ಆರೋಗ್ಯ ತಪಾಸಣೆಗಾಗಿ ಸಿದ್ದಗಂಗಾ ಸ್ವಾಮೀಜಿ ಆಸ್ಪತ್ರೆಗೆ ದಾಖಲು

Recommended Video

      ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಆಸ್ಪತ್ರೆಗೆ ದಾಖಲು

      ಬೆಂಗಳೂರು, ಜೂನ್ 21: ತಮ್ಮ ಆರೋಗ್ಯ ತಪಾಸಣೆಗಾಗಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಬಿಜಿಎಸ್ ಆಸ್ಪತ್ರೆಗೆ ಗುರುವಾರ ಬೆಳಿಗ್ಗೆ ಆಗಮಿಸಿದರು.

      ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಬಂದ ಸ್ವಾಮೀಜಿ ಕಾರಿನಿಂದ ಇಳಿದು ವ್ಹೀಲ್ ಚೇರ್ ನಂತಹ ಸೌಲಭ್ಯ ನಿರಾಕರಿಸಿ ನಡೆದುಕೊಂಡೇ ಆಸ್ಪತ್ರೆ ಒಳಗೆ ಹೋದರು.

      ಸ್ವಾಮೀಜಿ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬ್ಲಡ್ ಚೆಕ್ ಅಪ್ ಸೇರಿದಂತೆ ರೆಗ್ಯುಲರ್ ಚೆಕ್ ಅಪ್ ಮಾಡಲಾಗುವುದು. ಆ ರಿಪೋರ್ಟ್ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವೈದ್ಯ ಡಾ. ರವೀಂದ್ರ ತಿಳಿಸಿದರು.

      siddaganga swamiji admitted to hospital for routine checkup

      ಆಸ್ಪತ್ರೆಯ ಹಿರಿಯ ವೈದ್ಯರ ತಂಡ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡಲಿದೆ. ಈ ಹಿಂದೆ ಚಿಕಿತ್ಸೆ ನೀಡಿದ್ದ ವೈದ್ಯರ ತಂಡವೇ ಚಿಕಿತ್ಸೆ ಮುಂದುವರಿಸಲಿದೆ. ಎಕ್ಸ್ ರೇ, ಇಸಿಜಿ, ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಲಾಗುವುದು ಎಂದು ಹೇಳಿದರು.

      ಪಿತ್ತಕೋಶಕ್ಕೆ ಸ್ಟಂಟ್ ಅಳವಡಿಸಿ ಆರು ತಿಂಗಳು ಕಳೆದಿದ್ದರಿಂದ ಸಾಮಾನ್ಯ ತಪಾಸಣೆಗಾಗಿ ಅವರು ಆಸ್ಪತ್ರೆಗೆ ಬಂದಿದ್ದಾರೆ. ಜನವರಿಯಲ್ಲಿ ಮೂರು ಸ್ಟಂಟ್ ಅಳವಡಿಕೆ ಮಾಡಲಾಗಿತ್ತು. ಅವರ ದೇಹದಲ್ಲಿ 8 ಒಟ್ಟು ಸ್ಟಂಟ್‌ಗಳಿವೆ.

      ಒಂದು ಸ್ಟಂಟ್ ಅವಧಿ ಕೇವಲ ಆರು ತಿಂಗಳು. ಹೀಗಾಗಿ ಸ್ಟಂಟ್‌ನ ಕಾರ್ಯವೈಖರಿ ಕುರಿತು ತಪಾಸಣೆ ಮಾಡಲಾಗುವುದು. ಬಳಿಕ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

      ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ಜೊತೆ ಕಿರಿಯ ಶ್ರೀಗಳು ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ. ಮಠದಿಂದಲೇ ಶ್ರೀಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+