Shivamogga Special Trains: ರೈಲು ಪ್ರಯಾಣಿಕರೇ ಗಮನಿಸಿ: ಶಿವಮೊಗ್ಗದಿಂದ 2 ವಿಶೇಷ ರೈಲು ಸೇವೆ, ಟೈಮಿಂಗ್ ಹೀಗಿದೆ

ಶಿವಮೊಗ್ಗ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಹಾಗೂ ಸಾರ್ವಜನಿಕ ಅನುಕೂಲಕ್ಕಾಗಿ ದಕ್ಷಿಣ ಕರಾವಳಿ ರೈಲ್ವೆ ಮಚಲಿಪಟ್ಟಣ-ಶಿವಮೊಗ್ಗ ಟೌನ್ ಮತ್ತು ಶಿವಮೊಗ್ಗ ಟೌನ್-ಗುಂತಕಲ್ ನಡುವೆ ವಿಶೇಷ ರೈಲುಗಳನ್ನು ಕಾರ್ಯಾಚರಣೆಗೆ ಮಾಡುವುದಾಗಿ ತಿಳಿಸಿದೆ. ಈ ರೈಲುಗಳ ಸಂಚಾರ ದಿನಾಂಕ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.

* ಮಚಲಿಪಟ್ಟಣಂ-ಶಿವಮೊಗ್ಗ ವಿಶೇಷ ರೈಲು (07217/07218)

ಮಚಿಲಿಪಟ್ಟಣಂ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ವಿಶೇಷ ರೈಲು (07217) ಇದೇ ಭಾನುವಾರ ಆಗಸ್ಟ್ 30 ರಂದು 15:55 ಗಂಟೆಗೆ ಮಚಲಿಪಟ್ಟಣದಿಂದ ಹೊರಡಲಿದೆ. ಮಾರನೇ ದಿನ ಸೋಮವಾರ ಆಗಸ್ಟ್ 31ರಂದು 15:00 ಗಂಟೆಗೆ ಶಿವಮೊಗ್ಗ ಟೌನ್‌ಗೆ ಆಗಮಿಸಲಿದೆ.

Shivamogga Special Trains Machilipatnam Guntakal Services Announced What Timing and Dates Schedule

ಇನ್ನೂ ಮರಳಿ ಅದೇ ದಿಕ್ಕಿನಲ್ಲಿ ಶಿವಮೊಗ್ಗ ಟೌನ್-ಮಚಿಲಿಪಟ್ಟಣಂ ಎಕ್ಸ್‌ಪ್ರೆಸ್ ವಿಶೇಷ ರೈಲು (07218) ಮಚಲಿಪಟ್ಟಣಂ ಎಕ್ಸ್‌ಪ್ರೆಸ್ ವಿಶೇಷ ರೈಲು ಶಿವಮೊಗ್ಗ ಪಟ್ಟಣದಿಂದ ಬುಧವಾರ ಸೆಪ್ಟಂಬರ್ 02 ರಂದು 17:40 ಗಂಟೆಗೆ ಸಂಚಾರ ಆರಂಭಿಸುತ್ತದೆ. ಈ ರೈಲು ಮರುದಿನ (ಸೆ.03) ರಂದು 15:55 ಗಂಟೆಗೆ ಮಚಲಿಪಟ್ಟಣ ನಿಲ್ದಾಣ ತಲುಪುತ್ತದೆ.

ರೈಲು ನಿಲುಗಡೆ ನಿಲ್ದಾಣಗಳು ಯಾವುವು?

ಈ ರೈಲು ಎರಡು ದಿಕ್ಕಿನಲ್ಲಿ ಗುಡಿವಾಡ ಜಂಕ್ಷನ್, ವಿಜಯವಾಡ ಜಂಕ್ಷನ್ ಕೃಷ್ಣಾ ಕಾಲುವೆ ಜಂಕ್ಷನ್, ಗುಂಟೂರು ಜಂಕ್ಷನ್, ನರಸರಾವ್ ಪೇಟೆ, ಡೊಣಕೊಂಡ, ಮಾರ್ಕಾಪುರ ರಸ್ತೆ, ಕಂಬಂ, ಗಿದ್ದಲೂರು, ನಂದ್ಯಾಲ ಜಂ., ಬೇತಂಚೆರ್ಲಾ, ಧೋನೆ ಜಂಕ್ಷನ್, ಗೂಟಿ ಜಂಕ್ಷನ್, ಅನಂತಪುರ, ಹಿಂದೂಪುರ, ಯಲಹಂಕ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ ಮತ್ತು ಭದ್ರಾವತಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

* ಶಿವಮೊಗ್ಗ ಟೌನ್-ಗುಂತಕಲ್ ವಿಶೇಷ ರೈಲು (07219/07220)

ಶಿವಮೊಗ್ಗ ಟೌನ್-ಗುಂತಕಲ್ ಎಕ್ಸ್‌ಪ್ರೆಸ್ ವಿಶೇಷ ರೈಲು (07219) ಆಗಸ್ಟ್ 31ರಂದು ಸೋಮವಾರ ಸಂಜೆ 5:40 ಕ್ಕೆ ಶಿವಮೊಗ್ಗ ಟೌನ್‌ ನಿಂದ ಹೊರಡುತ್ತದೆ. ಮಂಗಳವಾರ ಸೆಪ್ಟಂಬರ್ 01 ರಂದು ಬೆಳಗ್ಗೆ 07ಕ್ಕೆ ಗುಂತಕಲ್ ನಿಲ್ದಾಣ ತಲುಪುತ್ತದೆ.

ಇನ್ನು ಮರಳಿ ಅದೇ ದಿಕ್ಕಿನಲ್ಲಿ ಗುಂತಕಲ್-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ವಿಶೇಷ ರೈಲು (07220) ಗುಂತಕಲ್ ನಿಲ್ದಾಣದಿಂದ ಬುಧವಾರ ಸೆಪ್ಟಂಬರ್ 02 ರಂದು ಮಧ್ಯಾಹ್ನ 01:45 ಕ್ಕೆ ಸಂಚಾರ ಆರಂಭಿಸುತ್ತದೆ. ಅದೇ ದಿನ ಮಧ್ಯಾಹ್ನ 3ಗಂಟೆಗೆ ಶಿವಮೊಗ್ಗ ಪಟ್ಟಣ ತಲುಪಲಿದೆ.

ನಿಲುಗಡೆ ನಿಲ್ದಾಣಗಳು ಯಾವುವು?

ಈ ರೈಲು ಎರಡು ಮಾರ್ಗದಲ್ಲಿ ಭದ್ರಾವತಿ, ತರೀಕೆರೆ, ಬೀರೂರು ಜಂಕ್ಷನ್, ಅರಸೀಕೆರೆ ಜಂಕ್ಷನ್, ತಿಪಟೂರು, ತುಮಕೂರು, ಯಲಹಂಕ, ಹಿಂದೂಪುರ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮಾವರಂ ಜಂಕ್ಷನ್, ಅನಂತಪುರ ಮತ್ತು ಗೂಟಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ. ಈ ಮೇಲಿನ ರೈಲುಗಳು ಎರಡು ದಿಕ್ಕಿನಲ್ಲಿ ತಲಾ ಒಂದೊಂದು ಟ್ರಿಪ್ ಸೇವೆ ನೀಡಲಿವೆ.

ಈ ವಿಶೇಷ ರೈಲುಗಳು 1 ಎಸಿ ಒನ್ ಟೈರ್, 1 ಎಸಿ 2-ಟೈರ್ ಕೋಚ್, 2 ಎಸಿ 3-ಟೈರ್ ಕೋಚ್‌ಗಳು, 9 ಸ್ಲೀಪರ್ ಕ್ಲಾಸ್ ಕೋಚ್‌ಗಳು, 5 ಜನರಲ್ ಕೋಚ್‌ಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿ ಸೇರಿ ಒಟ್ಟು 20 ಬೋಗಿ ಹೊಂದಿರುತ್ತವೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+