• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯೋಗಿ ಸೋಲು: ಬಿಜೆಪಿಗೆ ಬುದ್ದಿ ಹೇಳಲು ಬಂದ ಕಾಂಗ್ರೆಸ್ಸಿಗೆ ಟ್ವಿಟ್ಟಿಗರ ರಿಪ್ಲೈ

|
   ಯೋಗಿ ಆದಿತ್ಯನಾಥ್ ಸೋಲು | ಬಿಜೆಪಿಗೆ ಬುದ್ದಿ ಹೇಳಿದ ಕಾಂಗ್ರೆಸ್ | ಟ್ವಿಟ್ಟರ್ ಪ್ರತಿಕ್ರಿಯೆ | Oneindia Kannada

   ಗೋರಖಪುರದಲ್ಲಿ ಸೋತ ಬಿಜೆಪಿಗೆ ಮತ್ತು ಆ ಪಕ್ಷದ ಮುಖಂಡರಿಗೆ ಬುದ್ದಿ ಹೇಳಲು ಬಂದ ಕರ್ನಾಟಕ ಕಾಂಗ್ರೆಸ್ಸಿಗರಿಗೆ, ಟ್ವಿಟ್ಟಿಗರು ಒಂಚೂರು ಬುದ್ದಿಮಾತು, ಒಂದಷ್ಟು ಖಾರಾಭಾತ್ ತಿನ್ನಿಸಿದ್ದಾರೆ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುವ ಗೋರಖಪುರದಲ್ಲಿ ಬಿಜೆಪಿ ಉಪಚುನಾವಣೆಯಲ್ಲಿ ಸೋತ ನಂತರ, ಕರ್ನಾಟಕ ಕಾಂಗ್ರೆಸ್ ಘಟಕ ತನ್ನ @INCKarnataka ಟ್ವಿಟ್ಟರ್ ಹ್ಯಾಂಡಲ್ ನಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಕೆಣಕುವ ಬುದ್ದಿ ಮಾತನ್ನು ಹೇಳಿತ್ತು.

   ಆಡಿಕೊಳ್ಳುವವರ ಬಾಯಿಗೆ ಆಹಾರವಾದ ಗೋರಖಪುರದ ಯೋಗಿ ಸೋಲು

   ಇನ್ನಾದರೂ, ಸ್ವಲ್ಪ ಸ್ವಾಭಿಮಾನ ಪ್ರದರ್ಶಿಸಿ, ಹೊರಗಡೆಯಿಂದ ಬಂದ ವ್ಯಕ್ತಿಗೆ ನಮಸ್ಕರಿಸುವುದನ್ನು ನಿಲ್ಲಿಸಿ, ಆ ವ್ಯಕ್ತಿಗೆ ತನ್ನ ಕ್ಷೇತ್ರವನ್ನೇ ಉಳಿಸಿಕೊಳ್ಳಲಾಗಲಿಲ್ಲ ಎಂದು, ಯಡಿಯೂರಪ್ಪನವರು ಆದಿತ್ಯನಾಥ್ ಅವರ ಕೈಹಿಡಿದು ನಮಸ್ಕರಿಸುತ್ತಿರುವ ಚಿತ್ರವನ್ನು ಹಾಕಿ ಟ್ವೀಟ್ ಮಾಡಿತ್ತು.

   ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

   ಕಾಂಗ್ರೆಸ್ಸಿನ ಈ ಟ್ವೀಟಿಗೆ ಭರ್ಜರಿ ರೆಸ್ಪಾನ್ಸ್ ಬಂದಿದ್ದು, 1,600ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದ್ದು, ಸುಮಾರು 450ಕ್ಕೂ ಕಾಮೆಂಟ್ ಗಳು ಬಂದಿವೆ. ಕಾಂಗ್ರೆಸ್ಸಿನ ಈ ಟ್ವೀಟಿಗೆ ಕೆಲವರು, ಕಾಂಗ್ರೆಸ್ಸಿನ ಹಿರಿಯ ನಾಯಕಿ ಸೋನಿಯಾ ಗಾಂಧಿವರ ಮೂಲವನ್ನೂ ಕೆದಕಿದ್ದಾರೆ.

   ಸೈಕಲ್ ಗೆ 'ಆನೆ' ಬಲ, ಉತ್ತರ ಪ್ರದೇಶದಲ್ಲಿ ಕಮಲ ಅಪ್ಪಚ್ಚಿ

   ವಯಸ್ಸಿನ ಅಂತರವಿಲ್ಲದೇ ಸಾಧುಸಂತರಿಗೆ ನಮಸ್ಕರಿಸುವುದು ಕನ್ನಡಿಗರ ಸಂಸ್ಕೃತಿ. ಕಾಂಗ್ರೆಸ್ಸಿನ ಹಿರಿಯ ನಾಯಕರೆಲ್ಲಾ ಮೊದಲು ಸ್ವಾಭಿಮಾನ ಎನ್ನುವುದನ್ನು ಕಲಿಯಲಿ, ನಂತರ ಇನ್ನೊಬ್ಬರಿಗೆ ಪಾಠ ಹೇಳಲು ಬರಲಿ ಎಂದು ಅದಕ್ಕೆ ಸೂಕ್ತವಾದ ಫೋಟೋ ಹಾಕಿ ಪ್ರತ್ಯುತ್ತರ ನೀಡುತ್ತಿದ್ದಾರೆ. ಕೆಲವೊಂದು ಟ್ವೀಟ್ ಸ್ಯಾಂಪಲ್ ಗಳು, ಮುಂದಿದೆ..

   ಸರ್ವಸ್ವವನ್ನು ತ್ಯಾಗ ಮಾಡಿದವರ ಕಾಲಿಗೆ ಬೀಳುವುದು ನಮ್ಮ ಸಂಸ್ಕೃತಿ

   ಸರ್ವಸ್ವವನ್ನು ತ್ಯಾಗ ಮಾಡಿದವರ ಕಾಲಿಗೆ ಬೀಳುವುದು ನಮ್ಮ ಸಂಸ್ಕೃತಿ

   ಇನ್ನಾದರೂ, ಸ್ವಲ್ಪ ಸ್ವಾಭಿಮಾನ ಪ್ರದರ್ಶಿಸಿ ಯಡಿಯೂರಪ್ಪನವರೇ ಎನ್ನುವ ಕಾಂಗ್ರೆಸ್ ಟ್ವೀಟಿಗೆ, ಇಟಲಿಯ ಬಾರ್ ಗರ್ಲ್ ಕಾಲಿಗೆ ಬೀಳೊದಕ್ಕಿಂತ ಇದೆ ಎಷ್ಟೋ ಮೇಲು ಬಿಡಿ. ಶಬರಿಮಲೆಗೆ ತೆರಳುವ ಕನ್ಯಾ ಸ್ವಾಮಿಗಳ ಕಾಲಿಗೆ ವಯಸ್ಸಿನ ಅಂತರವಿಲ್ಲದೆ ಬೀಳುವ ನಮಗೆ, ಇದು ಏನು ಅಲ್ಲ, ದೇಶದ ಒಳಿತಿಗಾಗಿ @myogiadityanath ಅವರಿಗೆ ಕೈ ಮುಗಿಯಿವುದು ಹಾಗು ದೇಶದ ಒಳಿತಿಗೆ ಸರ್ವಸ್ವವನ್ನು ತ್ಯಾಗ ಮಾಡಿದವರ ಕಾಲಿಗೆ ಬೀಳುವುದು ನಮ್ಮ ಸಂಸ್ಕೃತಿ @BSYBJP ಎನ್ನುವ ಪ್ರತ್ಯುತ್ತರ.

   ವೃದ್ದೆ ರಾಹುಲ್ ಗಾಂಧಿಗೆ ನಮಸ್ಕರಿಸುತ್ತಿರುವ ಚಿತ್ರ

   ವೃದ್ದೆ ರಾಹುಲ್ ಗಾಂಧಿಗೆ ನಮಸ್ಕರಿಸುತ್ತಿರುವ ಚಿತ್ರ

   ಒಂದು ಚಿತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ವೃದ್ದೆಯೊಬ್ಬರಿಗೆ ನಮಸ್ಕರಿಸುತ್ತಿರುವುದು, ಇನ್ನೊಂದೆಡೆ ವೃದ್ದೆ ರಾಹುಲ್ ಗಾಂಧಿಗೆ ನಮಸ್ಕರಿಸುತ್ತಿರುವ ಚಿತ್ರ ಹಾಕಿ ಮಾಡಿರುವ ಟ್ವೀಟಿಗೆ, ಇನ್ನೊಂದು ಟ್ವೀಟ್ ನಲ್ಲಿ ಸಭ್ಯತೆ ಅಂದರೆ ಇದು ಎಂದು, ರಾಹುಲ್ ಗಾಂಧಿ ಅಡ್ವಾಣಿಯವರನ್ನು ಸ್ವಾಗತಿಸುವ ಚಿತ್ರ, ಇನ್ನೊಂದೆಡೆ ಅಡ್ವಾಣಿ ಮುಖ ನೋಡಿ ಮೋದಿ ಆಕಡೆ ಮುಖ ಹಾಕಿಕೊಂಡಿರುವ ಚಿತ್ರ ಹಾಕಿ ಟ್ವೀಟ್.

   ಗೋರಖಪುರ ಮತ್ತು ಜೋಗಿ ಮಠದ ಮುಖ್ಯಸ್ಥರು ಯೋಗಿ ಆದಿತ್ಯನಾಥ್

   ಗೋರಖಪುರ ಮತ್ತು ಜೋಗಿ ಮಠದ ಮುಖ್ಯಸ್ಥರು ಯೋಗಿ ಆದಿತ್ಯನಾಥ್

   ಕಾಂಗ್ರೆಸ್ಸಿನ ಈ ಟ್ವೀಟ್, ಹಿಂದೂ ಸಾಧುಗಳನ್ನು ಅಗೌರವಿಸುವಂತದ್ದು, ಜೊತೆಗೆ ಕರ್ನಾಟಕದ ಹಿಂದೂ ಮಠಗಳನ್ನು ಕಡೆಗಣಿಸುವಂತದ್ದು. ಗೋರಖಪುರ ಮತ್ತು ಜೋಗಿ ಮಠದ ಮುಖ್ಯಸ್ಥರು ಯೋಗಿ ಆದಿತ್ಯನಾಥ್. ಇಟೆಲಿಯವರಿಗೆ ನಮಸ್ಕರಿಸುವ ಪದ್ದತಿಯನ್ನು ಕಾಂಗ್ರೆಸ್ಸಿನವರೂ ಬಿಡಬೇಕು ಎನ್ನುವ ಟ್ವೀಟ್.

   ಉತ್ತರದ ರಾಜಮಾತೆಯ ಕಾಲಿಗೆ ಬಿದ್ದು ಏನು ಮಾಡುತ್ತಿದ್ದಾರೆ?

   ಉತ್ತರದ ರಾಜಮಾತೆಯ ಕಾಲಿಗೆ ಬಿದ್ದು ಏನು ಮಾಡುತ್ತಿದ್ದಾರೆ?

   ಕರ್ನಾಟಕದ ಕೈ ನಾಯಕರೊಬ್ಬರು ಉತ್ತರದ ರಾಜಮಾತೆಯ ಕಾಲಿಗೆ ಬಿದ್ದು ಏನು ಮಾಡುತ್ತಿದ್ದಾರೆ. ಯಾರು ಹೊರಗಿನವರು. ಅವರೇನು ಇಟಲಿಯವರ? ನೀವು ಇಟಲಿಯವರ ಮುಂದೆ ಮಂಡಿ ಊರುತೀರಿ! ಹಾಗಾದರೆ ರಾಹುಲ್ ಕನ್ನಡಿಗರ? ನೀವು ಓಟಿಗಾಗಿ ಬಂಗ್ಲಾದೇಶಿಯರಿಗೆಲ್ಲಾ ಓಟರ್ ಐಡಿ ಮಾಡಿಸಿದೀರಿ!! ಎನ್ನುವ ಟ್ವೀಟ್.

   ಸಂತನಿಗೆ ಗೌರವ ಕೊಡುವುದು ತಪ್ಪಾ, ನಿಮ್ಮ ಹಾಗೆ ಒಂದು ಕುಟುಂಬದ ಕಾಲಿಗೆ ಬೀಳಬೇಕಾ?

   ಸಂತನಿಗೆ ಗೌರವ ಕೊಡುವುದು ತಪ್ಪಾ, ನಿಮ್ಮ ಹಾಗೆ ಒಂದು ಕುಟುಂಬದ ಕಾಲಿಗೆ ಬೀಳಬೇಕಾ?

   ಯೋಗಿ ಇನ್ನು ಮುಂದೆ ಕರ್ನಾಟಕಕ್ಕೆ ಪ್ರಚಾರಕ್ಕೆ ಬರಲಾರರು. ಗೌರವ ಕೊಡೋದನ್ನು ಅವರ ಬಳಿ ಕಲಿಯಿರಿ, ಒಬ್ಬ ಸಂತನಿಗೆ ಗೌರವ ಕೊಡುವುದು ತಪ್ಪಾ.. ನಿಮ್ಮ ಹಾಗೆ ಒಂದು ಕುಟುಂಬದ ಕಾಲಿಗೆ ಬೀಳಬೇಕಾ ?ಕಾಂಗ್ರೆಸ್ ಸಾಲು ಸಾಲು ಸೋಲು ಅನುಭವಿಸುತ್ತಿದೆಯಲ್ಲಾ, ರಾಹುಲ್ ಗಾಂಧಿ ಏನು ಮಾಡಿಕೊಳ್ಲಬೇಕು ಎನ್ನುವ ಟ್ವೀಟ್.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Show some self respect, and stop bowing to an outsider, who can't even win his own seat (Yogi Adityanath)! Congress suggestion to BJP State President B S Yeddyurappa and twitterite strong reaction for INC Karnataka tweet.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more