿ ಕೆಲಸಗಳನ್ನು ಪೂರ್ಣಗೊಳಿಸಲು ಇದು ಒಳ್ಳೆಯ ಸಮಯ. ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಯಶಸ್ಸು ಸಿಗುವುದು. ನ್ಯಾಯಾಲಯದ ವಿಷಯಗಳಲ್ಲಿ ಪರಿಹಾರ ಸಿಗುವ ಸಾಧ್ಯತೆಯಿದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications