ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ, 26 ನವಜಾತ ಶಿಶುಗಳ ರಕ್ಷಣೆ

Posted By:
Subscribe to Oneindia Kannada

ಕಲಬುರಗಿ, ಮಾರ್ಚ್,22: ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ನವಜಾತ ಶಿಶುಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಗುಲ್ಬರ್ಗಾ ಜಿಲ್ಲೆಯ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಕಲಬುರಗಿಯ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿದ್ದ ಎಸಿ ಸ್ಪೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ, ನಿಗಾ ಘಟಕದ ಗಾಜು ಒಡೆದು 26 ಶಿಶುಗಳನ್ನು ಮತ್ತೊಂದು ವಾರ್ಡಿಗೆ ಸ್ಥಳಾಂತರಿಸಲಾಗಿದೆ.[ಪ್ರಿಯಕರನ ಹಿಂಸೆಗೆ ಬೇಸತ್ತ 15 ವರ್ಷದ ಹುಡುಗಿ ಆತ್ಮಹತ್ಯೆ]

Short cercuit in district hospital, 26 babies life save Kalaburagi in Gulbarga

ಕಲಬುರಗಿಯ ಜಿಲ್ಲಾಸ್ಪತ್ರೆ ನಿಗಾ ಘಟಕದಲ್ಲಿ 26 ಶಿಶುಗಳಿದ್ದವು. ಎಸಿ ಸ್ಪೋಟಗೊಂಡ ತಕ್ಷಣ ಶಿಶುಗಳಿರುವ ವಾರ್ಡಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಕಂಡ ಸಿಬ್ಬಂದಿ ಫಕೀರಪ್ಪ ಸೇರಿದಂತೆ ಪ್ರತಿಯೋರ್ವರು ತಕ್ಷಣ ಕಾರ್ಯಪ್ರವೃತ್ತರಾಗಿ ಎಲ್ಲಾ ನವಜಾತ ಶಿಶುಗಳನ್ನು ಪಕ್ಕದ ವಾರ್ಡಿಗೆ ವರ್ಗಾವಣೆ ಮಾಡಿದ್ದಾರೆ.

ಸಿಬ್ಬಂದಿ ಫಕೀರಪ್ಪ ಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಕೆಲವು ನಿಮಿಷಗಳ ಕಾಲ ಭಯದ ವಾತಾವರಣ ನಿರ್ಮಾಣವಾಗಿ ವೈದ್ಯರು, ಜನರು ಸೇರಿದಂತೆ ಕಂಗಾಲಾಗಿದ್ದರು. ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ. ವಿಚಾರ ತಿಳಿದ ಕಲಬುರಗಿ ಎಸ್ಪಿ ಅಮಿತ್ ಸಿಂಗ್ ಹಾಗೂ ಈಶಾನ್ಯ ವಲಯ ಐಜಿಪಿ ಶಿವಕುಮಾರ್ ಜಿಲ್ಲಾಸ್ಪತ್ರೆಗೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Short circuit in district hospital, 26 babies life saved at Kalaburagi, Gulbarga, on Wednesday, March 23rd.
Please Wait while comments are loading...